AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿಗಿಂತ ನೀತಿ ದೊಡ್ಡದು -ಕಾರ್ಣಿಕ ಭವಿಷ್ಯ ನುಡಿಯುವ ಶೋಷಿತ ಸಮಾಜದ ಈ ಸ್ವಾಮೀಜಿಯ ಸಮಾಜಸೇವೆ ವಿವರ ಹೀಗಿದೆ

ಗ್ರಾಮೀಣ ಪ್ರದೇಶದಲ್ಲಿ ಜಾತಿ ಜಾತಿಗಳ ನಡುವೆ ಸಹ ಬಾಳ್ವೆ ಇನ್ನೂ ಜೀವಂತ ಇದೆ ಎನ್ನುವುದಕ್ಕೆ ಕೆಂಗಾಪುರ ರಾಮಲಿಂಗೇಶ್ವರ ಕ್ಷೇತ್ರ ಸಾಕ್ಷಿ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತರು ಇಲ್ಲಿ ಬಂದು 3 ದಿನ ಕಾಲ ಠಿಕಾಣಿ ಹಾಕುತ್ತಾರೆ.

ಜಾತಿಗಿಂತ ನೀತಿ ದೊಡ್ಡದು -ಕಾರ್ಣಿಕ ಭವಿಷ್ಯ ನುಡಿಯುವ ಶೋಷಿತ ಸಮಾಜದ ಈ ಸ್ವಾಮೀಜಿಯ ಸಮಾಜಸೇವೆ ವಿವರ ಹೀಗಿದೆ
ಕಾರ್ಣಿಕ ಭವಿಷ್ಯ ನುಡಿಯುವ ಶೋಷಿತ ಸಮಾಜದ ಈ ಸ್ವಾಮೀಜಿಯ ಸಮಾಜಸೇವೆ ವಿವರ
TV9 Web
| Updated By: ಸಾಧು ಶ್ರೀನಾಥ್​|

Updated on: Feb 20, 2023 | 1:15 PM

Share

ಈಗ ಎಲ್ಲಿ ನೋಡಿದರಲ್ಲಿ ಜಾತಿ ಜಾತಿ ಅಂತಾ ಕಿತ್ತಾಡುವುದೇ ಜಾಸ್ತಿ. ಕಾರಣ ಜಾತಿ ಅಷ್ಟೊಂದು ಬಲಿಷ್ಠವಾಗಿದೆ. ಆದ್ರೆ ಇದಕ್ಕೊಂದು ಅಪವಾದ ಎನ್ನುವ ಸ್ಥಳವೊಂದಿದೆ. ಇವರನ್ನ ಎಲ್ಲ ಜನಾಂಗ ಜನರು ಹೆಗಲ ಮೇಲೆ ಹೊತ್ತುಕೊಂಡು ಉತ್ಸವ ನಡೆಸುತ್ತಾರೆ. ಅದೇ ರೀತಿ ಸ್ವಾಮೀಜಿಯೂ ಸಹ ಆ ಭಾಗದ ಜನರ ಜೀವನಮಟ್ಟ ಸುಧಾರಣೆ ನಾನಾ ಕೆಲ್ಸಾ ಕೂಡಾ ಮಾಡಿದ್ದಾರೆ. ಈ ಸ್ವಾಮೀಜಿ ಪ್ರಸಿದ್ಧಿ ಆಗಿದ್ದೇ ಮುಳ್ಳು ಗದ್ದಿಗೆಯಿಂದ. ಈ ವೇಳೆ ನುಡಿದ ಅಂತರಂಗದ ಹಕ್ಕಿ ಹಾರಿತಲೋ ಎಂದು ಹೇಳಿ ಮುಂದೆ ಆಪತ್ತು ಕಾದಿದೆ ಎಂಬ ಕಾರ್ಣಿಕ ಭವಿಷ್ಯ ಸ್ಪಷ್ಟವಾಗಿದೆ (Karnika). ಇಲ್ಲಿದೆ ನೋಡಿ ಮುಳ್ಳು ಗದ್ದಿಗೆ ಮಹಿಮೆ ಸ್ಟೋರಿ. ಇದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ- ಕೆಂಗಾಪುರ ರಾಮಲಿಂಗೇಶ್ವರ ಕ್ಷೇತ್ರ (Harapanahalli, Mullu Gaddige). ಇದೊಂದು ಸರ್ವ ಜನಾಂಗದ ಸಮನ್ವಯ ಕೇಂದ್ರ ಅಂತಲೇ ಪ್ರಸಿದ್ಧಿ. ಪ್ರತಿ ವರ್ಷ ಇಲ್ಲಿ ರಾಮಲಿಂಗೇಶ್ವರ ಸ್ವಾಮೀಜಿ ಉತ್ಸವ ನಡೆಯುತ್ತದೆ. ಇದರ ಆಕರ್ಷಣೆ ಅಂದ್ರೆ ರಾಮಲಿಂಗೇಶ್ವರ ಸ್ವಾಮೀಜಿ ಮೆರವಣಿಗೆ. ಶತಮಾನಗಳಿಂದ ನಡೆದುಕೊಂಡು ಬಂದ ಉತ್ಸವ ಸಮಾನತೆಗೆ ಇನ್ನೊಂದು ಹೆಸರು. ಸ್ವಾಮೀಜಿ ಶೋಷಿತ ಸಮಾಜದಿಂದ ಬಂದವರು (Astrology).

ಇಂತಹ ಸ್ವಾಮೀಜಿಯನ್ನೆ ತಮ್ಮಗುರು ಎಂದು ಒಪ್ಪಿಕೊಂಡಿದ್ದಾರೆ ಪ್ರತಿಯೊಂದು ಜಾತಿ ಜನಾಂಗದ ಜನ. ಹೀಗಾಗಿ ಉತ್ಸವದಲ್ಲಿ ವೇದಿಕೆ ಮಾಡಿ ಬಹುತೇಕ ಮೇಲ್ಜಾತಿಯ ಜನರೆ ಸ್ವಾಮೀಜಿಯ ಉತ್ಸವ ಮಂಟಪವನ್ನ ಹೆಗಲ ಮೇಲೆ ಹೊತ್ತು ಕೊಂಡು ಹೋಗುತ್ತಾರೆ. ಇದರ ಜೊತೆಗೆ ಮುಳ್ಳು ಗದ್ದೆಗೆ ಉತ್ಸವ ಸಹ ನಡೆಯುತ್ತದೆ. ಈ ಸಲ ಮುಳ್ಳುಗದ್ದಿಗೆ ಕಾರ್ಣಿಕ ಸ್ವಲ್ಪ ಆತಂಕ ಹುಟ್ಟಿಸುವಂತಹದ್ದೆ ಆಗಿದೆ.

ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು ಉಪರ್ಯಾವೋ ಅಂತರಂಗದ ಹಕ್ಕಿ ಹಾರಿ ಹೋದಿತೋ ಎಂಬ ವಾಣಿ ಆಗಿತ್ತು. ಇದರಲ್ಲಿ ಗಗನದಿಂದ ಮುತ್ತು ಉದುರುವುದು ಶುಭವಾದ್ರೆ ಉಳಿದಿದ್ದು ಮಾತ್ರ ಆಪತ್ತು ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಇಂತಹ ಸಂಪ್ರದಾಯದ ಜೊತೆಗೆ ಸ್ವಾಮೀಜಿ ಶಿಕ್ಷಣ ಸಂಸ್ಥೆ, ಗ್ರಾಮೀಣ ಜನತೆ ಅಕ್ಷರದ ಅರಿವು ಕಾರ್ಯಕ್ರಮ ನಡೆಸುತ್ತಲೇ ಬಂದಿದ್ದಾರೆ.

ಬೆಳಿಗ್ಗೆ ಐದು ಗಂಟೆಗ ದೇವರು ಹೊಳೆ ಪೂಜೆ ಮುಗಿಸಿಕೊಂಡು, ನಂತರ ಆರು ಗಂಟೆಯಿಂದ ಮುಳ್ಳು ಗದ್ದಿಗೆ ಶುರುವಾಗುತ್ತದೆ. ಪುಣ್ಯ ಕ್ಷೇತ್ರದಿಂದ ಮುಳ್ಳುಗದ್ದಿಗೆ ಕೆಂಗಾಪುರ ಗ್ರಾಮದ ವರೆಗೆ ಹೋಗುತ್ತದೆ. ಹೀಗೆ ಹೋಗುವಾಗ ಹತ್ತಾರು ಸಲ ಸ್ವಾಮೀಜಿ ಹಸಿ ಜಾಲಿ ಮುಳ್ಳಿನಿಂದ ಮಾಡಿದ ಗದ್ದೆಗೆ ಮೇಲೆ ಜೋರಾಗಿ ಜಿಗಿಯುವುದು ವಿಶೇಷ. ಬಹುತೇಕ ಕಡೆ ಮೇಲ್ವರ್ಗಕ್ಕೆ ಸೇರಿದ ಸ್ವಾಮೀಜಿಗಳು ಇರುತ್ತಾರೆ. ಎಲ್ಲ ವರ್ಗದ ಜನರು ಭಕ್ತರಿರುತ್ತಾರೆ. ಆದ್ರೆ ಇಲ್ಲಿ ಸ್ವಾಮೀಜಿ ಶೋಷಿತ ಸಮಾಜದಿಂದ ಬಂದಿದ್ದು, ಭಕ್ತರು ಬೇರೆ ಬೇರೆ ಸಮಾಜದಿಂದ ಬಂದವರಾಗಿದ್ದಾರೆ. ಹೀಗಾಗಿ ಜಾತಿಗಿಂತ ನೀತಿ ದೊಡ್ಡದು ಎಂಬ ಸಂಕಲ್ಪ ಇಲ್ಲಿನ ಜನರದ್ದು. ಸುಮಾರು ಮೂರು ಸಾವಿರ ಬಡ ಮಕ್ಕಳಿಗೆ ಸ್ವಾಮೀಜಿ ಅಕ್ಷರ ದಾಸೋಹ ನಡೆಸುತ್ತಾರೆ. ಜೊತೆಗೆ ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹ ನಡೆಸುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಜಾತಿ ಜಾತಿಗಳ ನಡುವೆ ಸಹ ಬಾಳ್ವೆ ಇನ್ನೂ ಜೀವಂತ ಇದೆ ಎನ್ನುವುದಕ್ಕೆ ಕೆಂಗಾಪುರ ರಾಮಲಿಂಗೇಶ್ವರ ಕ್ಷೇತ್ರ ಸಾಕ್ಷಿ ಅಂದರೆ ತಪ್ಪಾಗಲಿಕ್ಕಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತರು ಇಲ್ಲಿ ಬಂದು ಮೂರು ದಿನಗಳ ಕಾಲ ಠಿಕಾಣಿ ಹಾಕುತ್ತಾರೆ. ಹೀಗೆ ಮೂರು ದಿನಗಳ ಕಾಲ ನಡೆದ ಉತ್ಸವದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಸಂಭ್ರಮಿಸುತ್ತಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಮೇಲಾಗಿ ಈ ಸ್ವಾಮೀಜಿಗಳು ಸಂಸಾರಿಗಳಾಗಿದ್ದಾರೆ. ಅವರ ನುಡಿದ ಕಾರ್ಣಿಕ ಸುಳ್ಳಾದ ಇತಿಹಾಸವೇ ಇಲ್ಲಾ ಎಂದು ಇಲ್ಲಿನ ಭಕ್ತರ ನಂಬಿಕೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ