ಬೆಣ್ಣೆ ನಗರಿ ದಾವಣಗೆರೆ ಮಕ್ಕಳೊಂದಿಗೆ ಸಂವಾದ: ಮನಸ್ಸು ಬಿಚ್ಚಿ‌ ಮಾತನಾಡಿದ ಇಸ್ರೋ ಸಹ ನಿರ್ದೇಶಕ ಬಿಎಚ್​ಎಂ ದಾರುಕೇಶ್​​

ದಾವಣಗೆರೆಯ ಈಶ್ವರಮ್ಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಇಸ್ರೋ ಸಹ ನಿರ್ದೇಶಕ ಬಿ.ಎಚ್.ಎಂ. ದಾರುಕೇಶ್​ ಭಾಗವಹಿಸಿ, ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಚಂದ್ರನಲ್ಲಿ ಕ್ಯಾಲ್ಸಿಷಿಯಂ, ಮೆಗ್ನಿಷಿಯಂ, ಮ್ಯಾಂಗನೀಸ್‌ಗಳ ಜೊತೆಗೆ ಸಲ್ಫರ್ ಸಿಕ್ಕಿರುವುದು ವಿಶೇಷ ಎಂದು ತಿಳಿಸಿದ್ದಾರೆ.

ಬೆಣ್ಣೆ ನಗರಿ ದಾವಣಗೆರೆ ಮಕ್ಕಳೊಂದಿಗೆ ಸಂವಾದ: ಮನಸ್ಸು ಬಿಚ್ಚಿ‌ ಮಾತನಾಡಿದ ಇಸ್ರೋ ಸಹ ನಿರ್ದೇಶಕ ಬಿಎಚ್​ಎಂ ದಾರುಕೇಶ್​​
ಇಸ್ರೋ ಸಹ ನಿರ್ದೇಶಕ ಬಿಎಚ್ ಎಂ ದಾರುಕೇಶ, ವಿದ್ಯಾರ್ಥಿಗಳು
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 23, 2023 | 6:32 PM

ದಾವಣಗೆರೆ, ಸೆಪ್ಟೆಂಬರ್​ 23: ಲ್ಯಾಂಡರ್ ಮತ್ತು ರೋವರ್ ಸಂಪರ್ಕಿಸುವ ಪ್ರಯತ್ನಗಳು ನಡೆದಿವೆ. ಸಂದೇಶ ವಾಪಸ್ ಕಳುಹಿಸುತ್ತದೆ ಆಶಾವಾದಲ್ಲಿ ಇದ್ದೇವೆ. ಸಂಶೋಧನೆಗಳಿಗೆ ಒಳಪಡಿಸುತ್ತೇವೆ ಎಂದು ಇಸ್ರೋ (ISRO) ಸಹ ನಿರ್ದೇಶಕ ಬಿ.ಎಚ್.ಎಂ. ದಾರುಕೇಶ್ ಹೇಳಿದರು. ಈಶ್ವರಮ್ಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಡನೆ ಸಂವಾದಲ್ಲಿ ಮಾತನಾಡಿ ಅವರು, ಎರಡು ದಿನಗಳಿಂದಲೂ ಪ್ರಯತ್ನಗಳು ನಡೆಯುತ್ತಿದ್ದು, ಚಂದ್ರನಲ್ಲಿ ಮೈನಸ್ 200 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಎಲೆಕ್ಟ್ರಾನಿಕ್ ಮಾಡ್ಯುಲ್‌ಗಳು ಕೆಲಸ ಮಾಡಬಹುದು. ಆದರೆ ಮೈನಸ್‌ 200 ಡಿಗ್ರಿ ಸೆಂಟಿಗ್ರೇಡ್‌ಗಿಂತ ಕಡಿಮೆ ಉಷ್ಣಾಂಶದಲ್ಲಿ ನಾವು ಜೋಡಿಸಿರುವ ಕೆಲವು ರಾಸಾಯನಿಕಗಳು ತಡೆದುಕೊಳ್ಳುವುದು ಒಂದು ವಿಸ್ಮಯವೇ ಸರಿ ಎಂದರು.

ವಿಕ್ರಮ್ ಲ್ಯಾಂಡರ್ ಚಂದ್ರನ ಹೊರ ಮೈಮೇಲೆ 10 ಸೆಂಟಿಮೀಟರ್ ಆಳಕ್ಕೆ ಒಂದು ಗುಂಡಿಯನ್ನು ತೆಗೆದಿದ್ದು, ಎಷ್ಟು ಉಷ್ಣತೆ ಇದೆ ಎಂಬುದನ್ನು ಪತ್ತೆ ಹಚ್ಚುತ್ತಿದೆ. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಉಷ್ಣತೆ ಇದೆ. ಮೈನಸ್ 10 ಡಿಗ್ರಿಯಲ್ಲಿ ಪ್ಲಾಸ್ಮಾ ಸ್ಥಿತಿಯಂತಹ ವಸ್ತು (ಮೆಟಿರಿಯಲ್) ಇದ್ದು, ಈ ಪ್ಲಾಸ್ಮಾ ಸಾಂದ್ರತೆ ಎಷ್ಟು ಇದೆ ಎಂಬುದನ್ನು ಗೊತ್ತಾಗುತ್ತದೆ. ಅಲ್ಲದೇ ಚಂದ್ರನಲ್ಲಿ ಕ್ಯಾಲ್ಸಿಷಿಯಂ, ಮೆಗ್ನಿಷಿಯಂ, ಮ್ಯಾಂಗನೀಸ್‌ಗಳ ಜೊತೆಗೆ ಸಲ್ಫರ್ ಸಿಕ್ಕಿರುವುದು ವಿಶೇಷ ಎಂದು ತಿಳಿಸಿದರು.

ಇದನ್ನೂ ಓದಿ: ದಾವಣಗೆರೆ: ಒಂದು ಕಾಲದಲ್ಲಿ ಪಾಕಿಸ್ತಾನದ ಕರಾಚಿಗೆ ಪೂರೈಕೆ ಆಗ್ತಿದ್ದ ವಿಳ್ಯೆದೆಲೆಗೆ ಸಂಕಷ್ಟ; ಇಲ್ಲಿದೆ ವಿವರ

ಚಂದ್ರಯಾನ ಒಂದು ರಾಷ್ಟ್ರಮಟ್ಟದ ಪ್ರಾಜೆಕ್ಸ್, ಅಂತರರಾಷ್ಟ್ರೀಯ ಮಟ್ಟದಿಂದಲೂ ಪ್ರೋತ್ಸಾಹ ಸಿಕ್ಕಿದೆ. ಸೂರ್ಯನನ್ನು ಕುರಿತು ನಿರಂತರ (24X7) ಅಧ್ಯಯನ ಮಾಡುವ ಅವಶ್ಯಕತೆ ಇದೆ. ಸೂರ್ಯನ ಹೊರ ಮೇಲ್ಮೈಯಲ್ಲಿ 6 ಸಾವಿರ ಕೆಲ್ವಿನ್ ಉಷ್ಣತೆ ಇದ್ದು, 2 ವ್ಯಾಸದಷ್ಟು ಒಳಗೆ ಹೋದರೆ 10 ಲಕ್ಷ ಕೆಲ್ವಿನ್‌ವರೆಗೂ ಉಷ್ಣತೆ ಇರುವ ಸಾಧ್ಯತೆ ಇದೆ.

ಇದು ಹೇಗೆ ಬಂತು ಎಂಬುದು ರಹಸ್ಯ. ನಿರಂತರ ಅಧ್ಯಯನದಿಂದ ಸೂರ್ಯ ಕಾಂತೀಯ ವಸ್ತು (ಮೆಗ್ನಾಟಿಕ್ ಮೆಟರಿಯಲ್) ಹಾಗೂ ಪ್ಲಾಸ್ಮಾ ಉಗುಳುತ್ತದೆ ಎಂಬುದನ್ನು ಮುನ್ಸೂಚನೆ ಮಾಡಿಕೊಳ್ಳಲು ಮಾಡಲು ಸಾಧ್ಯವಾಗತ್ತದೆ. ಇದರಿಂದಾಗಿ ನಾವು ಉಪಗ್ರಹಗಳನ್ನು ಸ್ಯಾಟಲೈಟ್‌ಗಳನ್ನು ಸುರಕ್ಷಿತವಾಗಿಡಲು ಹಾಗೂ ವಿದ್ಯುತ್ ಉಪಕರಣಗಳನ್ನು ಆಫ್ ಮಾಡಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ದಾವಣಗೆರೆ: ಕಾಡುಗೊಲ್ಲರ ಆರಾಧ್ಯ ದೈವ ಬೊಮ್ಮಕಾಟಲಿಂಗೇಶ್ವರ ಅದ್ಧೂರಿ ಜಾತ್ರೆ, ಹರಕೆ ತೀರಿಸಿ ಸಂಭ್ರಮಿಸಿದ ಭಕ್ತರು

ಅಲ್ಲದೇ ಸೂರ್ಯನ ಯಾವ ಭಾಗದಲ್ಲಿ ಆಲ್ಟ್ರಾವೈಲೆಟ್ ಕಿರಣಗಳು ಯಾವ ಭಾಗದಲ್ಲಿ ಜಾಸ್ತಿ ಇವೆ, ಯಾವ ಭಾಗದಲ್ಲಿ ಕಡಿಮೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಎಲ್ಲಾ ಕೇಂದ್ರ ಸರ್ಕಾರಗಳು ಎಲ್ಲಾ ಸಮಯದಲ್ಲಿ ಪ್ರಯೋಗಗಳನ್ನು ಮಾಡಲು ಪ್ರೋತ್ಸಾಹ ನೀಡುತ್ತಿವೆ. ಹಣಕಾಸನ್ನು ನೀಡಿವೆ. ಹುಮ್ಮಸ್ಸು ಇದೆ.

ಶ್ರೀಹರಿ ಕೋಟಾದಲ್ಲಿ 2ನೇ ಬಾರಿಗೆ ಉಡ್ಡಯನ ಸಮಯದಲ್ಲಿ ಸಿವಿಲ್ ಕಾಮಗಾರಿಗಳನ್ನು ನಡೆಸುವ ಸರ್ಕಾರಿ ಸಂಸ್ಥೆ, ಬೇರೊಂದು ಸಂಸ್ಥೆಗೆ ಸಬ್ ಕಂಟ್ರಾಕ್ಟ್ ಕೊಟ್ಟಿದ್ದರಿಂದ ಸ್ವಲ್ಪ ಸಮಸ್ಯೆಯಾಯಿತು. ಪ್ಯಾಡ್‌ನಿಂದ ಕಟ್ಟಿದವರಿಗೆ ತೊಂದರೆಯಾಯಿತು ಎಂಬುದು ಯಾವುದೂ ಸತ್ಯವಲ್ಲ. ಪಿಐಬಿಯಿಂದ ಫ್ಯಾಕ್ಟ್ ಚೆಕ್ ವರದಿ ಕೂಡ ಬಿಡುಗಡೆ ಮಾಡಲಾಗಿದೆ. ಇದು ಸುಳ್ಳು, ಇಸ್ರೋ ತಂತ್ರಜ್ಞರು ಹಾಗೂ ವಿಜ್ಞಾನಿಗಳನ್ನು ಭಾರತ ಸರ್ಕಾರ ಚೆನ್ನಾಗಿಯೇ ನೋಡಿಕೊಂಡಿದೆ.

ಎಂಜಿನಿಯರ್ ಆಗಿರುವುದು ಬೇರೆ, ವೈಯಕ್ತಿಕ ಬೇರೆ ಬೇರೆ ವಿಷಯಗಳು, ವಿದ್ಯಾರ್ಥಿಗಳು ಚೆನ್ನಾಗಿ ಓದಿದ್ದರೂ ಪರೀಕ್ಷೆ ಬರೆಯುವುಕ್ಕಿಂತ ಮುಂಚೆ ಅಪ್ಪ, ಅಮ್ಮಂದಿರಿಗೆ ನಮಸ್ಕರಿಸುಂತೆ, ಅನಿಷ್ಠಗಳು ಹೋಗಲಿ, ಏಕಾಗ್ರತೆಯಿಂದ ನಿರ್ಣಯ ತೆಗೆದುಕೊಳ್ಳಬೇಕಾದುದಕ್ಕೆ ದೇವಸ್ಥಾನಕ್ಕೆ ಹೋದರು ಎಂದು ಪ್ರತಿಕ್ರಿಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:31 pm, Sat, 23 September 23

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ