ದಾವಣಗೆರೆ: ದಾವಣಗೆರೆ (Davangere) ಮಹಾನಗರ ಪಾಲಿಕೆಯ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ನಿಂದ ರೋಡ್ ಶೋ ನಡೆದಿದೆ. ದಾವಣಗೆರೆ ನಗರದ 28 ಹಾಗೂ 37 ನೇ ವಾರ್ಡನಲ್ಲಿ ರೋಡ್ ಶೋ ನಡೆದಿದೆ. ರೋಡ್ ಶೋದಲ್ಲಿ ಅಭ್ಯರ್ಥಿಗಳಾದ ಹುಲ್ಮನೆ ಗಣೇಶ್ ಹಾಗೂ ರೇಖಾ ರಾಣಿ ಪರ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮತ ಯಾಚನೆ ಮಾಡಿದರು. ದಾವಣಗೆರೆ ನಗರದ ಕೆಟಿಜೆ ನಗರದ ಕೊರಚರ ಹಟ್ಟಿಯಿಂದ ಆರಂಭವಾದ ರೋಡ್ ಶೋ ಸಿದ್ದ ಗಂಗಾ ಶಾಲೆ ಪ್ರದೇಶ, ಡಾಂಗೆ ಪಾರ್ಕ ಹಾಗೂ ಭಗತ್ ಸಿಂಗ್ ನಗರದ ಬಹುತೇಕ ಪ್ರದೇಶದಲ್ಲಿ ಮಲ್ಲಿಕಾರ್ಜುನ ರೋಡ್ ಶೋ ನಡೆಸಿದರು.
ರೋಡ್ ಶೋ ವೇಳೆ ಮಾತನಾಡಿ ಯಾವುದೇ ಗೂಂಡಾಗಳಿಗೆ ಹೇದರದೇ ಕಾಂಗ್ರೆಸ್ ಗೆ ಮತ ನೀಡಿ ಎಂದು ಪರೋಕ್ಷವಾಗಿ ಬಿಜೆಪಿ (BJP) ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೋಡ್ ಶೋ ದಲ್ಲಿ ಎರಡು ವಾರ್ಡನ ಅಭ್ಯರ್ಥಿಗಳಾದ ಹಲ್ಮನೆ ಗಣೇಶ್, ರೇಣಾರಾಣಿ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್ . ಕಾಂಗ್ರೆಸ್ ಮುಖಂಡರಾದ ಎ.ನಾಗರಾಜ್ , ಚಮನ್ ಸಾಬ್ ಹಾಗೂ ದಿನೇಶ್ ಶೆಟ್ಟಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಈ ಹಿಂದೆ ಕಾಂಗ್ರೆಸ್ ನಿಂದ ಗೆದ್ದ ಜೆ ಎನ್ ಶ್ರೀನಿವಾಸ ಹಾಗೂ ಅವರ ಪತ್ನಿ ಶ್ವೇತಾ ಶ್ರೀನಿವಾಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆ ಉಪ ಚುನಾವಣೆ ನಡೆಯುತ್ತಿದೆ. ಈ ರೋಡ್ ಶೋದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಾಚಾರ ಮಾಡಲು ಜೆಡಿಎಸ್ ಅಭ್ಯರ್ಥಿ ಆಗಮಿಸಿದ್ದರು. ವಾರ್ಡ್ ನಂ 28 ವಾರ್ಡನಲ್ಲಿ ಸುತ್ತಾಡಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಜೆಡಿಎಸ್ ಅಭ್ಯರ್ಥಿ ಸಮೀವುಲ್ಲಾ. ಡಾಂಗೆ ಪಾರ್ಕ್ ಭಗತ್ ಸಿಂಗ್ ನಗರ ಸೇರಿದಂತೆ ಹತ್ತಾರು ಕಡೆ ಸುತ್ತಾಡಿ ಕಾಂಗ್ರೆಸ್ ಅಭ್ಯರ್ಥಿ ಹುಲ್ಮನೆ ಗಣೇಶ್ ಪರ ಸಮೀವುಲ್ಲಾ ಪ್ರಚಾರ ಮಾಡಿದ್ದಾರೆ. ಸಾಮೀವುಲ್ಲಾ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಗೆ ಬೆಂಬಲವ್ಯಕ್ತಪಡಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:43 pm, Mon, 16 May 22