₹2 ಸಾವಿರ ಲಂಚ ಪಡೆಯುತ್ತಿದ್ದ ಕಾನ್ಸ್ಟೇಬಲ್​​ ಲೋಕಾಯುಕ್ತ ಬಲೆಗೆ

| Updated By: ವಿವೇಕ ಬಿರಾದಾರ

Updated on: Jun 02, 2024 | 1:25 PM

ಲೋಕಾಯುಕ್ತ ಅಧಿಕಾರಿಗಳು ಇಂದು (ಜೂ.02) ರಂದು ಬೆಳ್ಳಂ ಬೆಳಿಗ್ಗೆ ದಾವಣಗೆರೆ ಬಡಾವಣೆ ಪೊಲೀಸ್​ ಠಾಣೆ ಮೇಲೆ ದಾಳಿ ಮಾಡಿದ್ದು, ಈ ವೇಳೆ ಲಂಚ ಪಡೆಯುತ್ತಿದ್ದ ಪೊಲೀಸ್​ ಪೇದೆ ಹನುಮಂತಪ್ಪ ಅವರನ್ನು ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ.

₹2 ಸಾವಿರ ಲಂಚ ಪಡೆಯುತ್ತಿದ್ದ ಕಾನ್ಸ್ಟೇಬಲ್​​ ಲೋಕಾಯುಕ್ತ ಬಲೆಗೆ
ಲೋಕಾಯುಕ್ತ
Follow us on

ದಾವಣಗೆರೆ, ಜೂನ್​ 02: ವಾರೆಂಟ್ (Warrant)​ ಜಾರಿ ಮಾಡಲು ಎರಡು ಸಾವಿರ ರೂ. ಲಂಚ ಪಡೆಯುತ್ತಿದ್ದ ದಾವಣಗೆರೆ (Davangere) ಬಡಾವಣೆ ಪೊಲೀಸ್ (Police)​ ಠಾಣೆ​ ಪೇದೆ ಹನುಮಂತಪ್ಪ ಅವರನ್ನು ಲೋಕಾಯುಕ್ತ (Lokayukta) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಸರಸ್ವತಿ ನಗರದ‌ ನಿವಾಸಿ ಲಕ್ಕಪ್ಪ ಅಂಗಡಿ ಎಂಬುವರು ಸೈಯದ್ ತಹಿರುದ್ದೀನ್ ಎಂಬುವರ ವಿರುದ್ಧ ನ್ಯಾಯಾಲಯದಲ್ಲಿ ಚೆಕ್​ಬೌನ್ಸ್​ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಸೈಯದ್ ತಹಿರುದ್ದೀನ್ ಅವರ ವಿರುದ್ಧ ವಾರಂಟ್​ ನೀಡುವಂತೆ ಪೊಲೀಸ್​ ಪೇದೆ ಹನಮಂತಪ್ಪ ಅವರಿಗೆ ಲಕ್ಕಪ್ಪ ಅಂಗಡಿ ವಿನಂತಿಸಿದ್ದರು.

ಇದನ್ನೂ ಓದಿ: ಪಾರ್ಕಿಂಗ್, ಎಂಟ್ರಿ ಟಿಕೆಟ್​​ನಲ್ಲಿ ಅವ್ಯವಹಾರ: ಮೈಸೂರು ಅರಮನೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ವಾರಂಟ್​ ಜಾರಿ ಮಾಡಲು ಲಕ್ಕಪ್ಪ ಅಂಗಡಿ ಅವರ ಬಳಿ ಪೊಲೀಸ್​ ಪೇದೆ ಹನಮಂತಪ್ಪ ಪೋನ್ ಪೇ ಮೂಲ‌ಕ ಎರಡು ಸಾವಿರ ರೂ. ಬೇಡಿಕೆ ಪಡೆಯುತ್ತಿದ್ದರು. ಈ ವೇಳೆ ದಾವಣಗೆರೆ ಲೋಕಾಯುಕ್ತ ಎಸ್​ಪಿ ಎಂಎಸ್ ಕೌಲಾಪುರೆ ನೇತ್ರತ್ವದಲ್ಲಿ ಡಿವೈಎಸ್ಪಿ ಕಲಾವತಿ ಇನ್ಸ್​ಪೇಕ್ಟರ್​​ಗಳಾದ ಹೆಚ್​ಎಸ್​ ರಾಷ್ಟ್ರಪತಿ ಹಾಗೂ ಮಧುಸೂದನ್ ದಾಳಿ ಮಾಡಿ ರೆಡ್​ಹ್ಯಾಂಡ್​ ಆಗಿ ಹಿಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:06 pm, Sun, 2 June 24