ವಾರಾಣಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ಶುರು: ಪೊಲೀಸ್ ಬಿಗಿ ಬಂದೋಬಸ್ತ್​

ವಾರಾಣಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ಶುರು: ಪೊಲೀಸ್ ಬಿಗಿ ಬಂದೋಬಸ್ತ್​
ಜ್ಞಾನವಾಪಿ ಮಸೀದಿ

Gyanvapi Mosque Survey:ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ(Gyanvapi) ಮಸೀದಿಯ ಸಮೀಕ್ಷೆ ಶುರುವಾಗಿದೆ. ಭಕ್ತರಿಗೆ ದರ್ಶನ ಪಡೆಯಲು ನೆರವಾಗುವಂತೆ ಪೊಲೀಸರು ಭದ್ರತಾ ಕಾರ್ಯಗಳನ್ನು ಕೈಗೊಂಡಿದ್ದಾರೆ.

TV9kannada Web Team

| Edited By: Nayana Rajeev

May 14, 2022 | 11:07 AM

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ(Gyanvapi) ಮಸೀದಿಯ ಸಮೀಕ್ಷೆ ಶುರುವಾಗಿದೆ. ಭಕ್ತರಿಗೆ ದರ್ಶನ ಪಡೆಯಲು ನೆರವಾಗುವಂತೆ ಪೊಲೀಸರು ಭದ್ರತಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮಸೀದಿ( Mosque)-ದೇವಸ್ಥಾನ( Temple) ಗಳ ವಿಚಾರ ದೇಶದಲ್ಲೀಗ ಭಾರಿ ಚರ್ಚೆಯಲ್ಲಿದೆ. ಅತ್ತ ತಾಜ್‌ಮಹಲ್‌ ಮತ್ತು ಕುತುಬ್‌ ಮಿನಾರ್‌ ಕುರಿತಾಗಿಯೂ ಭಾರಿ ವಾದ-ವಿವಾದಗಳು ಮುನ್ನೆಲೆಗೆ ಬಂದಿವೆ. ವಾರಣಾಸಿಯಲ್ಲೂ ಇಂತಹದೇ ವಿಚಾರ ಸುಪ್ರೀಂ ಕೋರ್ಟ್‌ವರೆಗೂ ಬಂದಿದೆ.

ಜ್ಞಾನವಾಪಿ ಮಸೀದಿ ಸಮೀಕ್ಷೆಯು ಬೆಳಗ್ಗೆ 8 ರಿಂದ ಆರಂಭಗೊಂಡಿದೆ. ವಾರಾಣಸಿಯ ಸಿವಿಲ್ ನ್ಯಾಯಾಲಯದ ಅನುಮತಿಯಂತೆ ಶುರುವಾಗಿದೆ. ಮಸೀದಿಯಿಂದ 500 ಮೀಟರ್ ದೂರದಲ್ಲಿರುವ ಅಂಗಡಿಗಳನ್ನು ಮುಚ್ಚಲಾಗಿದೆ.

ಜ್ಞಾನವಾಪಿ ಮಸೀದಿ ಸಮೀಕ್ಷೆ ನಿಲ್ಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ವಾರಾಣಿಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಿರುವ ಮಸೀದಿ ಸಂಕೀರ್ಣದ ಸಮೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.

ವಾರಾಣಸಿಯ ಸ್ಥಳೀಯ ನ್ಯಾಯಾಲಯದ ತೀರ್ಪಿನ ಬಳಿಕ ಅಂಜುಮನ್ ಇಂತೇಜಾಮಿಯಾ ಮಸ್ಜಿದ್ ಸಮಿತಿಯು, ಸುಪ್ರೀಂ ಮೊರೆ ಹೋಗಿತ್ತು. ಇಂದು ತೀರ್ಪು ಪ್ರಕಟಗೊಂಡಿದ್ದು, ಈಗಾಗಲೇ ವಾರಾಣಸಿಯ ಸ್ಥಳೀಯ ನ್ಯಾಯಾಲಯ ನೀಡಿದ್ದ ತೀರ್ಪನ್ನೇ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಈ ಮೂಲಕ ಮಸೀದಿಯ ವಿಡಿಯೋ ಚಿತ್ರೀಕರಣ ಮತ್ತು ಸಮೀಕ್ಷೆಯನ್ನು ಮುಂದುವರೆಸುವಂತೆ ತಿಳಿಸಿದೆ.

ಜ್ಞಾನವಾಪಿ ಮಸೀದಿ ಸಮೀಕ್ಷೆ ವಿರೋಧದ ಅರ್ಜಿ ವಿಚಾರಣೆ ಜ್ಞಾನವಾಪಿ ಮಸೀದಿ ಸಮೀಕ್ಷೆ ವಿರೋಧಿಸಿ ಅಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ನಲ್ಲಿ ನ್ಯಾ. ಚಂದ್ರಚೂಡ್ ಅವರ ಪೀಠವು ಇಂದು ವಿಚಾರಣೆ ನಡೆಸಲಿದೆ.

ಏನಿದು ಪ್ರಕರಣ? ವಾರಾಣಸಿಯ ಸಿವಿಲ್ ನ್ಯಾಯಾಲಯವು, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯೊಳಗೆ ಹಿಂದೂ ದೇವತೆಗಳ ಅಸ್ತಿತ್ವದ ಬಗ್ಗೆ ಪರಿಶೀಲನೆ ನಡೆಸಲು ಆದೇಶಿಸಿದೆ. ಅಲ್ಲದೆ ಈ ವೇಳೆ ವಿಡಿಯೋ ಚಿತ್ರೀಕರಣ ಮಾಡಿ ಸಾಕ್ಷ್ಯ ಸಂಗ್ರಹಿಸಲು ಸಮೀಕ್ಷೆ ಮಾಡುವಂತೆ ನಿರ್ದೇಶಿಸಿದೆ. ಮಸೀದಿಯ ಆಡಳಿತ ಮಂಡಳಿ ಆಕ್ಷೇಪದ ಹೊರತಾಗಿಯೂ ಜ್ಞಾನವಾಪಿ ಮಸೀದಿಯ ಸಮೀಕ್ಷೆ ಮುಂದುವರೆಯುತ್ತದೆ ಎಂದು ನಿನ್ನೆಯಷ್ಟೇ ನ್ಯಾಯಾಲಯ ಹೇಳಿತ್ತು.

ಸ್ಥಳೀಯ ನ್ಯಾಯಾಲಯವು ಈ ಹಿಂದೆ ಮೇ 10ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ ಮಸೀದಿ ಸಮಿತಿಯು ಮಸೀದಿಯೊಳಗೆ ವಿಡಿಯೋ ಚಿತ್ರೀಕರಣಕ್ಕೆ ವಿರೋಧಿಸಿದ್ದರಿಂದ ಸಮೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ.

ಈ ವಿಚಾರ ಮುನ್ನೆಲೆಗೆ ಬಂದಿದ್ದು ಐವರು ಮಹಿಳೆಯರಿಂದ. ಕಾಶಿ ವಿಶ್ವನಾಥ ಮಂದಿರ ಮತ್ತು ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ದೇವಸ್ಥಾನದಲ್ಲಿ ನಿತ್ಯ ಪೂಜೆಗೆ ಅನುಮತಿ ಕೋರಿ, ಈ ಮಹಿಳೆಯರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಅರ್ಜಿಯ ಮೇರೆಗೆ ವಾರಣಾಸಿಯ ಸಿವಿಲ್ ನ್ಯಾಯಾಲಯವು ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಲು ಆದೇಶ ನೀಡಿತ್ತು.

ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ ಮತ್ತೊಂದು ಅರ್ಜಿ ವಿಜಯ್ ಶಂಕರ್ ರಸ್ತೋಗಿ ಎಂಬ ಮತ್ತೋರ್ವ ವ್ಯಕ್ತಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಜ್ಞಾನವಾಪಿ ಮಸೀದಿಯ ಆವರಣವು ಸಂಪೂರ್ಣವಾಗಿ ಕಾಶಿ ವಿಶ್ವನಾಥನಿಗೆ ಸೇರಿದ್ದು ಎಂದು ಪ್ರತಿಪಾದಿಸಿದ್ದಾರೆ. ಈ ಅರ್ಜಿ 1991ರಿಂದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ಕಾಶಿ ವಿಶ್ವನಾಥ ದೇವಾಲಯವನ್ನು ಎರಡು ಸಾವಿರ ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಈ ದೇವಾಲಯವನ್ನು ಕೆಡವಿದ್ದಾನೆ ಎಂದು ರಸ್ತೋಗಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ದೇಶದಲ್ಲೀಗ ಮಸೀದಿ-ದೇವಸ್ಥಾನಗಳ ವಿಚಾರ ವ್ಯಾಪಕ ಚರ್ಚೆಯಲ್ಲಿದೆ. ಅತ್ತ ತಾಜ್‌ಮಹಲ್‌ ಮತ್ತು ಕುತುಬ್‌ ಮಿನಾರ್‌ ಕುರಿತಾಗಿಯೂ ಭಾರಿ ವಾದ ವಿವಾದಗಳು ಮುನ್ನೆಲೆಗೆ ಬಂದಿವೆ. ಈಗ ವಾರಣಾಸಿಯಲ್ಲೂ ಇಂತಹದೇ ವಿಚಾರ ಸುಪ್ರೀಂ ಕೋರ್ಟ್‌ವರೆಗೂ ಬಂದಿದೆ.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada