ಕೆಂಪೇಗೌಡ ಪಾರ್ಕ್ ಕೋಟೆ ಗೋಡೆ ಕುಸಿತ ಪ್ರಕರಣ: ಶಾಸಕ ಮಂಜುನಾಥ್ ಸಭೆ, ಸೂಕ್ತ ತನಿಖೆಗೆ ಆಗ್ರಹ
ಬೆಂಗಳೂರು: ಬೆಂಗಳೂರಿನ ವಾರ್ಡ್ ನಂಬರ್ 13 ರ ಮಲ್ಲಸಂದ್ರ ಗುಟ್ಟೆಯಲ್ಲಿ ಬಹುಕೋಟಿ ವೆಚ್ಚದ ಕೋಟೆಯ ಗೋಡೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆರ್. ಮಂಜುನಾಥ್ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಘಟನೆ ಕುರಿತು ದಾಸರಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಶಾಸಕರು ಸಭೆ ನಡೆಸಿದ್ದು, ವಲಯ ಆಯುಕ್ತ ನರಸಿಂಹ ಮೂರ್ತಿ ಸೇರಿದಂತೆ ಎಂಜಿನಿಯರ್‌ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇನ್ನು ಶಾಸಕರು ಮಾಜಿ ಕಾರ್ಪೋರೇಟರ್, ಕೋಟೆ ನಿರ್ಮಾಣ ಮಾಡಿಸಿದ್ದ ಲೋಕೇಶ್ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದು, ಟೆಂಡರ್ ಹಾಗೂ ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿ […]
ಬೆಂಗಳೂರು: ಬೆಂಗಳೂರಿನ ವಾರ್ಡ್ ನಂಬರ್ 13 ರ ಮಲ್ಲಸಂದ್ರ ಗುಟ್ಟೆಯಲ್ಲಿ ಬಹುಕೋಟಿ ವೆಚ್ಚದ ಕೋಟೆಯ ಗೋಡೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆರ್. ಮಂಜುನಾಥ್ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಘಟನೆ ಕುರಿತು ದಾಸರಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಶಾಸಕರು ಸಭೆ ನಡೆಸಿದ್ದು, ವಲಯ ಆಯುಕ್ತ ನರಸಿಂಹ ಮೂರ್ತಿ ಸೇರಿದಂತೆ ಎಂಜಿನಿಯರ್‌ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇನ್ನು ಶಾಸಕರು ಮಾಜಿ ಕಾರ್ಪೋರೇಟರ್, ಕೋಟೆ ನಿರ್ಮಾಣ ಮಾಡಿಸಿದ್ದ ಲೋಕೇಶ್ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದು, ಟೆಂಡರ್ ಹಾಗೂ ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿ ನಡೆಸಿರೋ ಆರೋಪ ಮಾಡಿದ್ದಾರೆ.
ಸಭೆಯಲ್ಲಿ ಕೋಟೆಯ ಯಾವ ಯಾವ ಭಾಗದಲ್ಲಿ ಕಳೆಪೆ ಕಾಮಗಾರಿ ನಡೆದಿದೆ. ಅಕ್ರಮ ಕಾಮಗಾರಿ ಎಲ್ಲಿ ನಡೆದಿದೆ ಅನ್ನೋದರ ಪತ್ತೆ ಕಾರ್ಯವನ್ನ ಅಧಿಕಾರಿಗಳಿಗೆ ವಹಿಸಲಾಗಿದೆ. ಅಲ್ಲದೆ ಅಕ್ರಮಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗೋವರೆಗೂ ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಪ್ರಕರಣ: ಕೇವಲ ಎರಡು ವರ್ಷಗಳ ಹಿಂದಷ್ಟೆ ನಿರ್ಮಾಣವಾಗಿದ್ದ ಕೋಟೆಯ ಗೋಡೆ ಕುಸಿತದಿಂದ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಗೊಡೆ ಕುಸಿತವಾಗಿರುವ ಪ್ರದೇಶದಲ್ಲಿ ಬಯಲು ರಂಗಮಂದಿರವಿದ್ದು, ಪ್ರತಿನಿದ ಮಕ್ಕಳು ಸೇರಿದಂತೆ ಸಾರ್ವಜನಿಕರು ವಾಯು ವಿಹಾರಕ್ಕೆ ಈ ಪಾರ್ಕ್‌ಗೆ ಬರುತ್ತಿದ್ದು ಜನ ಇದ್ದ ಸಂದರ್ಭದಲ್ಲಿ ಗೋಡೆ ಕುಸಿತದಿಂದ ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸುವಂತಾಗಿತ್ತು.
ಇನ್ನೂ 29-08-2020 ರಂದು ಸ್ಥಳೀಯ ಶಾಸಕರು ಕೋಟೆ ಅವ್ಯವಹಾರ ಕುರಿತು ಪ್ರತಿಭಟನೆ ನಡೆಸಿದರೂ ಸಹ ಅವರನ್ನ ಲೆಕ್ಕಿಸದೆ, ಪೊಲೀಸರಿಂದ ಬಂಧನಕ್ಕೆ ಒಳಪಡಿಸಿ ಈ ಪಾರ್ಕ್ ಉದ್ಘಾಟನೆಯನ್ನ ಅಂದಿನ ಕಾರ್ಪೊರೇಟರ್ ಲೋಕೇಶ್ ಹಾಗೂ ಸಂಸದ ಡಿವಿ ಸದಾನಂದ ಗೌಡ ನೆರೆವೇರಿಸಿದ್ದರು.
Also Read:
ಕೆಂಪೇಗೌಡ ಪಾರ್ಕ್‌ನಲ್ಲಿ ಮತ್ತೊಂದು ಅವಘಡ: ಕೋಟೆ ಗೋಡೆ ಕುಸಿತ; 3 ವರ್ಷ ಹಿಂದಷ್ಟೇ ಬಿಬಿಎಂಪಿ ನಿರ್ಮಿಸಿದ್ದ ಗೋಡೆ ಇದು
CM Bommai ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ರಮೇಶ್ ಜಾರಕಿಹೊಳಿ ಮೀಟಿಂಗ್|Tv9kannada
(wall collapse in bbmp kempegowda park in dasarahalli mla meetng held )
Published On - 11:26 am, Tue, 19 October 21