JDS: ಇಬ್ರಾಹಿಂ ಭೇಟಿಯಾದ ಹೆಚ್‌ಡಿ ಕುಮಾರಸ್ವಾಮಿ -ಡಿಸೆಂಬರ್‌ನಲ್ಲಿ ಇಬ್ರಾಹಿಂ ಜೆಡಿಎಸ್​ಗೆ ವಾಪಸ್​

cm ibrahim: ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್​ ತೊರೆದು ಜೆಡಿಎಸ್​ಗೆ ಮರಳುವುದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ಅಸೆಂಬ್ಲಿ ಬೈಎಲೆಕ್ಷನ್​ ನಡೆದಿರುವಾಗ ಮತ್ತು ಅದರಲ್ಲೂ ಮುಸ್ಲಿಂ ಸಮುದಾಯದ ಓಲೈಕೆ ನಡೆದಿರುವಾಗ, ಇಬ್ಬರೂ ನಾಯಕರ ಭೇಟಿ ಕುತೂಹಲಕಾರಿಯಾಗಿದೆ.

JDS: ಇಬ್ರಾಹಿಂ ಭೇಟಿಯಾದ ಹೆಚ್‌ಡಿ ಕುಮಾರಸ್ವಾಮಿ -ಡಿಸೆಂಬರ್‌ನಲ್ಲಿ ಇಬ್ರಾಹಿಂ ಜೆಡಿಎಸ್​ಗೆ ವಾಪಸ್​
ಇಬ್ರಾಹಿಂ ಭೇಟಿಯಾದ ಹೆಚ್‌ಡಿ ಕುಮಾರಸ್ವಾಮಿ: ಡಿಸೆಂಬರ್‌ನಲ್ಲಿ ಇಬ್ರಾಹಿಂ ಜೆಡಿಎಸ್​ಗೆ ವಾಪಸ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 19, 2021 | 12:32 PM

ಬೆಂಗಳೂರು: ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್​ ತೊರೆದು ಜೆಡಿಎಸ್​ಗೆ ಮರಳುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಇಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಸಿಂದಗಿಗೆ ಉಪಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಸಿ.ಎಂ.ಇಬ್ರಾಹಿಂ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಇಬ್ರಾಹಿಂ ಜೆಡಿಎಸ್​ ರಿಟರ್ನ್​ ಟಿಕೆಟ್ ಕನ್ಫರ್ಮ್​?​ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್​ ಎಂಎಲ್​ಸಿ ಸಿ.ಎಂ.ಇಬ್ರಾಹಿಂ ಇಬ್ಬರೂ ನಾಯಕರು ಸುದೀರ್ಘ ಮಾತುಕತೆ ನಡೆಸಿದ್ದು, ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದ ಕುರಿತು ಚರ್ಚೆಗಳು ನಡೆದವು ಎಂದು ತಿಳಿದುಬಂದಿದೆ. ಉಭಯ ನಾಯಕರ ನಡುವಣ ಚರ್ಚೆಯ ಫಲಶ್ರುತಿಯಾಗಿ ಇಬ್ರಾಹಿಂ ಡಿಸೆಂಬರ್‌ನಲ್ಲಿ JDS ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಇಬ್ರಾಹಿಂ ಜತೆ ಇನ್ನೂ ಹಲವು ಮುಖಂಡರು JDS ಸೇರಲಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಅಸೆಂಬ್ಲಿ ಬೈಎಲೆಕ್ಷನ್​ ನಡೆದಿರುವಾಗ ಮತ್ತು ಅದರಲ್ಲೂ ಮುಸ್ಲಿಂ ಸಮುದಾಯದ ಓಲೈಕೆ ನಡೆದಿರುವಾಗ, ಇಬ್ಬರೂ ನಾಯಕರ ಭೇಟಿ ಕುತೂಹಲಕಾರಿಯಾಗಿದೆ.

ಇಂದಿನಿಂದ ಮಾಜಿ ಸಿಎಂ ಹೆಚ್‌ಡಿಕೆಯಿಂದ ಭರ್ಜರಿ ಪ್ರಚಾರ: ಅಕ್ಟೋಬರ್ 30ರಂದು ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಇಂದಿನಿಂದ ಮಾಜಿ ಸಿಎಂ ಹೆಚ್‌ಡಿಕೆ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಪ್ರಚಾರದಲ್ಲಿ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಲು ಪ್ಲ್ಯಾನ್ ಮಾಡಿದ್ದು, ಸಿದ್ದರಾಮಯ್ಯ – ಬಿಎಸ್‌ವೈ ಭೇಟಿ ಅಸ್ತ್ರ ಪ್ರಯೋಗಕ್ಕೆ ಚಿಂತನೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  ಮತ್ತೊಂದೆಡೆ ಹೆಚ್​ ಡಿ ದೇವೇಗೌಡರಿಂದ ನೀರಾವರಿ ವಿಚಾರ ಪ್ರಸ್ತಾಪ ಮಾಡಿ, ನೀರಾವರಿ ವಿಚಾರವಾಗಿ ರಾಷ್ಟ್ರೀಯ ಪಕ್ಷಗಳಿಗೆ HDD ಟಕ್ಕರ್ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.

ಸಿಂದಗಿಯಲ್ಲಿ ಜೆಡಿಎಸ್-ಬಿಜೆಪಿ ನೇರಾನೇರ; ಕಾಂಗ್ರೆಸ್ ಪಕ್ಷಕ್ಕೆ 3ನೇ ಸ್ಥಾನ- ಹೆಚ್.ಡಿ.ಕುಮಾರಸ್ವಾಮಿ ಸಿಂದಗಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಹೋರಾಟ ಇದೆ. ಕಾಂಗ್ರೆಸ್ ಪಕ್ಷ 3ನೇ ಸ್ಥಾನದಲ್ಲಿದೆ ಎಂದು ಕಲಬುರಗಿ ಏರ್‌ಪೋರ್ಟ್‌ನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆಗೆ H.D.ಕುಮಾರಸ್ವಾಮಿ ಇದೇ ವೇಳೆ ತಿರುಗೇಟು ನೀಡಿದ್ದಾರೆ. ಕಾಲು ಕೆರೆದುಕೊಂಡು ಹೋಗಲು ನನಗೆ ಬೇರೆ ಕೆಲಸವಿಲ್ವಾ? ನನ್ನ ಸುದ್ದಿಗೆ ಬರದಿದ್ದರೆ ನಾನು ಅವರ ತಂಟೆಗೆ ಹೋಗಲ್ಲ. ಕಾಂಗ್ರೆಸ್‌ನಂತೆ ವೈಯಕ್ತಿಕ ಮತ ಪಡೆಯುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಅಲ್ಪಸಂಖ್ಯಾತ ನಾಯಕರ ನಡುವೆ ಸಮರ: ಶಾಸಕ ಶಾಸಕ ಜಮೀರ್ ಅಹ್ಮದ್​ಗೆ ಮಣೆ; ಸಿ ಎಂ ಇಬ್ರಾಹಿಂ ದೂರ

TV9 Kannada Headlines @ 12 PM (19-10-2021)

(hd kumaraswamy meets cm ibrahim in bangalore congress leader ibrahim to return to jds in december)

Published On - 12:03 pm, Tue, 19 October 21