Siddaramaiah: ‘ಫಿಟ್​ನೆಸ್ ಹೋದರೆ ರಾಜಕೀಯ ಬಿಡುತ್ತೇನೆ’; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಂದಗಿ ವಿಧಾನಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಫಿಟ್​ನೆಸ್ ಕುರಿತು ಮಾತನಾಡಿರುವುದು ಎಲ್ಲರ ಗಮನಸೆಳೆದಿದೆ. ಇದೇ ವೇಳೆ ಅವರು ಫಿಟ್​ನೆಸ್ ಹೋದರೆ ರಾಜಕೀಯ ಬಿಡುವುದಾಗಿಯೂ ಘೋಷಿಸಿದ್ದಾರೆ.

Siddaramaiah: ‘ಫಿಟ್​ನೆಸ್ ಹೋದರೆ ರಾಜಕೀಯ ಬಿಡುತ್ತೇನೆ’; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: shivaprasad.hs

Updated on:Oct 19, 2021 | 12:29 PM

ವಿಜಯಪುರ: ಸಿಂದಗಿಯಲ್ಲಿ ಗ್ರೀನ್ ಟೀ ಕುಡಿಯುತ್ತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಫಿಟ್​ನೆಸ್ ಕುರಿತು ಮಾತಾನಡಿದ್ದಾರೆ. ಇದೇ ವೇಳೆ ಅವರು ಒಂದು ವೇಳೆ ಫಿಟ್​ನೆಸ್ ಹೋದರೆ ರಾಜಕೀಯವ ಬಿಡುತ್ತೇನೆ ಎಂದು ಹೇಳಿರುವುದು ಎಲ್ಲರ ಗಮನಸೆಳೆದಿದೆ. ‘‘ಮಧುಮೇಹವಿರುವ ಹಿನ್ನೆಲೆಯಲ್ಲಿ ನಾನು ಶುಗರ್ ಲೆಸ್ ಗ್ರೀನ್ ಟೀ ಕುಡಿಯುತ್ತೇನೆ.  ನೋ ಮಿಲ್ಕ್, ನೋ ಶುಗರ್. ನಮ್ಮ ದೇಹದಲ್ಲಿ ಜಾಸ್ತಿ ಇರುವುದನ್ನು ಬಿಡಬೇಕು. ಕಡಿಮೆ ಇರುವುದನ್ನು ತೆಗೆದುಕೊಳ್ಳಬೇಕು’’ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಇದೇ ವೇಳೆ ಅವರು, ‘‘ನಾನು ಯಾವಾಗಲೂ ಫಿಟ್ ಆಗಿ ಇರುತ್ತೇನೆ. ಫಿಟ್‌ನೆಸ್ ಹೋದರೆ ಆಗ ರಾಜಕೀಯ ಬಿಡುತ್ತೇನೆ. ಓಡಾಟಕ್ಕೆ ಆಗದಿದ್ದಾಗ ನಮಗೆ ರಾಜಕೀಯ ಏಕೆ ಬೇಕು?’’ ಎಂದು ಸಿದ್ದರಾಮಯ್ಯ ನುಡಿದಿದ್ದಾರೆ.

‘‘ವಯಸ್ಸಾದ ಮೇಲೆ ನರಳಾಡುತ್ತಾ ರಾಜಕೀಯ ಮಾಡಬಾರದು. ಇದನ್ನು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ. ಬೇರೆಯವರು ಅವರವರ ಇಷ್ಟ. ಸದ್ಯಕ್ಕೆ ಫಿಟ್ ಆಗಿದ್ದೇನೆ, ಫಿಟ್ ಆಗಿರೋವರೆಗೂ ರಾಜಕೀಯದಲ್ಲಿರುತ್ತೇನೆ. ಫಿಟ್ ಇಲ್ಲದಾಗ ರಾಜಕೀಯ ಬಿಡುವೆ’’ ಎಂದು ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟವನು’: ಸಿದ್ದರಾಮಯ್ಯ

‘‘ನಾನು ಯಾವ ಕುಟುಂಬದ ಹಿಡಿತದಲ್ಲಿಯೂ ಇಲ್ಲ. ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಟ್ಟವನು ಮತ್ತು ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟವನು’’ ಎಂದು ಸಿಎಂ ಬೊಮ್ಮಾಯಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸಿಂದಗಿ ವಿಧಾನಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ. ದಲಿತ, ಮುಸ್ಲಿಂ ಸಿಎಂ ಘೋಷಣೆ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಿರುವ ಅವರು ‘‘ಚುನಾವಣೆಗೂ ಮುನ್ನೆ ಸಿಎಂ ಘೋಷಣೆ ಮಾಡಲ್ಲ. ಅಂತಹ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ’’ ಎಂದು ನುಡಿದಿದ್ದಾರೆ. ಈ ಮೂಲಕ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಬಗ್ಗೆ ಸಲೀಂ, ಉಗ್ರಪ್ಪ ಚರ್ಚೆ ನಡೆಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಮಾತನಾಡಿದ್ದು, ‘‘ಈ ಬಗ್ಗೆ ಸರ್ಕಾರ ತನಿಖೆ ಮಾಡಿಸಲಿ, ನಮ್ಮ ವಿರೋಧವಿಲ್ಲ’’ ಎಂದು ಹೇಳಿದ್ದಾರೆ. ಇದರೊಂದಿಗೆ ಯತ್ನಾಳ್ ಆರೋಪದ ಬಗ್ಗೆ, ವಿಶ್ವನಾಥ್ ಮಾಡಿದ್ದ ಆರೋಪದ ಬಗ್ಗೆ ಕೂಡ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದ್ದಾರೆ. ಇದೇ ವೇಳೆ H.D.ಕುಮಾರಸ್ವಾಮಿ ಬಗ್ಗೆ ಲೇವಡಿ ಮಾಡಿರುವ ಸಿದ್ದರಾಮಯ್ಯ, ‘‘ಶಕ್ತಿ ಇರೋರನ್ನು ಕಂಡರೆ ಕುಮಾರಸ್ವಾಮಿಗೆ ಭಯ. ವೀಕ್ ಇರೋರ ಬಗ್ಗೆ ಯಾರಾದ್ರೂ ಮಾತಾಡ್ತಾರಾ?’’ ಎಂದು ಪ್ರಸ್ನಿಸಿದ್ದಾರೆ. ಜೆಡಿಎಸ್ ಎಲ್ಲೂ ಗೆಲ್ಲುವುದಿಲ್ಲ. ಹೀಗಾಗಿ ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:

JDS: ಇಬ್ರಾಹಿಂ ಭೇಟಿಯಾದ ಹೆಚ್‌ಡಿ ಕುಮಾರಸ್ವಾಮಿ -ಡಿಸೆಂಬರ್‌ನಲ್ಲಿ ಇಬ್ರಾಹಿಂ ಜೆಡಿಎಸ್​ಗೆ ವಾಪಸ್​

ಬೆಂಗಳೂರಿನಲ್ಲಿ ರಸ್ತೆ ತೆರಿಗೆ ವಂಚಿಸಿ ಅನಧಿಕೃತವಾಗಿ ಸಂಚರಿಸುತ್ತಿರುವ ಐಶಾರಾಮಿ ಕಾರುಗಳಿಗೆ ಸಿಸಿಬಿ ಗಾಳ!

ಮಂಗಳೂರು: ವಿದ್ಯಾರ್ಥಿನಿಗೆ ಕಿರುಕುಳ ಪ್ರಕರಣ: ವಕೀಲ ರಾಜೇಶ್ ಭಟ್ ಸೇರಿ ನಾಲ್ವರ ವಿರುದ್ಧ ಎಫ್​ಐಆರ್; ತನಿಖೆಗೆ 3 ತಂಡ ರಚನೆ

Published On - 12:17 pm, Tue, 19 October 21