ದಾವಣಗೆರೆ: ಹುಲಿ ಉಗುರು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ 7 ಜನ ಅರೆಸ್ಟ್

ದಾವಣಗೆರೆ ಸಿಇಎನ್ ಠಾಣೆಯ‌ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಬಸವೇಶ್ವರ ನಗರದ ಮನೆಯೊಂದರ ಮೇಲೆ ದಾಳಿ ಮಾಡಿ 7 ಆರೋಪಿಗಳನ್ನು ಬಂಧಿಸಿದ್ದಾರೆ. 49 ಗ್ರಾಂ ಮಾದಕ ವಸ್ತು ಹಾಗೂ ಹುಲಿಯ ಆರು ಉಗುರು, ನಾಲ್ಕು ಮೊಬೈಲ್ ಹಾಗೂ ಒಂದು ಕಾರ್ ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ: ಹುಲಿ ಉಗುರು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ 7 ಜನ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಆಯೇಷಾ ಬಾನು

Updated on: Dec 09, 2023 | 8:43 AM

ದಾವಣಗೆರೆ, ಡಿ.09: ಸಿಇಎನ್ ಠಾಣೆಯ‌ ಪೊಲೀಸರು (Davanagere CEN Police) ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಹಾಗೂ ಹುಲಿ ಉಗುರು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಎಳು ಜನರನ್ನು ಬಂಧಿಸಿದ್ದಾರೆ. ಮಾದಕ ವಸ್ತು, ಹುಲಿ ಉಗುರು ಹಾಗೂ ಕೃತ್ಯಕ್ಕೆ ಬಳಸಿದ ಕಾರ್ ವಶಕ್ಕೆ ಪಡೆಯಲಾಗಿದೆ. ರಮೇಶ್ ಕುಮಾರ(40), ಎಂ.ಪಿ.ಲೋಕೇಶ್ (41), ಕಾರ್ತೀಕ (32) ರಾಮ್ ರತನ್ (30), ಸುನೀಲ ಕುಮಾರ್ (40), ಅಶೋಕ ಕುಮಾರ (50) ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ಪೊಲೀಸರು ಬೆಂಗಳೂರಿನ ಬಸವೇಶ್ವರ ನಗರದ ಮನೆಯೊಂದರ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. 49 ಗ್ರಾಂ ಮಾದಕ ವಸ್ತು ಹಾಗೂ ಹುಲಿಯ ಆರು ಉಗುರು, ನಾಲ್ಕು ಮೊಬೈಲ್ ಹಾಗೂ ಒಂದು ಕಾರ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ದಾವಣಗೆರೆ ನಗರದ ಆರ್ ಎಂಸಿ ಲಿಂಕ್ ರಸ್ತೆ, ವಿನೋಬನಗರ ಹಾಗೂ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಸವಿದ್ದರು. ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೇಕ್ಟೆರ್ ಪ್ರಸಾದ ನೇತ್ರತ್ವದಲ್ಲಿ ದಾಳಿ ನಡೆದಿದ್ದು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಗೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತ ಪಡಿಸಿದರು.

ಇದನ್ನೂ ಓದಿ: ಕೊಪ್ಪಳದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ; ಆಹಾರ ಇಲಾಖೆಯ ಅಧಿಕಾರಿಗಳಿಂದ ದಾಳಿ

ಲಂಚ ಪಡೆದ ಕಾನ್ಸ್ ಸ್ಟೆಬಲ್ ಅಮಾನತು

ಆರೋಪಿಯಿಂದ ಲಂಚ ಪಡೆದ ಕಾನ್ಸ್ ಸ್ಟೆಬಲ್ ನನ್ನ ಎಸ್ಪಿ ಉಮಾ ಪ್ರಶಾಂತ್ ಅಮಾನತ್ತು ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದ ನಗರ ಠಾಣೆಯ‌ ಪೊಲೀಸ್ ಕಾನ್ಸ್ ಸ್ಟೆಬಲ್ ಮಂಜುನಾಥ ಬಿ.ವಿ. ಲಂಚ ಸ್ವೀಕರಿಸಿ ಅಮಾನತ್ತು‌ ಆಗಿದ್ದಾರೆ.  ಪೋಕ್ಸೊ ಪ್ರಕರಣವೊಂದರಲ್ಲಿ ಓರ್ವ ಆರೋಪಿಯನ್ನ ಠಾಣೆಗೆ ಕರೆತಂದು ನಿನ್ನ ಮೇಲೆ ಇನ್ನಷ್ಟು ಕೇಸ್ ಜಡಿಯುತ್ತೇನೆಂದು ಬೆದರಿಸಿ ಕಾನ್ಸ್ ಸ್ಟೆಬಲ್ ಮಂಜುನಾಥ ಅವರು 12 ಸಾವಿರ ರೂಪಾಯಿ ಲಂಚ ‌ಪಡೆದಿದ್ದರು. ನಂತರ ಆರೋಪಿಯ ಮೊಬೈಲ್ ಪಡೆದು ಆತನ ಗೂಗಲ್ ಪೇ ಪಿನ್ ಪಡೆದು ಆರೋಪಿ ಖಾತೆಯಲ್ಲಿದ್ದ. 25 ಸಾವಿರ ರೂಪಾಯಿ ತನ್ನ ಖಾತೆಗೆ ಹಾಕಿಕೊಂಡಿದ್ದರು. ಆರೋಪಿ ಸಹೋದರನ ದೂರಿನ ಹಿನ್ನೆಲೆಹರಿಹರ ಠಾಣೆಯ ಇನ್ ಸ್ಪೆಕ್ಟರ್ ದೇವಾನಂದ ಅವರು ಎಸ್ಪಿಗೆ ವರದಿ ನೀಡಿದ್ದು ಸದ್ಯ ಕಾನ್ಸ್ ಸ್ಟೆಬಲ್ ಮಂಜುನಾಥ ಅವರನ್ನು ಅಮಾನತು ಮಾಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ