AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಕುಸಿಯುವ ಭೀತಿಯಲ್ಲಿ ಹಲಸೂರಿನ ಅಪಾರ್ಟ್​ಮೆಂಟ್; 27 ಕುಟುಂಬಗಳ ಸ್ಥಳಾಂತರಕ್ಕೆ ಬಿಬಿಎಂಪಿ ಸೂಚನೆ

ತಕ್ಷಣವೇ ನಿವಾಸಿಗಳನ್ನ ಸ್ಥಳಾಂತರಿಸದಿದ್ರೆ ಮುಂದಿನ ಅನಾಹುತಕ್ಕೆ ನೀವೇ ಹೊಣೆ ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 35 ವರ್ಷದ ಹಿಂದೆ ಕೆಹೆಚ್​ಬಿ ನಿರ್ಮಿಸಿದ್ದ ಅಪಾರ್ಟ್​ಮೆಂಟ್ ಇದಾಗಿದೆ. ಈಗ ಎರಡಂತಸ್ಥಿನ ಅಪಾರ್ಟ್​ಮೆಂಟ್​ ನಿರ್ವಹಣೆ ಇಲ್ಲದೇ ಶಿಥಿಲಗೊಂಡಿದೆ. 

Bengaluru: ಕುಸಿಯುವ ಭೀತಿಯಲ್ಲಿ ಹಲಸೂರಿನ ಅಪಾರ್ಟ್​ಮೆಂಟ್; 27 ಕುಟುಂಬಗಳ ಸ್ಥಳಾಂತರಕ್ಕೆ ಬಿಬಿಎಂಪಿ ಸೂಚನೆ
ಬಿಬಿಎಂಪಿ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Oct 19, 2021 | 3:58 PM

Share

ಬೆಂಗಳೂರು: ನಗರದಲ್ಲಿ ಮತ್ತೊಂದು ಕಟ್ಟಡಕ್ಕೆ ಕಂಟಕ ಎದುರಾಗಿದೆ. ಬೆಂಗಳೂರಿನ ಹಲಸೂರಿನಲ್ಲಿ ಇರುವ ಕೆಹೆಚ್​ಬಿ ಅಪಾರ್ಟ್​ಮೆಂಟ್ ಕುಸಿಯುವ ಭೀತಿಯಲ್ಲಿದೆ. ಶಿಥಿಲಗೊಂಡ ಅಪಾರ್ಟ್​ಮೆಂಟ್ ತೆರವಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ನೀಡಿದೆ. ಅಪಾರ್ಟ್​ಮೆಂಟ್​ನಲ್ಲಿ 27 ಕುಟುಂಬಗಳು ವಾಸವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹಲಸೂರಿನಲ್ಲಿರುವ ಕೆಹೆಚ್​ಬಿ ಅಪಾರ್ಟ್​ಮೆಂಟ್​​ ಕುಸಿಯುವ ಭೀತಿಯಲ್ಲಿ ಇರುವುದರಿಂದ 27 ಕುಟುಂಬಗಳನ್ನು ಸ್ಥಳಾಂತರಿಸುವಂತೆ ಕೆಹೆಚ್​ಬಿಗೆ ನೋಟಿಸ್​ ನೀಡಲಾಗಿದೆ. ಅಪಾರ್ಟ್​ಮೆಂಟ್ ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ ಕೊಡಲಾಗಿದೆ. ತಕ್ಷಣವೇ ನಿವಾಸಿಗಳನ್ನ ಸ್ಥಳಾಂತರಿಸದಿದ್ರೆ ಮುಂದಿನ ಅನಾಹುತಕ್ಕೆ ನೀವೇ ಹೊಣೆ ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 35 ವರ್ಷದ ಹಿಂದೆ ಕೆಹೆಚ್​ಬಿ ನಿರ್ಮಿಸಿದ್ದ ಅಪಾರ್ಟ್​ಮೆಂಟ್ ಇದಾಗಿದೆ. ಈಗ ಎರಡಂತಸ್ಥಿನ ಅಪಾರ್ಟ್​ಮೆಂಟ್​ ನಿರ್ವಹಣೆ ಇಲ್ಲದೇ ಶಿಥಿಲಗೊಂಡಿದೆ.

ಬೆಂಗಳೂರಿನ ಯಾವ ಪ್ರದೇಶದಲ್ಲಿ ಎಷ್ಟು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದೆ? ಇಲ್ಲಿದೆ ವಿವರ ಬೆಂಗಳೂರು ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಹಿತಿಯನ್ನು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಪಡೆದುಕೊಂಡಿದೆ. ವಲಯವಾರು ಕಟ್ಟಡಗಳ ಮಾಹಿತಿಯನ್ನು ಬಿಬಿಎಂಪಿ ಪಡೆದುಕೊಂಡಿದೆ. ಬಿಬಿಎಂಪಿ ಇತ್ತೀಚೆಗಷ್ಟೆ ವಲಯವಾರು ಸರ್ವೆ ಮಾಡಿತ್ತು. ಒಟ್ಟು 568 ಕಟ್ಟಡಗಳು ಅಪಾಯದಂಚಿನಲ್ಲಿರುವ ಮಾಹಿತಿ ಲಭಿಸಿತ್ತು.

ಬೆಂಗಳೂರು ದಕ್ಷಿಣ ವಲಯ 132 ಬೆಂಗಳೂರು ಪಶ್ಚಿಮ ವಲಯ 121 ಬೆಂಗಳೂರು ಪೂರ್ವ ವಲಯ 113 ಮಹದೇವಪುರ ವಲಯ 27 ಯಲಹಂಕ ವಲಯ 144 ಆರ್.ಆರ್. ನಗರ 11 ದಾಸರಹಳ್ಳಿ 11 ಬೊಮ್ಮನಹಳ್ಳಿ 9

ಹೀಗೆ ಒಟ್ಟು 568 ಕಟ್ಟಡಗಳು ಅಪಾಯದಂಚಿನಲ್ಲಿರುವ ಬಗ್ಗೆ ಬಿಬಿಎಂಪಿಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಬಿನ್ನಿಮಿಲ್​ನ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಗೊಂಡು ಮೂರೇ ವರ್ಷಕ್ಕೆ ಕುಸಿಯುವ ಹಂತಕ್ಕೆ ತಲುಪಲು ಕಾರಣ ಇಲ್ಲಿದೆ!

ಇದನ್ನೂ ಓದಿ: ಕಮಲಾನಗರದಲ್ಲಿ ಕಟ್ಟಡ ಕುಸಿತ ಪ್ರಕರಣ: 6 ಕುಟುಂಬಗಳಿಗೆ ತಲಾ 1 ಲಕ್ಷ ರೂ ವೈಯಕ್ತಿಕ ಪರಿಹಾರ ವಿತರಿಸಿದ ಡಿ.ವಿ. ಸದಾನಂದ ಗೌಡ

Follow Us
TV9 Web
TV9 Web

TV9 Kannada

Read More
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್