ನೇಹಾ, ಅಂಜಲಿ ಕೊಲೆ ಆರೋಪಿಗಳನ್ನ ಎನ್ ಕೌಂಟರ್‌ ಮಾಡ್ಬೇಕು- ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಮಾಸುವ ಮುನ್ನವೇ ಮತ್ತೊಂದು ಯುವತಿ ಅಂಜಲಿ ಎಂಬುವವರ ಭೀಕರ ಕೊಲೆಯಾಗಿದೆ. ಈ ಹಿನ್ನಲೆ ಹತ್ಯೆ ಖಂಡಿಸಿ‌ ನಾಳೆ(ಮೇ.17) ಪ್ರತಿಭಟನೆ ಮಾಡುತ್ತೇವೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಅವರು ಹೇಳಿದ್ದಾರೆ. ಜೊತೆಗೆ ಯುವತಿ ಹಂತಕರನ್ನ ಎನ್ ಕೌಂಟರ್‌ ಮಾಡಬೇಕು ಎಂದು ಕಿಡಿಕಾರಿದ್ದಾರೆ.

ನೇಹಾ, ಅಂಜಲಿ ಕೊಲೆ ಆರೋಪಿಗಳನ್ನ ಎನ್ ಕೌಂಟರ್‌ ಮಾಡ್ಬೇಕು- ದಿಂಗಾಲೇಶ್ವರ ಸ್ವಾಮೀಜಿ
ಅಂಜಲಿ ಹತ್ಯೆ ಖಂಡಿಸಿ ದಿಂಗಾಲೇಶ್ವರ ಸ್ವಾಮೀಜಿ ಕಿಡಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:May 16, 2024 | 2:48 PM

ಹುಬ್ಬಳ್ಳಿ, ಮೇ.16: ಹುಬ್ಬಳ್ಳಿಯ ನೇಹಾ ಹಾಗೂ ಅಂಜಲಿ ಕೊಲೆ ಆರೋಪಿಗಳನ್ನು ಎನ್ ಕೌಂಟರ್‌ ಮಾಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ(Dingaleshwar swamiji) ಕಿಡಿಕಾರಿದ್ದಾರೆ. ಇಂದು(ಮೇ.16) ಹುಬ್ಬಳ್ಳಿ(Hubballi)ಯ ಮೃತ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬಳಿಕ ಮಾತನಾಡಿದ ಅವರು, ‘ ಅಂಜಲಿ ಅಜ್ಜಿ ಅವರು ಹತ್ಯೆಗೂ ಮುಂಚೆಯೇ ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ, ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಅಂಜಲಿ‌ ಕೊಲೆಗೆ ಪೊಲೀಸರೇ ಹೊಣೆ ಎಂದು ಶ್ರೀಗಳು ಗಂಭೀರ ಆರೋಪ ಮಾಡಿದ್ದಾರೆ.

ಅಂಜಲಿ ಹತ್ಯೆ ಖಂಡಿಸಿ‌ ಪ್ರತಿಭಟನೆ

ಇದೇ ವೇಳೆ ‘ನಾವು ನಾಳೆ(ಮೇ.17) ಅಂಜಲಿ ಹತ್ಯೆ ಖಂಡಿಸಿ‌ ಪ್ರತಿಭಟನೆ ಮಾಡುತ್ತೇವೆ. ಈ ಪ್ರಕರಣದಲ್ಲಿ ತಪ್ಪು ಮಾಡಿದ ಪೊಲೀಸರನ್ನು ಕೆಲಸದಿಂದ ತಗೀಬೇಕು. ಪೊಲೀಸ್ ಠಾಣೆಗೆ ಹೋದಾಗ ಮೂಢನಂಬಿಕೆ ಎಂದಿದ್ದಾರೆ. ಇವತ್ತು ‌ಕೊಲೆಯಾಗಿದೆ, ಕೊಲೆಗೆ ಪೊಲೀಸರೇ ನೇರಾನೇರ ಹೊಣೆಯಾಗಿದ್ದಾರೆ. ನಾವು ನಾಳೆ ಪ್ರತಿಭಟನೆ ಮಾಡಿ, ಅವಶ್ಯ ಬಿದ್ರೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡುತ್ತೇನೆ. ಈ ವಿಷಯವನ್ನ ಸಿಎಂ ಸಿದ್ದರಾಮಯ್ಯ  ಅವರ ಗಮನಕ್ಕೆ ತರ್ತೀವಿ. ಅಂಜಲಿ ಮನೆಯಲ್ಲಿ ಓದುತ್ತಿರುವ ಸಹೋದರಿಯರು ಇದ್ದಾರೆ. ನಾವು ಅವರನ್ನು ದತ್ತು ತಗೆದುಕೊಂಡು ವಿದ್ಯಾಭ್ಯಾಸ ಕೊಡಿಸುತ್ತೇವೆ ಎಂದರು.

ಇದನ್ನೂ ಓದಿ:ಹುಬ್ಬಳ್ಳಿ ಅಂಜಲಿ ಹಂತಕನ ಪತ್ತೆಗೆ ಎರಡು ವಿಶೇಷ ತಂಡ ರಚನೆ, ಪೊಲೀಸ್ ಆಯುಕ್ತೆ ಹೇಳಿದ್ದೇನು?

ಘಟನೆ ವಿವರ

ಬುಧವಾರ (ಮೇ.15) ಬೆಳಿಗ್ಗೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್​ ಠಾಣೆ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ ಯುವತಿಯನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿತ್ತು. ಅಂಜಲಿ ಅಂಬಿಗೇರ (20) ಮೃತ ಯುವತಿ. ಆಕೆಯ ಮನೆಗೆ ನುಗ್ಗಿದ ಆರೋಪಿ ವಿಶ್ವ ಎಂಬಾತ ಆಕೆಯ ಅಜ್ಜಿ ಮತ್ತು ಸಹೋದರಿಯ ಎದುರೇ ಆಕೆಗೆ ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಇದೀಗ ಈ ಘಟನೆಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ ಅವರು ಹಂತಕನ ಪತ್ತೆಗೆ ಎರಡು ವಿಶೇಷ ತಂಡವನ್ನು ರಚನೆ ಮಾಡಿದ್ದಾಗಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Thu, 16 May 24

ತಾಜಾ ಸುದ್ದಿ