ಜೈ ಶ್ರೀರಾಮ್ ಎನ್ನುವ ಎಷ್ಟು ಜನ ರಾಮಾಯಣ ಓದಿದ್ದಾರೆ? ಜೈ ಶ್ರೀರಾಮ್ ಎನ್ನುವ ನಾಯಕರು ಕೂಡ ಹೆಂಡತಿಯನ್ನು ಬಿಟ್ಟಿದ್ದಾರೆ -ವಿ.ಎಸ್.ಉಗ್ರಪ್ಪ

ದಾವಣಗೆರೆಯ ಕಾರಿಗನೂರು ಗ್ರಾಮದಲ್ಲಿ ಮಾತನಾಡಿದ ವಿ.ಎಸ್.ಉಗ್ರಪ್ಪ, ಎರಡು ಗುಂಪುಗಳು ಇಂದಿನ ದಿನಮಾನಗಳಲ್ಲಿ ಕಾಣಬಹುದು. ಒಂದು ಜೈ ಶ್ರೀರಾಮ್ ಎನ್ನುವರು ಮತ್ತೊಂದು ಹೇ ರಾಮ್ ಎನ್ನುವರು. ನಾಥೂರಾಮ್ ಗೋಡ್ಸೆ ಸಂತತಿಯವರು ಜೈ ಶ್ರೀರಾಮ್ ಅಂತಾರೆ. ಸಂವಿಧಾನವನ್ನು ಗೌರವಿಸುವವರು ಹೇ ರಾಮ್ ಎನ್ನುತ್ತಾರೆ ಎಂದರು.

ಜೈ ಶ್ರೀರಾಮ್ ಎನ್ನುವ ಎಷ್ಟು ಜನ ರಾಮಾಯಣ ಓದಿದ್ದಾರೆ? ಜೈ ಶ್ರೀರಾಮ್ ಎನ್ನುವ ನಾಯಕರು ಕೂಡ ಹೆಂಡತಿಯನ್ನು ಬಿಟ್ಟಿದ್ದಾರೆ -ವಿ.ಎಸ್.ಉಗ್ರಪ್ಪ
ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ
TV9kannada Web Team

| Edited By: Ayesha Banu

Mar 13, 2022 | 6:20 PM

ದಾವಣಗೆರೆ: ಇಂದಿನ ದಿನಗಳಲ್ಲಿ ಎರಡು ಗುಂಪುಗಳನ್ನು ಕಾಣಬಹುದು. ಒಂದು ಜೈ ಶ್ರೀರಾಮ್ ಎನ್ನುವರು ಮತ್ತೊಂದು ಹೇ ರಾಮ್ ಎನ್ನುವರು. ನಾಥೂರಾಮ್ ಗೋಡ್ಸೆ ಸಂತತಿಯವರು ಜೈ ಶ್ರೀರಾಮ್ ಅಂತಾರೆ. ಸಂವಿಧಾನವನ್ನು ಗೌರವಿಸುವವರು ಹೇ ರಾಮ್ ಎನ್ನುತ್ತಾರೆ. ಜೈ ಶ್ರೀರಾಮ್ ಎನ್ನುವರು ಎಷ್ಟು ಜನ ರಾಮಾಯಣ ಓದಿದ್ದಾರೆ ಹೇಳಿ? ಜೈ ಶ್ರೀರಾಮ್ ಎನ್ನುವ ನಾಯಕರು ಕೂಡ ಹೆಂಡತಿಯನ್ನು ಬಿಟ್ಟಿದ್ದಾರೆ ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯ ಕಾರಿಗನೂರು ಗ್ರಾಮದಲ್ಲಿ ಮಾತನಾಡಿದ ವಿ.ಎಸ್.ಉಗ್ರಪ್ಪ, ಎರಡು ಗುಂಪುಗಳು ಇಂದಿನ ದಿನಮಾನಗಳಲ್ಲಿ ಕಾಣಬಹುದು. ಒಂದು ಜೈ ಶ್ರೀರಾಮ್ ಎನ್ನುವರು ಮತ್ತೊಂದು ಹೇ ರಾಮ್ ಎನ್ನುವರು. ನಾಥೂರಾಮ್ ಗೋಡ್ಸೆ ಸಂತತಿಯವರು ಜೈ ಶ್ರೀರಾಮ್ ಅಂತಾರೆ. ಸಂವಿಧಾನವನ್ನು ಗೌರವಿಸುವವರು ಹೇ ರಾಮ್ ಎನ್ನುತ್ತಾರೆ. ಜೈ ಶ್ರೀರಾಮ್ ಎನ್ನುವರು ಎಷ್ಟು ಜನ ರಾಮಾಯಣ ಓದಿದ್ದಾರೆ ಹೇಳಿ. ಜೈ ಶ್ರೀರಾಮ್ ಎನ್ನುವರ ನಾಯಕರು ಕೂಡ ಹೆಂಡತಿಯನ್ನು ಬಿಟ್ಟಿದ್ದಾರೆ. ಆಕೆ ಪ್ರತಿ ವರ್ಷ ನಮ್ಮ ಅಂಜಾನಾದ್ರಿ ಬೆಟ್ಟಕ್ಕೆ ಬಂದು ಪೂಜೆ ಮಾಡ್ತಾಳೆ. ಅವರು ಆಟೋದಲ್ಲಿ‌ ಮುಂದೆ ಹೋದರೆ ಹಿಂದೆ ಎಸ್ಪಿಜಿಯವರು ಭದ್ರತೆ ನೀಡಬೇಕಾದ ಪರಿಸ್ಥಿತಿ. ವಾಲ್ಮೀಕಿ ರಾಮಾಯಣವನ್ನು ಜೈ ಶ್ರೀರಾಮ್ ಎನ್ನುವರು ನಂಬುವುದಿಲ್ಲ. ತುಳಸಿದಾಸ್ ರಚಿತ ರಾಮಾಯಣವನ್ನು ಮಾತ್ರ ಅವರು ನಂಬುತ್ತಾರೆ. ವಾಲ್ಮೀಕಿ ಪರಿಶಿಷ್ಟ ಪಂಗಡ, ಜಾತಿಯ ವ್ಯಕ್ತಿಯಾದ್ದರಿಂದ ನಂಬುವುದಿಲ್ಲ. ರಾಮ ಸೀತೆ ಲಕ್ಷ್ಮಣ ಭರತ ಶತ್ರುಘ್ನ ಕೂಡ ನಾನ್ ವೆಜಿಟೇರಿಯನ್. ರಾಮಾಯಣದಲ್ಲಿ ಒಂದು ಸಾರಿ ಅಲ್ಲ ಹತ್ತು ಸಾರಿ ಬರೆದಿದ್ದಾರೆ. ಮಹರ್ಷಿ ಭಗವತ್ ಧ್ವಜರ ಮನೆಗೆ ಹೋದಾಗ ನಾನ್ ವೆಜ್ ಸಿದ್ದತೆ ಮಾಡಿದ್ದರು. ಜೈನ ಧರ್ಮ‌ ಬಾರದೇ ಇದ್ದಿದ್ದರೆ ಈ ದೇಶದ ಬಹುತೇಕ ಜನರು ನಾನ್ ವೆಜಿಟೇರಿಯನ್ ಜನರಾಗುತ್ತಿದ್ದರು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕುಟುಂಬ ಎಂದರೆ ಇಂದಿರಾ ಗಾಂಧಿ ಫ್ಯಾಮಿಲಿ ಇನ್ನು ರಾಜಕೀಯದಲ್ಲಿ ಈ ರೀತಿಯ ಆಯಾರಾಂ ಗಯಾರಾಂಗಳು ಸಹಜ ಎಂದು ಸಿ.ಎಂ. ಇಬ್ರಾಹಿಂ ವಿರುದ್ಧ ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ರಾಹಿಂ ಪಕ್ಷ ತೊರೆದ ಮೇಲೆ ಸರ್ವ ಸ್ವಾತಂತ್ರ್ಯರು. ಒಂದು ರಾಜಕೀಯ ಪಕ್ಷದಲ್ಲಿ ಸ್ಥಾನ ಮಾನ ಸಿಗದಿದ್ದಾಗ ಬಿಟ್ಟು ಹೋಗೋದು ಸರಿಯಲ್ಲ. ಸಿದ್ದಾಂತದ ಮೇಲೆ ಪಕ್ಷದಲ್ಲಿ ಇರಬೇಕು, ಅದು ಬಿಟ್ಟು ಅಧಿಕಾರ ಸಿಗಲಿಲ್ಲ ಎಂದು ಬೇರೆ ಪಕ್ಷ ಸೇರುವುದು ಸರಿಯಲ್ಲ. ಸಿಎಂ ಇಬ್ರಾಹಿಂರನ್ನು ಶಾಸಕ, ಸಚಿವ, ಬೇರೆ ಬೇರೆ ಸ್ಥಾನ ಮಾನ ನೀಡಿದ್ದರು. ಸಮಯ ಸಾಧಕ ರಾಜಕಾರಣಕ್ಕೆ ಯಾರು ಕೂಡ ಬೆಲೆ ಕೊಡುವುದಿಲ್ಲ. ಈಗ ಹೋಗಿರುವ ಪಕ್ಷಕ್ಕಾದರೂ ಬದ್ದತೆಯಿಂದ ಇರಿ ಎಂದು ಬಯಸುತ್ತೇನೆ ಎಂದು ಉಗ್ರಪ್ಪ ಸಿ.ಎಂ. ಇಬ್ರಾಹಿಂರಿಗೆ ಸಲಹೆ ನೀಡಿದ್ದಾರೆ.

ಸಿದ್ದರಾಮಯ್ಯ ಒಬ್ಬ ಬದ್ದತೆ ಇರುವ ರಾಜಕಾರಣಿ. ಅವರು ಅನೇಕ ಕ್ಷೇತ್ರದ ಅಭಿಮಾನಿಗಳು ಇಲ್ಲೇ ಸ್ಪರ್ಧಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಕೊನೆಗೆ ಅವರೇ ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡುತ್ತಾರೆ. ಪಂಚರಾಜ್ಯ ಚುನಾವಣೆಯ ಸೋಲು ಮುಂದಿನ ಗೆಲುವಿಗೆ ಮೆಟ್ಟಿಲು. ಸೋಲಿಗೆ ಕಾರಣ ಏನು ಎನ್ನುವುದು ಆರ್ಥ ಮಾಡಿಕೊಂಡು ಮುಂದೆ ಇದು ಆಗದಂತೆ ನೋಡಿಕೊಳ್ಳುತ್ತೇವೆ. ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುವ ಆರೋಪ ಸಂಬಂಧ ಮಾತನಾಡಿದ ಉಗ್ರಪ್ಪ, ಕುಟುಂಬ ರಾಜಕಾರಣ ಬಿಜೆಪಿಯಲ್ಲಿ ಇಲ್ವಾ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕುಟುಂಬ ಎಂದರೆ ಇಂದಿರಾ ಗಾಂಧಿ ಫ್ಯಾಮಿಲಿ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಕೂಡ ಅವರದ್ದೇ ಪಕ್ಷ ಸಂಘಟನೆಗೆ ಓಡಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ICC Womens World Cup: ಭಾರತದ ನಂ.1 ಸ್ಥಾನ ಕಿತ್ತುಕೊಂಡ ಆಸ್ಟ್ರೇಲಿಯಾ; ಪಾಯಿಂಟ್ ಪಟ್ಟಿ ವಿವರ ಹೀಗಿದೆ

ಅನಗತ್ಯ ದಾಖಲೆ ಬರೆದ ಶ್ರೇಯಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada