ಜನ್ಮದಿನದಂದು ಮಾತ್ರ ಸಿದ್ದರಾಮಯ್ಯ ಜೊತೆ ಭೇಟಿ ಮಾಡಿದ್ದೆನಷ್ಟೇ; ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಯಡಿಯೂರಪ್ಪ ಟ್ವೀಟ್​ ಉತ್ತರ

TV9 Digital Desk

| Edited By: ಸಾಧು ಶ್ರೀನಾಥ್​

Updated on:Oct 13, 2021 | 12:58 PM

ನಂಬಿದ ಸಿದ್ಧಾಂತಗಳೊಂದಿಗೆ ನಾನೆಂದಿಗೂ ರಾಜಿಯಾಗಿಲ್ಲ, ಆಗುವುದೂ ಇಲ್ಲ. ಹಾಗೆಯೇ ಶ್ರೀ ಸಿದ್ದರಾಮಯ್ಯನವರು ಕೂಡ ಭೇಟಿಯಾಗಿಲ್ಲವೆಂದು ಸ್ಪಷ್ಟಪಡಿಸಿರುವುದರಿಂದ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಅರ್ಥರಹಿತವಾಗಿದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ - ಬಿ ಎಸ್​ ಯಡಿಯೂರಪ್ಪ ಟ್ವೀಟ್

ಜನ್ಮದಿನದಂದು ಮಾತ್ರ ಸಿದ್ದರಾಮಯ್ಯ ಜೊತೆ ಭೇಟಿ ಮಾಡಿದ್ದೆನಷ್ಟೇ; ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಯಡಿಯೂರಪ್ಪ ಟ್ವೀಟ್​ ಉತ್ತರ
ಜನ್ಮದಿನದಂದು ಮಾತ್ರ ಸಿದ್ದರಾಮಯ್ಯ ಜೊತೆ ಭೇಟಿ ಮಾಡಿದ್ದೆನಷ್ಟೇ; ಆನಂತರ ಅವರ ಭೇಟಿ ಮಾಡುವ ಅಗತ್ಯವೂ ನನಗಿಲ್ಲ: ಯಡಿಯೂರಪ್ಪ ಟ್ವೀಟ್​
Follow us

ಬೆಂಗಳೂರು: ನನ್ನ ಜನ್ಮದಿನದಂದು ಮಾತ್ರ ಸಿದ್ದರಾಮಯ್ಯ ಅವರು ನನ್ನ ಭೇಟಿ ಮಾಡಿದ್ದರಷ್ಟೇ; ಆನಂತರ ಅವರ ಭೇಟಿ ಮಾಡಿಲ್ಲ. ಅದರ ಅಗತ್ಯವೂ ನನಗಿಲ್ಲ ಎಂದು ಬಿಜೆಪಿ ನಾಯಕ, ಮಾಝಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಟ್ವೀಟ್​ ಮಾಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಮತ್ತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವಿಚಾರವಾಗಿ ಟ್ವೀಟ್ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಫೆಬ್ರವರಿ 27, 2020ರಂದು ನಡೆದ ನನ್ನ ಜನ್ಮದಿನದ ಕಾರ್ಯಕ್ರಮ ಹೊರತುಪಡಿಸಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ. ಹಾಗೆ ಭೇಟಿ ಮಾಡುವ ಅಗತ್ಯವೂ ನನಗಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಯಡಿಯೂರಪ್ಪ ಟ್ವೀಟ್​ ಸಾರಾಂಶ ಹೀಗಿದೆ: ಈ ಗುರಿ ತಲುಪುವ ತನಕ ನಾನು ವಿಶ್ರಮಿಸುವುದಿಲ್ಲ. ನಂಬಿದ ಸಿದ್ಧಾಂತಗಳೊಂದಿಗೆ ನಾನೆಂದಿಗೂ ರಾಜಿಯಾಗಿಲ್ಲ, ಆಗುವುದೂ ಇಲ್ಲ. ಹಾಗೆಯೇ ಶ್ರೀ ಸಿದ್ದರಾಮಯ್ಯನವರು ಕೂಡ ಭೇಟಿಯಾಗಿಲ್ಲವೆಂದು ಸ್ಪಷ್ಟಪಡಿಸಿರುವುದರಿಂದ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಅರ್ಥರಹಿತವಾಗಿದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ. (2/2)

ಫೆಬ್ರವರಿ 27, 2020ರಂದು ನಡೆದ ನನ್ನ ಜನ್ಮದಿನದ ಕಾರ್ಯಕ್ರಮ ಹೊರತುಪಡಿಸಿ, ವಿರೋಧಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯನವರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ, ಹಾಗೆ ಭೇಟಿ ಮಾಡುವ ಅಗತ್ಯವೂ ನನಗಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ, ಪಕ್ಷದಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. (1/2)

ಇದನ್ನೂ ಓದಿ: ಯಡಿಯೂರಪ್ಪ ಅವರನ್ನು ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಐಟಿ ದಾಳಿ: ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

(Met siddaramaiah on my birthday not after that bs yediyurappa tweet clarification on hd kumaraswamy allegation)

ತಾಜಾ ಸುದ್ದಿ

Related Stories

Click on your DTH Provider to Add TV9 Kannada