ದಾವಣಗೆರೆ: ಹೈಡೋಸ್ ಇಂಜೆಕ್ಷನ್ ನೀಡಿ ಪತ್ನಿಯನ್ನೇ ಕೊಂದ ವೈದ್ಯ; 9 ತಿಂಗಳ ಬಳಿಕ ಸತ್ಯ ಬಯಲು
ಡಾ. ಚನ್ನೇಶಪ್ಪ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗದೆ ಮನೆಗೆ ತಂದಿದ್ದ. ಅಲ್ಲದೇ ಶಿಲ್ಪಾಳ ಎಡ ಭುಜದ ಮೇಲೆ ಸೂಜಿಯಿಂದ ಚುಚ್ಚಿದ ಗುರುತುಗಳು, ಬಾಯಿಂದ ರಕ್ತ ಮಿಶ್ರಿತ ನೊರೆ ಬಂದಿದ್ದರಿಂದ ಅನುಮಾನಗೊಂಡಿದ್ದ ಪೋಷಕರು, ನ್ಯಾಮತಿ ಠಾಣೆಯಲ್ಲಿ ಡಾ.ಚನ್ನೇಶಪ್ಪ ವಿರುದ್ಧ ದೂರು ದಾಖಲಿಸಿದ್ದರು.
ದಾವಣಗೆರೆ: ಕಳೆದ 9 ತಿಂಗಳ ಹಿಂದೆ ಗೃಹಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ವೈದ್ಯ ಪತಿಯೇ ಹೈಡೋಸ್ ಇಂಜೆಕ್ಷನ್ ನೀಡಿ ಪತ್ನಿ ಹತ್ಯೆಗೈದಿರುವ ಸತ್ಯ ಬೆಳಕಿಗೆ ಬಂದಿದೆ. ಫೆಬ್ರವರಿ 11ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಶಿಲ್ಪಾ(36)ಳನ್ನು ಪತಿಯೇ ಕೊಲೆ ಮಾಡಿದ್ದಾನೆ.
ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಶಿಲ್ಪ ಎಂಬುವವರನ್ನು ಮದುವೆ ಮಾಡಿಕೊಂಡಿದ್ದ ಡಾ. ಚನ್ನೇಶಪ್ಪ, ರಾಮೇಶ್ವರ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ಡಾ.ಚನ್ನೇಶಪ್ಪ ಕುಡಿತ ಮತ್ತು ಜೂಜಿನ ದಾಸನಾಗಿದ್ದು, ವೈದ್ಯನಾಗಿ ವಾಮಾಚಾರದಲ್ಲಿಯೂ ನಂಬಿಕೆ ಹೊಂದಿದ್ದ.
ಪತ್ನಿಯನ್ನು ಕೊಲೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದ ಡಾ. ಚನ್ನೇಶಪ್ಪ, ಕಳೆದ ಫೆಬ್ರುವರಿ 11ಕ್ಕೆ ಶಿಲ್ಪಾಗೆ ಲೋ ಬಿಪಿಯಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದ್ದ. ಇದಾದ ಬಳಿಕ ಮಾರ್ಗ ಮಧ್ಯೆ ನಿಮ್ಮ ಮಗಳು ತೀರಿಕೊಂಡಿದ್ದಾಳೆ ಎಂದು ಶಿಲ್ಪಾ ಪೋಷಕರಿಗೆ ತಿಳಿಸಿದ್ದಾನೆ.
ಡಾ. ಚನ್ನೇಶಪ್ಪ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗದೆ ಮನೆಗೆ ತಂದಿದ್ದ. ಅಲ್ಲದೇ ಶಿಲ್ಪಾಳ ಎಡ ಭುಜದ ಮೇಲೆ ಸೂಜಿಯಿಂದ ಚುಚ್ಚಿದ ಗುರುತುಗಳು, ಬಾಯಿಂದ ರಕ್ತ ಮಿಶ್ರಿತ ನೊರೆ ಬಂದಿದ್ದರಿಂದ ಅನುಮಾನಗೊಂಡಿದ್ದ ಪೋಷಕರು, ನ್ಯಾಮತಿ ಠಾಣೆಯಲ್ಲಿ ಡಾ.ಚನ್ನೇಶಪ್ಪ ವಿರುದ್ಧ ದೂರು ದಾಖಲಿಸಿದ್ದರು.
ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರುತ್ತಲೇ ದೇಹದಲ್ಲಿನ ಗುರುತುಗಳ ಬಗ್ಗೆ ಎಫ್ಎಸ್ಎಲ್ಗೂ ಕಳಿಸಿದ್ದ ಪೊಲೀಸರು.ಇವೆರಡೂ ವರದಿ ಮ್ಯಾಚ್ ಆಗಿದ್ದ ಕಾರಣ ಇದು ಕೊಲೆ ಪ್ರಕರಣ ಎಂಬುವುದು ಬೆಳಕಿಗೆ ಬಂದಿದೆ. ಜೀವ ಉಳಿಸಬೇಕಾದ ವೈದ್ಯನೇ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದು ಎಫ್ಎಸ್ಎಲ್ ವರದಿಯಿಂದ ಪತ್ತೆಯಾಗಿದೆ.
ಇದನ್ನೂ ಓದಿ: ಹಳೇ ದ್ವೇಷ ಹಿನ್ನೆಲೆ ಗ್ಯಾಂಗ್ ವಾರ್; ಓರ್ವನ ಕೊಲೆ, ಇಬ್ಬರ ಸ್ಥಿತಿ ಗಂಭೀರ
ಅನ್ನಪೂರ್ಣೇಶ್ವರಿ ನಗರದಲ್ಲಿ ಪತ್ನಿ ಕೊಲೆ ಪ್ರಕರಣ; ಸಿನಿಮೀಯ ಶೈಲಿಯಲ್ಲಿ ನಡೆದಿತ್ತು ಮರ್ಡರ್ ಸ್ಕೆಚ್
Published On - 1:20 pm, Sun, 24 October 21