ಶೆಡ್ ತೆರವು ವಿಚಾರಕ್ಕೆ ದಾವಣಗೆರೆ ಪಾಲಿಕೆ ಮೇಯರ್ ಎದುರೇ ಹೊಡೆದಾಟ!

| Updated By: sandhya thejappa

Updated on: Oct 19, 2021 | 12:30 PM

ವಾರ್ಡ್ ಸದಸ್ಯ ನಾಗರಾಜ್ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಮಳೆ ನೀರಿನಿಂದ ಸಮಸ್ಯೆಯಾದ ಹಿನ್ನೆಲೆ ಪಾಲಿಕೆ ಮೇಯರ್ ಎಸ್ ಟಿ ವಿರೇಶ್ ಪರಿಶೀಲನೆಗೆ ತೆರಳಿದ್ದರು.

ಶೆಡ್ ತೆರವು ವಿಚಾರಕ್ಕೆ ದಾವಣಗೆರೆ ಪಾಲಿಕೆ ಮೇಯರ್ ಎದುರೇ ಹೊಡೆದಾಟ!
ಸ್ಥಳೀಯರ ಮಧ್ಯೆ ಗಲಾಟೆ
Follow us on

ದಾವಣಗೆರೆ: ಶೆಡ್ ತೆರವು ವಿಚಾರಕ್ಕೆ ಸ್ಥಳೀಯರ ಮಧ್ಯೆ ಗಲಾಟೆ ನಡೆದು, ದಾವಣಗೆರೆ ಪಾಲಿಕೆ ಮೇಯರ್ ಎದುರೇ ಹೊಡೆದಾಡಿಕೊಂಡಿದ್ದಾರೆ. ಈ ಘಟನೆ ನಗರದ ಕಾಟನ್ ಮಿಲ್ ಪ್ರದೇಶದಲ್ಲಿ ನಡೆದಿದೆ. ಮೂಲಸೌಕರ್ಯ ಕಲ್ಪಿಸಲು 31ನೇ ವಾರ್ಡ್ ಸದಸ್ಯ ನಾಗರಾಜ್ ಮನವಿ ಮಾಡಿದ್ದರು. ಮೇಯರ್ ಎಸ್ ಟಿ ವೀರೇಶ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಕೈಕೈ ಮಿಲಾಯಿಸಿ ಸ್ಥಳೀಯರು ಗಲಾಟೆ ನಡೆಸಿದ್ದಾರೆ.

ವಾರ್ಡ್ ಸದಸ್ಯ ನಾಗರಾಜ್ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಮಳೆ ನೀರಿನಿಂದ ಸಮಸ್ಯೆಯಾದ ಹಿನ್ನೆಲೆ ಪಾಲಿಕೆ ಮೇಯರ್ ಎಸ್ ಟಿ ವಿರೇಶ್ ಪರಿಶೀಲನೆಗೆ ತೆರಳಿದ್ದರು. ಸ್ಲಾಬ್ ನಿರ್ಮಾಣಕ್ಕೆ ಶೆಡ್ ತೆರವು ಮಾಡುವಂತೆ ಮೇಯರ್ ಸೂಚಿಸಿದ್ದಾರೆ. ಆಗ ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿ ಸ್ಥಳೀಯರೊಂದಿಗೆ ಜಗಳಕ್ಕಿಳಿದು ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿ ವಿರುದ್ಧ ಸಿಟ್ಟಾಗಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಮೇಯರ್ ಹಾಗೂ ಪಾಲಿಕೆ ಸದಸ್ಯರು ಬಿಡಿಸಿದರೂ ಬಿಡದೆ ಕೂಗಾಟ ನಡೆಸಿದ್ದಾರೆ.

6 ವರ್ಷದ ಮಗು ಸಾವು
ದಾವಣಗೆರೆಯ ಸರಸ್ವತಿಪುರದಲ್ಲಿ ನೀರಿನ ತೊಟ್ಟಿಯಲ್ಲಿ ಮುಳುಗಿ 6 ವರ್ಷದ ಮಗು ಸಾವನ್ನಪ್ಪಿದೆ. ಮೃತ ಮಗು
ಮೋಹಿತ್ ಎಂದು ತಿಳಿದುಬಂದಿದೆ. ಆಟವಾಡಲು ಹೋಗಿ ಮಗು ನೀರಿನ ತೊಟ್ಟಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಎಲ್ಐಸಿ ಅಧಿಕಾರಿ ಪ್ರಕಾಶ ಎಂಬುವರ ಪುತ್ರ ಮೋಹಿತ್ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ತೊಟ್ಟಿ ಮುಚ್ಚದೇ ಹಾಗೆ ಬಿಟ್ಟ ಹಿನ್ನೆಲೆ ದುರಂತ ಸಂಭವಿಸಿದೆ ಅಂತ ಆರೋಪಿದ ಸಂಬಂಧಿಕರು, ಕಟ್ಟಡ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ

‘ಫಿಟ್​ನೆಸ್ ಹೋದರೆ ರಾಜಕೀಯ ಬಿಡುತ್ತೇನೆ’; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

New Novel : ಅಚ್ಚಿಗೂ ಮೊದಲು : ಕಥೆಗಾರ ಪದ್ಮನಾಭ ಭಟ್ ಶೇವ್ಕಾರ ಅವರ ಕಾದಂಬರಿ ‘ದೇವ್ರು’ ಇದೇ ಭಾನುವಾರ ಬಿಡುಗಡೆ