AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶ ಕಾಯುವ ಕೆಲಸಕ್ಕೆ ಗುಡ್​ ಬೈ ಹೇಳಿ, ಪುಟ್ಟ ಮಗನ ಉಳಿಸಿಕೊಳ್ಳಲು ಹಗಲುರಾತ್ರಿ ದುಡಿಯುತ್ತಿರುವ ಅಪ್ಪ: ದಾನಿಗಳು ನೆರವಾಗಬಹುದಾ?

Thalassemia: ಇದಕ್ಕಾಗಿ ಹತ್ತಾರು ಕಡೆ ಸುತ್ತಿದ್ದಾರೆ. ವೈದ್ಯರ ಸಲಹೆ ಕೇಳಿದ್ದಾರೆ. ಈ ಕಾಯಿಲೆ ವಾಸಿಯಾಗಬೇಕಾದ್ರೆ ಬೋನ್ ಮ್ಯಾರೋ ಮಾಡಿಸಬೇಕಂತೆ. ಇದಕ್ಕಾಗಿ 40 ಲಕ್ಷ ಹಣ ಬೇಕಾಗಿದೆ.

ದೇಶ ಕಾಯುವ ಕೆಲಸಕ್ಕೆ ಗುಡ್​ ಬೈ ಹೇಳಿ, ಪುಟ್ಟ ಮಗನ ಉಳಿಸಿಕೊಳ್ಳಲು ಹಗಲುರಾತ್ರಿ ದುಡಿಯುತ್ತಿರುವ ಅಪ್ಪ: ದಾನಿಗಳು ನೆರವಾಗಬಹುದಾ?
ದೇಶ ಕಾಯುವ ಕೆಲಸಕ್ಕೆ ಗುಡ್​ ಬೈ ಹೇಳಿ, ಪುಟ್ಟ ಮಗನ ಉಳಿಸಿಕೊಳ್ಳಲು ಹಗಲುರಾತ್ರಿ ದುಡಿಯುತ್ತಿರುವ ಅಪ್ಪ
TV9 Web
| Updated By: ಸಾಧು ಶ್ರೀನಾಥ್​|

Updated on: Feb 21, 2023 | 10:12 AM

Share

ಆತ ಹತ್ತಾರು ವರ್ಷ ದೇಶ ಕಾಯುವ ಕೆಲ್ಸ ಮಾಡಿದ (soldier). ದೇಶದ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೇ ದುಡಿದ. ಹೀಗೆ ದೇಶ ಸೇವೆ ಮಾಡುತ್ತಿದ್ದಾಗಲೇ ತನ್ನ ಮಗ ಇದ್ದಕ್ಕಿದ್ದಂತೆ ಸುಸ್ತಾಗಿ ಬಿಳುತ್ತಿದ್ದ. ಒಂದು ತಿಂಗಳಿಗೊಮ್ಮೆ ಆತನಿಗೆ ಅನ್ನ ನೀರಿನ ಬದಲು ರಕ್ತವನ್ನ ಕೊಡಬೇಕಿತ್ತು. ಅಪ್ಪನಾಗಿ (father) ಮಗನ ಕಷ್ಟ ನೋಡಲಾಗದ ಸೈನಿಕ ಇದ್ದೊಬ್ಬ ಮಗನ (son) ಉಳಿಸಿಕೊಳ್ಳಲು ಸೇನೆಯ ಸೇವೆ ಬಿಟ್ಟು 10 ವರ್ಷಗಳಿಂದ ಸುತ್ತುತ್ತಿದ್ದಾರೆ. ಇಲ್ಲಿದೆ ನೋಡಿ ಥಲೆಸೀಮಿಯಾ (Thalassemia) ಟಾರ್ಚರ್ ಸ್ಟೋರಿ. ಈತನಿಗೆ 10 ವರ್ಷ ವಯಸ್ಸು. ಹೆಸರು ಕೃಷ್ಣ. ನೋಡಲು ನಾರ್ಮಲ್. ದಾವಣಗೆರೆ (Davangere) ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ಈಗ ಐದನೇ ತರಗತಿ ಓದುತ್ತಿದ್ದಾನೆ. ತಿಂಗಳ ಅಂತ್ಯಕ್ಕೆ ಈತನಿಗೆ ಎದ್ದು ತಿರುಗಾಡಲು ಆಗೋಲ್ಲ, ಸುಸ್ತಾಗುತ್ತಾನೆ. ಮಾತು ಬರಲ್ಲ. ಮನೆ ಬಿಟ್ಟು ಹೊರಗೆ ಹೋಗದ ಸ್ಥಿತಿಗೆ ಬರುತ್ತಾನೆ. ಆಗ ತಂದೆ ತಾಯಿಯ ಚಡಪಡಿಕೆ ಶುರುವಾಗುತ್ತದೆ. ಕಾರಣ ತಿಂಗಳಾಂತ್ಯಕ್ಕೆ ಈತನಿಗೆ ರಕ್ತ ಹಾಕಿಸುವುದು ಕಡ್ಡಾಯ. ಕಾರಣ ಈತನಿಗೊಂದು ಥಲೆಸೀಮಿಯಾ ಎಂಬ ವಿಚಿತ್ರ ಕಾಯಿಲೆ ಅಂಟಿಕೊಂಡಿದೆ. ಅಂದ್ರೆ ಈತನ ಶರೀರದಲ್ಲಿ ರಕ್ತ ಉತ್ಪಾದನೆ ಆಗಲ್ಲ. ಕೆಲ ಗ್ರಂಥಿಗಳ ಕಾರಣಕ್ಕೆ ಸಾವಿರಾರು ಜನರಲ್ಲಿ ಒಬ್ಬರಿಗೆ ಬರುವ ಈ ಕಾಯಿಲೆ ಬರುತ್ತದೆ.

ಇಂತಹ ಅಪರೂಪದ ಕಾಯಿಲೆ ಈ ಅಮಾಯಕ ಕೃಷ್ಣನಿಗೆ ಅಂಟಿಕೊಂಡಿದೆ. ಇವರ ಸಂತೋಷ ಕುಮಾರ ಶಾಬಣ್ಣವರ ಅಂತ. ಭಾರತೀಯ ಸೇನೆಯಲ್ಲಿದ್ದರು. ಈತ ಹುಟ್ಟಿದ ಆರು ತಿಂಗಳಲ್ಲಿಯೇ ಇಂತಹ ಕಾಯಿಲೆ ಇದೆ ಎಂಬುದು ಗೊತ್ತಾಗಿದೆ. ಅಷ್ಟರಲ್ಲಿಯೇ 12 ವರ್ಷ ಸೇವೆ ಸಲ್ಲಿಸಿದ ಸಂತೋಷ ಸೇನೆ ರಾಜೀನಾಮೆ ನೀಡಿ ಪುತ್ರನಿಗೆ ಚಿಕಿತ್ಸೆ ಕೊಡಿಸಲು ಹೋರಾಟ ಶುರು ಮಾಡಿದ್ದಾರೆ. ಇದಕ್ಕೆ ಬರೋಬ್ಬರಿ 40 ಲಕ್ಷ ರೂಪಾಯಿ ವೆಚ್ಚ ಬರುತ್ತದೆಯಂತೆ. ಆರ್ಥಿಕ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಇದಕ್ಕಾಗಿ ಹತ್ತಾರು ಕಡೆ ಸುತ್ತಿದ್ದಾರೆ. ವೈದ್ಯರ ಸಲಹೆ ಕೇಳಿದ್ದಾರೆ. ಇಷ್ಟು ದಿನ ಯಾವುದೇ ವ್ಯಕ್ತಿಗಳ ರಕ್ತದ ಮಾದರಿ ಕೃಷ್ಣಗೆ ಹೊಂದಾಣಿಕೆ ಆಗಿರಲಿಲ್ಲ. ಆದ್ರೆ ಇತ್ತೀಚಿಗೆ ಸಂತೋಷ- ಚೇತನಾ ದಂಪತಿಗೆ ಓರ್ವ ಪುತ್ರಿ ಇದ್ದಾಳೆ. ಇವಳ ರಕ್ತದ ಮಾದರಿ ಹೊಂದಾಣಿಕೆ ಆಗಿದೆ. ಈ ಕಾಯಿಲೆ ವಾಸಿಯಾಗಬೇಕಾದ್ರೆ ಬೋನ್ ಮ್ಯಾರೋ ಮಾಡಿಸಬೇಕಂತೆ. ಇದಕ್ಕಾಗಿಯೇ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಇಂತಹ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ 40 ಲಕ್ಷ ಹಣಬೇಕಾಗಿದೆ.

ಹೀಗೆ ಸಮಾಜ ಹಾಗೂ ಸರ್ಕಾರ ತಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತದೆ ಎಂಬ ನಿರೀಕ್ಷೆಯಲ್ಲಿ ಪತಿ-ಪತ್ನಿ ಪುತ್ರನನ್ನ ಕರೆದುಕೊಂಡು ಅಲೆದಾಡುತ್ತಿದ್ದಾರೆ. ಸ್ಥಳೀಯ ಶಾಸಕ ಸಹಾಯದಿಂದ ಸಿಎಂ ಪರಿಹಾರ ನಿಧಿಗೆ ಮನವಿ ಸಲ್ಲಿಸುವ ಯೋಜನೆ ಸಹ ಇದೆ. ಆದ್ರೆ 40 ಲಕ್ಷ ರೂಪಾಯಿ ಹೊಂದಿಸುವುದು ಕಷ್ಟದ ಕೆಲ್ಸವಾಗಿದೆ. ಮೇಲಾಗಿ ಸೇನೆಗೆ ರಾಜೀನಾಮೆ ನೀಡಿದ ಬಳಿಕ ಬಂದ ಅಲ್ಪ ಸ್ವಲ್ಪ ಹಣದಲ್ಲಿ ಪುತ್ರನಿಗೆ ಚಿಕಿತ್ಸೆ ಕೊಡಿಸುವುದು ಕಷ್ಟವಾಗಿದೆ. ಗ್ರಾಮದಲ್ಲಿ ಒಂದು ಸಣ್ಣ ಬೇಕರಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪುತ್ರನನ್ನ ಉಳಿಸಿಕೊಳ್ಳಲು ಹೋರಾಟ ಆರಂಭಿಸಿದ್ದಾರೆ. ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಸಂತೋಷಕುಮಾರ- 8151874714 Master Kroshna S.S Karnataka Bank Ukkadagatri, Harihar Taluk Davanagere Dist Account No- 8162500100346501 IFSC- KARB0000816

(ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ)

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ