ಮಾವನಿಂದಲೇ ಅಳಿಯನ ಕೊಲೆ; ಪ್ರಕರಣ ಬೇಧಿಸಿದ ದಾವಣಗೆರೆ ಪೊಲೀಸರು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 19, 2024 | 5:33 PM

ಆ ಹುಡುಗ ಸ್ವಲ್ಪ ಶೋಕಿಲಾಲ. ಸಂಬಂಧಿಕರೆ ತನ್ನ ಆಪ್ತರು ಎಂದು ಓಡಾಡುತ್ತಿದ್ದ. ರೀಲ್ಸ್, ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದ. ಇದೇ ರೀತಿ ಗಮನ ಸೆಳೆದ ಯುವಕ ಇದ್ದಕ್ಕಿದಂತೆ ಕೊಲೆ ಆಗಿದ್ದ. ಈ ಕೊಲೆ ಸುತ್ತ ಹತ್ತಾರು ಅನುಮಾನ ಕಂಡು ಬಂದಿದ್ದವು. ಖಾಕಿ ನಡೆಸಿದ ಕಾರ್ಯಾಚಾರಣೆಯಲ್ಲಿ ಗೊತ್ತಾಗಿದ್ದು, ಸ್ವಂತ ಮಾವನೇ ಯುವಕರನ್ನ ಕರೆದುಕೊಂಡು ಅಳಿಯನ ಕಥೆ ಮುಗಿಸಿದ್ದ. 

ಮಾವನಿಂದಲೇ ಅಳಿಯನ ಕೊಲೆ; ಪ್ರಕರಣ ಬೇಧಿಸಿದ ದಾವಣಗೆರೆ ಪೊಲೀಸರು
ಮೃತನ ಕುಟುಂಬ, ಆರೋಪಿ
Follow us on

ದಾವಣಗೆರೆ, ಮೇ.19: ಇದೇ ಮೇ. 16ರ ಬೆಳಿಗ್ಗೆ ದಾವಣಗೆರೆ(Davanagere) ತಾಲೂಕಿನ ಓಬಜ್ಜಿಹಳ್ಳಿಯಲ್ಲಿ ಎಸ್ಪಿಎಸ್ ನಗರದ ನಿವಾಸಿ 4 ವರ್ಷದ ಸುದೀಪ್ ಹತ್ಯೆಯಾಗಿತ್ತು. ಸ್ವಲ್ಪ ಹತ್ತಿರಕ್ಕೆ ಹೋಗಿ ನೋಡಿದಾಗ ಯುವಕ ಮೈ ಮೇಲೆ ಗಾಯಗಳಿದ್ದವು. ಆಗ ಇದೊಂದು ಕೊಲೆ ಪ್ರಕರಣ ಎಂದು ಜನರಿಗೆ ಗೊತ್ತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ನೇರವಾಗಿ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆತನ ಮೊಬೈಲ್ ನಂಬರ್​ಗೆ ಕಾಲ್ ಸಹ ಮಾಡಿದ್ದಾರೆ. ಜೊತೆಗೆ ಇತ ಕೊನೆಯದಾಗಿ ಯಾರಿಗೆ ಕಾಲ್ ಮಾಡಿದ್ದಾನೆ. ಎಲ್ಲದರ ಕುರಿತು ತನಿಖೆ ಆರಂಭಿಸಿದ್ದರು. ಇದೀಗ ಮೊಬೈಲ್ ಕಾಲ್ ರೆಕಾರ್ಡ್ ಆಧಾರದ ಮೇಲೆ ಹತ್ಯೆಯ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ಸೋದರ ಮಾವನಾದ ಮನೋಹರ ಎಂಬಾತ ತನ್ನ ತಂಗಿಯ ಮಗನನ್ನೇ ಕೊಲೆ ಮಾಡಿರುವುದು ತಿಳಿದುಬಂದಿದೆ.

ಹಣಕ್ಕಾಗಿ ಕೊಲೆ

ಅಂದು ರಾತ್ರಿ ಕುಡಿದು ಮೋಜು-ಮಸ್ತಿ ಮಾಡಲು ಹೋಗಿ ಸ್ನೇಹಿತರ ಜೊತೆ ಜಗಳವಾಗಿ ಈ ರೀತಿ ಘಟನೆ ನಡೆದಿದೆ ಎನ್ನಲಾಗಿತ್ತು. ಆದ್ರೆ, ವಾಸ್ತವದಲ್ಲಿ ಇಲ್ಲಿ ನಡೆದಿದ್ದೆ ಬೇರೆ. ಕೊಲೆಯಾದ ಸುದೀಪ್ ಸಹ ಒಂದು ಬೈಕ್ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ. ಜೈಲಿನಿಂದ ಸುದೀಪ್​ನನ್ನ ಹೊರ ತರಲು ಸುಮಾರು 40 ಸಾವಿರ ರೂಪಾಯಿ ಖರ್ಚಾಗಿತ್ತು. ಜೈಲಿನಿಂದ ಹೊರ ಬಂದ ಬಳಿಕ ಆ ಹಣವನ್ನ ವಾಪಾಸ್​ ಮಾಡಬೇಕಿತ್ತು. ಮೇಲಾಗಿ ಸುದೀಪ್​ನ ತಂದೆ ಪತ್ರಕರ್ತ ಹಾಗೂ ಕಾಂಗ್ರೆಸ್ ಮುಖಂಡನಾಗಿದ್ದ.​ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹೀಗಾಗಿ ಸುದೀಫ್​ ಸಂಕಷ್ಟದಲ್ಲಿದ್ದ. ಹಣ ಹೊಂದಿಸುವುದು ಕಷ್ಟವಾಗಿತ್ತು.

ಇದನ್ನೂ ಓದಿ:ನೇಹಾ, ಅಂಜಲಿ ಕೊಲೆ ಆರೋಪಿಗಳನ್ನ ಎನ್ ಕೌಂಟರ್‌ ಮಾಡ್ಬೇಕು- ದಿಂಗಾಲೇಶ್ವರ ಸ್ವಾಮೀಜಿ

ಮೃತನ ಪತ್ನಿ ಗರ್ಭಿಣಿ

ಈ ಹಿನ್ನಲೆ ಹಣ ವಾಪಾಸ್​ ಮಾಡುವಂತೆ ಬೈಕ್ ಮೇಲೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ಮೇಲಾಗಿ ಸಣ್ಣ ವಯಸ್ಸಿನ ಪತ್ನಿ, ಒಂದು ಹೆಣ್ಣು ಮಗುವಿದೆ. ಈಗ ಮತ್ತೆ ಪತ್ನಿ ಗರ್ಭಿಣಿ ಇದ್ದಾಳೆ. ಇಡೀ ಮನೆಯೇ ಈಗ ಯಾರು ಗತಿ ಇಲ್ಲದಂತಾಗಿದೆ. ಇನ್ನು ಈ ಕುರಿತು ಮಾತನಾಡಿದ ಮೃತನ ಪತ್ನಿ, ‘ಮನೋಹರ ಹಾಗೂ ಆತನ‌ ಇಬ್ಬರು ಸಹೋದರರು ಸೇರಿ ನನ್ನ ಪತಿ ಸುದೀಪ್​ನನ್ನು ಕೊಲೆ ಮಾಡಿದ್ದಾರೆ. ಅವರನ್ನ ಬಂಧಿಸಬೇಕು ಎಂದು ಪತ್ನಿ ‌ಭೂಮಿಕಾ ಆಗ್ರಹಿಸಿದ್ದಾರೆ.

ಇತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಅವರು ಅಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸಹ ಘಟನಾ ಸ್ಥಳದಲ್ಲಿ ಹತ್ತಾರು ಮಾದರಿ ಸಂಗ್ರಹಿಸಿದ್ದರು. ಮೇಲಾಗಿ ಘಟನಾ ಸ್ಥಳದಲ್ಲಿ ಹೊರಗೆ ಮೊಬೈಲ್ ಪತ್ತೆಯಾಗಿತ್ತು. ಹೀಗೆ ಅಲ್ಲಿ ಇಲ್ಲಿ ಹುಡುಕಾಟ ಪೊಲೀಸರು ಸುರು ಮಾಡಿದ್ದರು. ಇದೀಗ ಕೊಲೆ ಮಾಡಿದ್ದು ತನಿಖೆಯಿಂದ ಗೊತ್ತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ