Davanagere News: ಹೊಟ್ಟೆಕಿಚ್ಚು ಹೆಚ್ಚಾಗಿ, ಚಿನ್ನದ ಬೆಳೆ ನೀಡುತ್ತಿದ್ದ ಅಡಿಕೆಯ ನೂರಾರು ಮರಗಳನ್ನು ಕಡಿದುಹಾಕಿದ ಸೋದರ ಸಂಬಂಧಿ!

ದಾವಣಗೆರೆ ತಾಲೂಕಿನ ಕಂದಗಲ್ ಗ್ರಾಮದ ಗುರುಮೂರ್ತಿ ಎಂಬ ರೈತನಿಗೆ ಸೇರಿದ ಅಡಿಕೆ ತೋಟದ ಎರಡು ಸಾಲು ಕತ್ತರಿಸಿ ಹಾಕಲಾಗಿದೆ. ಬರೋಬರಿ 108 ಮರಗಳನ್ನ ಕಡಿದು ಹಾಕಿದ್ದಾರೆ. ಇದನ್ನ ಮಾಡಿದ್ದು ಬೇರೆ ಯಾರೂ ಅಲ್ಲ ಸಹೋದರ ಸಂಬಂಧಿಗಳೇ.

Davanagere News: ಹೊಟ್ಟೆಕಿಚ್ಚು ಹೆಚ್ಚಾಗಿ, ಚಿನ್ನದ ಬೆಳೆ ನೀಡುತ್ತಿದ್ದ ಅಡಿಕೆಯ ನೂರಾರು ಮರಗಳನ್ನು ಕಡಿದುಹಾಕಿದ ಸೋದರ ಸಂಬಂಧಿ!
ನೂರಾರು ಅಡಿಕೆ ಮರಗಳನ್ನು ಕಡಿದುಹಾಕಿದ ಸೋದರ ಸಂಬಂಧಿ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on: Jun 21, 2023 | 7:28 AM

ಮನುಷ್ಯನ ಹೊಟ್ಟೆಕಿಚ್ಚು (jealous) ಇನ್ನೊಬ್ಬರ ಮೇಲೆ ಯಾವ ರೀತಿಯ ಪರಿಣಾಮ ಬೀರಬಲ್ಲದು ಎಂಬುದನ್ನು ನಿರೀಕ್ಷೆ ಮಾಡಲೂ ಆಗೋಲ್ಲ. ಇನ್ನೊಬ್ಬರ ಏಳ್ಗೆಯನ್ನ ಸಹಿಸದೇ ಮಾಡುವ ಕೃತ್ಯಕ್ಕೆ ಇಡೀ ಕುಟುಂಬಗಳೇ ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಸ್ಥಿತಿ. ಇದಕ್ಕೆ ನಿದರ್ಶನ ಎನ್ನುವಂತಹ ಘಟನೆಯೊಂದು ಇಲ್ಲಿ ನಡೆದಿದೆ. ಅದನ್ನ ನೋಡಿದರೆ… ವಯಸ್ಸಿಗೆ ಬಂದ ಮಕ್ಕಳ ಶವಗಳ ರಾಶಿ ಬಿದ್ದಂತೆ ಕಂಡು ಬರುತ್ತದೆ. ಇದನ್ನ ನೋಡಿದ ಯಾರೇ ಆಗಲಿ ಕಣ್ಣೀರು ಹಾಕದೇ ಇರಲಾರರು. ಇಷ್ಟಕ್ಕೂ ಇಲ್ಲಿ ಏನು ನಡೆದಿದೆ ಅಂತೀರಾ? ಇಲ್ಲಿದೆ ನೋಡಿ ಹೊಟ್ಟೆಕಿಚ್ಚಿನ ಪರಮಾವಧಿಯ ಪ್ರತೀಕ ಸ್ಟೋರಿ. ಜನ್ಮ ನೀಡಿದ ಮಗನಂತೆ ಅಕ್ಕರೆಯಿಂದ ಬೆಳೆಸಿದ ಮರಗಳು. ಇಂತಹ ಮರಗಳ ಮಾರಣಹೋಮವೇ ಇಲ್ಲಿ ನಡೆದಿದೆ. ದುಷ್ಟರು ಮರ ಕಟ್ ಮಾಡುವ ಪೆಟ್ರೋಲ್ ಚಾಲಿತ ಯಂತ್ರ ಬಳಸಿ ಮರಗಳನ್ನ ಬುಡಸಹಿತ ಕಿತ್ತು ಬಿಸಾಕಿದ್ದಾರೆ. ಒಂದು ರೀತಿಯಲ್ಲಿ ವಯಸ್ಸಿಗೆ ಬಂದ ಮಕ್ಕಳೇ ಸಾವನ್ನಪ್ಪಿದ್ದಾರೆ ಎಂಬ ಸ್ಥಿತಿ ಇಲ್ಲಿನ ತೋಟದ ಮಾಲೀಕರಿಗೆ ಆಗಿದೆ. ಆಕಾಶವೇ ಕಳಚಿ ಮೇಲೆ ಬಿದ್ದಂತಾಗಿದೆ. ಮೊನ್ನೆ ಇವುಗಳನ್ನ ನೋಡಿಕೊಂಡು ಹೋದ ಮಾಲೀಕ ಮರು ದಿನ ಬೆಳಿಗ್ಗೆ ಈ ಅಡಿಕೆ ಮರಗಳ (arecanut trees) ಸ್ಥಿತಿ ನೋಡಿ ಆಘಾತ ಹಾಗೂ ಆಕ್ರೋಶ ಗೊಂಡಿದ್ದಾರೆ. ಚಿತ್ರದಲ್ಲಿ ನೀವು ನೋಡುತ್ತಿರುವುದು ದಾವಣಗೆರೆ (davanagere) ತಾಲೂಕಿನ ಕಂದಗಲ್ (kandagal) ಗ್ರಾಮದಲ್ಲಿ ನಡೆದ ದುಷ್ಟರು ನಡೆಸಿದ ಅಟ್ಟಹಾಸದ ದೃಶ್ಯಗಳನ್ನ.

ಇಲ್ಲಿನ ಗುರುಮೂರ್ತಿ ಎಂಬ ರೈತನಿಗೆ ಸೇರಿದ ಅಡಿಕೆ ತೋಟದ ಎರಡು ಸಾಲು ಕತ್ತರಿಸಿ ಹಾಕಲಾಗಿದೆ. ಬರೋಬರಿ 108 ಮರಗಳನ್ನ ಕಡಿದು ಹಾಕಿದ್ದಾರೆ. ಇದನ್ನ ಮಾಡಿದ್ದು ಬೇರೆ ಯಾರೂ ಅಲ್ಲ ಸಹೋದರ ಸಂಬಂಧಿಗಳೇ. ಫಲ ನೀಡುತ್ತಿದ್ದ ಹತ್ತರಿಂದ 12 ವರ್ಷದ ಮರಗಳು ಹೊಟ್ಟೆ ಕಿಚ್ಚಿಗೆ ಬಲಿಯಾಗಿವೆ. ಕಳೆದ ಆರು ವರ್ಷದಿಂದ ಫಲ ನೀಡುತ್ತಿದ್ದವು.

ಅಸಲಿಗೆ ಇದನ್ನ ಮಾಡಿದ್ದು ಜಮೀನು ಮಾಲೀಕ ಗುರುಮೂರ್ತಿ ಅವರ ಸಹೋದರ ಸಂಬಂಧಿ ಕೆಪಿ ಮಂಜಪ್ಪ ಅಂತಾ. ಮೊದಲು ಅಡಿಕೆ ತೋಟ ಮಂಜಪ್ಪ ಅವರಿಗೆ ಇತ್ತು. ಕಳೆದ ಕೆಲ ವರ್ಷಗಳ ಹಿಂದೆ ಸರ್ವೇ ಮಾಡಿಸಿದಾಗ ಗುರುಮೂರ್ತಿ ಅವರ ಪಾಲಿಗೆ ಬಂದಿದೆ. ಅಡಿಕೆ ತೋಟ ಅವರಿಗೆ ಬಂತಲ್ಲ ಎಂದು ಹೊಟ್ಟೆ ಕಿಚ್ಚಿನಿಂದ ಮರಗಳನ್ನ ಮುಗಿಸಿ ಹಾಕಿದ್ದಾರೆ.

ಬೆಳಿಗ್ಗೆ ಐದು ಗಂಟೆಗೆ ಬಂದು ಪಕ್ಕದೂರಿನ ಮರ ಕಟ್ಟಿಂಗ್ ಮಷಿನ್ ತಂದು ತನ್ನ ಸಂಬಂಧಿಕರ ಜೊತೆ ಸೇರಿ ಅಡಿಕೆ ತೋಟವನ್ನ ಸರ್ವನಾಶ ಮಾಡುತ್ತಿದ್ದ. ಬೆಳಿಗ್ಗೆ ಆರು ಗಂಟೆಗೆ ದಾರಿಯಲ್ಲಿ ಹೋಗುತ್ತಿದ್ದ ಜನ ಇದನ್ನ ಗಮನಿಸಿ ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅದಷ್ಟರಲ್ಲಿ ಅವರು ತೋಟಕ್ಕೆ ಬರುವಷ್ಟರಲ್ಲಿ ಎಳು ಗಂಟೆ ಆಗಿದೆ. ಹೀಗಾಗಿ ಅಷ್ಟರಲ್ಲಿಯೇ 108 ಮರಗಳ ಕಥೆ ಮುಗಿಸಿ ಹಾಕಿದ್ದಾರೆ. ಇವರು ಬರುತ್ತಿದ್ದಂತೆ ಅವರೆಲ್ಲಾ ನಾಪತ್ತೆ ಆಗಿದ್ದಾರೆ. ಈ ಬಗ್ಗೆ ದಾವಣಗೆರೆ ತಾಲೂಕಿನ ಹದಡಿ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಈಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರ 50 ಸಾವಿರ ರೂಪಾಯಿ ಆಸುಪಾಸಿದೆ. ಇದೇ ಕಾರಣಕ್ಕೆ ಅಡಿಕೆಯನ್ನ ಚಿನ್ನದ ಬೆಳೆ ಎನ್ನುತ್ತಾರೆ. ಮೇಲಾಗಿ ಇಲ್ಲಿ ಬೆಳೆದಿದ್ದು ಬೋರ್ ವೆಲ್ ನೀರಿನ ಮೇಲೆ. ಮಳೆಯಿಲ್ಲದೆ ಬೋರ್ ವೇಲ್ ಬತ್ತಿ ಹೋದ್ರೆ ಟ್ಯಾಂಕರ್ ಮೂಲಕ ನೀರು ತಂದು ಹಾಕಿ ಅಡಿಕೆ ಮರಗಳನ್ನ ಬಹುತೇಕ ರೈತರು ಉಳಿಸಿಕೊಳ್ಳುತ್ತಾರೆ. ಆದ್ರೆ ಇಲ್ಲಿ ಮಾತ್ರ ತಮ್ಮ ರಕ್ತ ಸಂಬಂಧಿಗಳ ಏಳ್ಗೆ ಸಹಿಸದೇ ಮರಗಳನ್ನ ಮುಗಿಸಿ ಹಾಕಿದ್ದು ಮಾತ್ರ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು ಅಂದ್ರೆ ತಪ್ಪಾಗಲಾರದು.

ದಾವಣಗೆರೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ