ಅಲ್ಪಸಂಖ್ಯಾತರನ್ನು ಓಲೈಸುವುದು ಖಯಾಲಿಯಾಗಿಬಿಟ್ಟಿದೆ: ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಸರಣಿ ಟ್ವೀಟ್
ಒಂದು ವರ್ಗದ ಓಲೈಕೆಗಾಗಿ ಮಾಡಿದ ಪ್ರಹಸನದಿಂದಾಗಿಯೇ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬಾದಾಮಿಗೆ ಓಡುವಂತಾಗಿತ್ತು. ಆದರೂ, ಸಿದ್ದರಾಮಯ್ಯ ಅವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
ಬೆಂಗಳೂರು: ಬಹುಸಂಖ್ಯಾತರ ಮೇಲೆ ದ್ವೇಷ ಕಕ್ಕುವುದು, ಅಲ್ಪಸಂಖ್ಯಾತರನ್ನು ಓಲೈಸುವುದು ಖಯಾಲಿಯಾಗಿಬಿಟ್ಟಿದೆ. ಚುನಾವಣೆ, ಉಪಚುನಾವಣೆ ಬಂದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಬದಲಾಗುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಅಲ್ಲದೇ ಸಿದ್ದರಾಮಯ್ಯ ಅವರನ್ನು ಬುರುಡೆರಾಮಯ್ಯ ಎಂದು ಟ್ವೀಟ್ ಮಾಡಿದೆ.
ಖಡ್ಗದ ಮೂಲಕ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಸುವುದಕ್ಕೆ ಸಿದ್ದರಾಮಯ್ಯ ಪ್ರೋತ್ಸಾಹ ನೀಡಿದ್ದರು. ಒಂದು ವರ್ಗದ ಓಲೈಕೆಗಾಗಿ ಮಾಡಿದ ಪ್ರಹಸನದಿಂದಾಗಿಯೇ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬಾದಾಮಿಗೆ ಓಡುವಂತಾಗಿತ್ತು. ಆದರೂ, ಸಿದ್ದರಾಮಯ್ಯ ಅವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
ಇದೇ ಖಡ್ಗದ ಮೂಲಕ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಸುವುದಕ್ಕೆ @siddaramaiah ಪ್ರೋತ್ಸಾಹ ನೀಡಿದ್ದರು.
ಒಂದು ವರ್ಗದ ಓಲೈಕೆಗಾಗಿ ಮಾಡಿದ ಪ್ರಹಸನದಿಂದಾಗಿಯೇ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬಾದಾಮಿಗೆ ಓಡುವಂತಾಗಿತ್ತು.
ಆದರೂ, ಸಿದ್ದರಾಮಯ್ಯ ಅವರಿಗೆ ಇನ್ನೂ ಬುದ್ದಿ ಬಂದಿಲ್ಲ.
3/4#ಬುರುಡೆರಾಮಯ್ಯ pic.twitter.com/U2yexUTQs3
— BJP Karnataka (@BJP4Karnataka) October 19, 2021
ಸುತ್ತಿ ಬಳಸಿ ಮಾತನಾಡುವ ಬದಲಿಗೆ, ಬಹುಸಂಖ್ಯಾತರನ್ನು ತುಳಿದು, ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿದ್ದೇನೆ. ಹೀಗಾಗಿ ಚಾಮರಾಜಪೇಟೆಗೆ ವಲಸೆ ಹೋಗುತ್ತಿದ್ದೇನೆಂದು ನೇರವಾಗಿ ಹೇಳಿ. ವಲಸೆ ಹೋಗುವುದಕ್ಕೆ ಸಿದ್ಧತೆ ನಡೆಸಿದ್ದು ನಿಜವಲ್ಲವೇ? ಸಿದ್ದರಾಮಯ್ಯನವರೇ, ಕಿಸ್ ಕಾ ಸಾತ್ ಕಿಸ್ ಕಾ ವಿಕಾಸ್? ಎಂದು ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿ ಬಿಜೆಪಿ ಪ್ರಶ್ನಿಸಿದೆ.
ಬಾದಾಮಿಯಿಂದ ಮತ್ತೆ ವಲಸೆ ಹೋಗಲು @siddaramaiah ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.
ಅದಕ್ಕಾಗಿ ಈಗ ಮತ್ತೆ ಓಲೈಕೆ ರಾಜಕಾರಣದ ಹಾದಿ ಹಿಡಿದಿದ್ದಾರೆ. ಈ ಮೂಲಕ ಚಾಮರಾಜಪೇಟೆ ಕ್ಷೇತ್ರಕ್ಕೆ ವಲಸೆಗೆ ಹೋಗಲು ಸಿದ್ಧತೆ ನಡೆಸಿದ್ದು ನಿಜವಲ್ಲವೇ?
ಸಿದ್ದರಾಮಯ್ಯನವರೇ, ಕಿಸ್ ಕಾ ಸಾತ್ ಕಿಸ್ ಕಾ ವಿಕಾಸ್?
— BJP Karnataka (@BJP4Karnataka) October 19, 2021
ಮಾನ್ಯ @siddaramaiah ಅವರೇ,
ಯಾರನ್ನು ಓಲೈಸಲು ನೀವು ಈ ಮಾತನ್ನು ಹೇಳಿದ್ದೀರಿ ಎಂದು ರಾಜ್ಯದ ಜನತೆಗೆ ತಿಳಿದಿದೆ.
ಚುನಾವಣೆ, ಉಪಚುನಾವಣೆ ಎದುರಾದಾಗಲೆಲ್ಲ ನಿಮ್ಮ ವರಸೆ ಇದೇ ರೀತಿ ಬದಲಾಗುತ್ತದೆ.
ಬಹುಸಂಖ್ಯಾತರ ಮೇಲೆ ದ್ವೇಷ ಕಕ್ಕುವುದು, ಅಲ್ಪಸಂಖ್ಯಾತರನ್ನು ಓಲೈಸುವುದು ನಿಮ್ಮ ಖಯಾಲಿಯಾಗಿಬಿಟ್ಟಿದೆ.
1/4#ಬುರುಡೆರಾಮಯ್ಯ pic.twitter.com/kpHhoiU1Oe
— BJP Karnataka (@BJP4Karnataka) October 19, 2021
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂದ ಸಲೀಂ; ಮೌನವಾಗಿ ಆಲಿಸಿರುವ ಉಗ್ರಪ್ಪ – ಟ್ವೀಟ್ ಮಾಡಿ ಕೆಣಕಿದ ಬಿಜೆಪಿ!
Published On - 2:01 pm, Tue, 19 October 21