AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Davangere: ಕಾಣೆಯಾಗಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಹೊಸ ತಿರುವು; ಹತ್ಯೆ ಮಾಡಿ ಸುಟ್ಟು ಹಾಕಿದ್ದ ಆರೋಪಿಯನ್ನ ಬಂಧಿಸಿದ ಪೊಲಿಸರು

ನಾಲ್ಕು ತಿಂಗಳ ಹಿಂದೆ ಮಹಿಳೆಯೊಬ್ಬರು ಕಾಣೆಯಾಗಿ, ಕೊಲೆ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಕೊಲೆಗೆ ನಿಖರವಾದ ಕಾರಣ ಬೆಳಕಿಗೆ ಬಂದಿದ್ದು, ಹೀಗಿದೆ.

Davangere: ಕಾಣೆಯಾಗಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಹೊಸ ತಿರುವು; ಹತ್ಯೆ ಮಾಡಿ ಸುಟ್ಟು ಹಾಕಿದ್ದ ಆರೋಪಿಯನ್ನ ಬಂಧಿಸಿದ ಪೊಲಿಸರು
ಆರೋಪಿ ಸಲೀಂ ಮುನ್ನಾಖಾನ್
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Jun 20, 2023 | 9:58 AM

Share

ದಾವಣಗೆರೆ: ನಾಲ್ಕು ತಿಂಗಳ ಹಿಂದೆ ಮಹಿಳೆಯೊಬ್ಬರು ಕಾಣೆಯಾಗಿ, ಕೊಲೆ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ವಿಜಯನಗರ(Vijayanagara) ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಕವಿತಾ(35) ಎಂಬುವವರನ್ನು ಕೊಲೆ ಮಾಡಿ, ಆಕೆಯ ಶವವನ್ನ ಸುಟ್ಟುಹಾಕಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಹಲವಾಗಲು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದರು. ಇದೀಗ 4 ತಿಂಗಳ ಬಳಿ ಕೊಲೆ ಆರೋಪದ ಮೇಲೆ ಇದೇ ತಾಲೂಕಿನ ಕುಂಚೂರು ಗ್ರಾಮದ ಸಲೀಂ ಮುನ್ನಾಖಾನ್ ಎಂಬಾತನನ್ನ ಬಂಧಿಸಿದ್ದಾರೆ.

ಘಟನೆ ವಿವರ

ದಾವಣಗೆರೆ ಜಿಲ್ಲೆಯ ಅಲೂರಿನ ತವರು ಮನೆಯಲ್ಲಿದ್ದ ಮೃತ ಕವಿತಾ 2023 ರ ಫೆಬ್ರುವರಿ 23ರಂದು ಹರಿಹರಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಮನೆಗೆ ವಾಪಾಸು ಬಂದಿರಲಿಲ್ಲ. ಗಂಡನ ಊರಾದ ನಿಟ್ಟೂರು ಸೇರಿದಂತೆ ಎಲ್ಲ ಕಡೆ ಹುಡುಕಾಡಿದರು ಪತ್ತೆಯಾಗದ ಕಾರಣ, ಕಾಣೆಯಾದ ಮಗಳನ್ನು ಪತ್ತೆ ಮಾಡಿಕೊಡುವಂತೆ ಪೊಲೀಸರಿಗೆ ಮೃತಳ ತಂದೆ ಭೀಮಪ್ಪ ಅವರು ಮಾರ್ಚ್ 7 ರಂದು ಹಲುವಾಗಲು ಠಾಣೆಗೆ ದೂರು ಸಲ್ಲಿಸಿದ್ದರು. ಈ ಕುರಿತು ಪ್ರಕರಣದ ತನಿಖೆ ನಡೆಸಿದ್ದ ಹಲವಾಗಲು ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಇದನ್ನೂ ಓದಿ:Tumakuru: ವೈಯಕ್ತಿಕ ದ್ವೇಷ; ಸ್ನೇಹಿತರೊಟ್ಟಿಗೆ ಸೇರಿ ಟೈಲ್ಸ್ ಅಂಗಡಿ ಮಾಲೀಕನನ್ನ ಕೊಲೆ ಮಾಡಿಸಿದ ಅಮ್ಮ ಮಗಳು

ತನಿಖೆ ವೇಳೆ ಸತ್ಯಾಂಶ ಬೆಳಕಿಗೆ

ಇನ್ನು ಮೃತಳೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಆರೋಪಿ ಸಲೀಂ ಫೆ.23ರಂದು ತೆಲಿಗಿ ಗ್ರಾಮಕ್ಕೆ ಬಂದಿದ್ದ ಕವಿತಾಳನ್ನು ತನ್ನ ಬೈಕ್ ಮೇಲೆ ಕೂರಿಸಿಕೊಂಡು ಕುಂಚೂರಿನ ಕೆರೆಯಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾತಿಗಿಳಿದಿದ್ದಾರೆ. ಈ ವೇಳೆ ಫೋನ್ ನಲ್ಲಿ ಮಾತನಾಡುವ ವಿಚಾರಕ್ಕೆ ಇಬ್ಬರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಸಲೀಂ ಕವಿತಾಳ ಕತ್ತು ಹಿಸುಕಿ ಸಾಯಿಸಿದ್ದ. ಈ ವಿಷಯ ಯಾರಿಗೂ ಗೊತ್ತಾಗದಂತೆ ತಡೆಯಲು ಕೆರೆಯಂಗಳದಲ್ಲಿಯೇ ಆಕೆಯ ಶವ ಕಟ್ಟಿಗೆಯಲ್ಲಿ ಸುಟ್ಟು ಹಾಕಿ ಮನೆಗೆ ಹಿಂತಿರುಗಿದ್ದಾನೆ. ಅಲ್ಲಿ ನಡೆದಿರುವ ಘಟನೆಯನ್ನು ಆರೋಪಿ ಈಚೆಗೆ ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದರಿಂದ ಪ್ರಕರಣ ಪತ್ತೆಗೆ ಸಹಕಾರಿ ಆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Hanumant Madar
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ