Davanagere: ಫಲಿಸಿದ ಹೆತ್ತರ ಪೂಜೆ-ಪ್ರಾರ್ಥನೆ: 20 ವರ್ಷಗಳ ಬಳಿಕ ದಿಢೀರ್ ತಾಯಿ ಮುಂದೆ ಬಂದು ನಿಂತ ಮಗ

ದಾವಣಗೆರೆ ತಾಲೂಕಿನ ಜವಳಘಟ್ಟ ಗ್ರಾಮದಲ್ಲೊಂದು ಮನಕಲಕುವಂತಹ ಘಟನೆಯೊಂದು ನಡೆದಿದೆ. ಕಳೆದ 20 ವರ್ಷದ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದ ಮಗ ಇಂದು ದಿಢೀರ್ ತಾಯಿ ಮುಂದೆ ಬಂದು ನಿಂತ್ತಿದ್ದ. ಆತ 20 ವರ್ಷ ಏನು ಮಾಡಿದ, ಈಗ ಯಾಕೆ ಬಂದ ಎಂಬುದು ಎಲ್ಲವೂ ನಿಗೂಢ. ಆದರೆ ಆತನನ್ನು ಗುರುತು ಹಿಡಿದದ್ದು ಬಾಲ್ಯ ಸ್ನೇಹಿತ ಎಂಬುವುದು ವಿಶೇಷ.

Davanagere: ಫಲಿಸಿದ ಹೆತ್ತರ ಪೂಜೆ-ಪ್ರಾರ್ಥನೆ: 20 ವರ್ಷಗಳ ಬಳಿಕ ದಿಢೀರ್ ತಾಯಿ ಮುಂದೆ ಬಂದು ನಿಂತ ಮಗ
ಫಲಿಸಿದ ಹೆತ್ತರ ಪೂಜೆ-ಪ್ರಾರ್ಥನೆ: 20 ವರ್ಷಗಳ ಬಳಿಕ ದಿಢೀರ್ ತಾಯಿ ಮುಂದೆ ಬಂದು ನಿಂತ ಮಗ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ

Updated on:Jun 02, 2024 | 6:30 PM

ದಾವಣಗೆರೆ, ಜೂನ್​ 2: ದಿನ ಬೆಳಗಾದರೆ ಹತ್ತಾರು ದೇವರಿಗೆ ಹರಕೆ ತೀರಿಸುವುದು, ಹೆತ್ತ ಮಗನನ್ನ ನೆನದು ಕಣ್ಣೀರು ಹಾಕುವುದು ಹೀಗೆ ಆ ತಾಯಿಯ ಜೀವನವೇ ನರಕವಾಗಿತ್ತು. ಕಾರಣ ಒಂದಲ್ಲ ಎರಡಲ್ಲ ಬರೋಬರಿ 20 ವರ್ಷಗಳ ಹಿಂದೆ ಮನೆ ಬಿಟ್ಟ ಹೋದ ಮಗನಿಗೆ (son) ಹೋಗದ ದೇವಸ್ಥಾನವಿಲ್ಲ. ತೀರಿಸದ ಹರಕೆಯಿಲ್ಲ. ಕೊನೆಗೆ ಹೆತ್ತ ತಾಯಿಯ ಹರಕೆ ಫಲಿಸಿ, ಎರಡು ದಶಕಗಳ ಕಾಲ ಕಣ್ಮರೆ (missing) ಆಗಿದ್ದ ಮಗ ಇದಕ್ಕಿದ್ದಂತೆ ಬಂದು ಮುಂದೆ ಬಂದು ನಿಂತಿದ್ದಾನೆ.

20 ವರ್ಷ ಹಿಂದೆ ನಾಪತ್ತೆ: ಮತ್ತೆ ಮಾಡಿದ ಬಾಲ್ಯ ಸ್ನೇಹಿತ 

ದಾವಣಗೆರೆ ತಾಲೂಕಿನ ಜವಳಘಟ್ಟ ಗ್ರಾಮದ ನಿವಾಸಿ ತಿಪ್ಪಮ್ಮ ಹಾಗೂ ತಿಪ್ಪಣ್ಣ ದಂಪತಿಗಳ ಮೂರು ಮಕ್ಕಳಲ್ಲಿ ಹಿರಿಯ ಮಗ ಕಳೆದ 20 ವರ್ಷದ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದ. ಎಲ್ಲಿಗೆ ಹೋಗಿದ್ದ, 20 ವರ್ಷ ಏನು ಮಾಡಿದ ಈಗ ಯಾಕೆ ಬಂದಿದ್ದಾನೆ ಎಂಬುದು ಎಲ್ಲವೂ ನಿಗೂಢ. ಆದರೆ ಇತನನ್ನು ಗುರುತು ಹಿಡಿದು ಕರೆದುಕೊಂಡು ಬಂದವನು ಇತನ ಬಾಲ್ಯ ಸ್ನೇಹಿತ ಚೇತನ್.

ಇದನ್ನೂ ಓದಿ: ಹಿರಿಯ ಜಾನಪದ ತಜ್ಞ ಎಂಜಿ ಈಶ್ವರಪ್ಪ ನಿಧನ

ವಿಜಯಕುಮಾರ 20 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಐಟಿಐ ಮಾಡುತ್ತಿದ್ದ. ಹೀಗೆ ಐಟಿಐ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಕಣ್ಮರೆ ಆದ. ಎಲ್ಲಿ ಹೋಗಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದು ನಿಗೂಢವಾಗಿತ್ತು. ಆದರೆ ಇಂದು ಇದ್ದಕ್ಕಿದ್ದಂತೆ ಮನೆ ಬಂದೆ ಬಂದು ನಿಂತಿದ್ದಾನೆ. ತಂದೆ-ತಾಯಿ ಸಿಹಿ ತಿನ್ನಿಸಿ ಮನೆಯೊಳಗೆ ಕರೆದುಕೊಂಡಿದ್ದಾರೆ.

ಇತ ಹುಟ್ಟಿದ್ದು 1982ರಲ್ಲಿ ಅಂದ್ರೆ ಇತನಿಗೆ ಈಗ 42 ವರ್ಷ ವಯಸ್ಸು. ಮನೆಯಿಂದ ನಾಪತ್ತೆಯಾದ 22 ವರ್ಷದ ಯುವಕನಿದ್ದ. ಆಗ ದಾವಣಗೆರೆ ಸರ್ಕಾರಿ ಐಟಿಐ ಕಾಲೇಜ್​ನಲ್ಲಿ ಓದುತ್ತಿದ್ದ. ಅಂದ್ರೆ ಪ್ರತಿಯೊಬ್ಬರು ಪರಿಚಯ. ಮನೆಯವರ ಜೊತೆ ಒಡನಾಟ, ಸ್ನೇಹಿತರ ಪರಿಚಯದಲ್ಲಿ ಬೆಳೆದಾತ. ಮನೆ ಬಿಟ್ಟು ಕೆಲ ದಿನ ಕೇರಳದಲ್ಲಿ ದನಗಳ ಪಾಲನೆ ಮಾಡುತ್ತಿದ್ದೆ. ನಂತರ ಮಹಾರಾಷ್ಟಕ್ಕೆ ಹೋಗಿದ್ದೆ. ಹೀಗೆ ಹತ್ತಾರು ಅಸ್ಪಷ್ಟ ಕಾರಣ ಹೇಳುತ್ತಿದ್ದಾನೆ.

ಇತ ಸಿಕ್ಕಿದ್ದು ಮಾತ್ರ ಒಂದು ರೀತಿಯಲ್ಲಿ ವಿಶೇಷ. ಯಾವುದೋ ಕೆಲಸಕ್ಕೆ ಹೋಗಿದ್ದಾನೆ. ಆಧಾರ ಕಾರ್ಡ್​ ಬೇಕು ಎಂದಿದ್ದಾರೆ. ನನ್ನ ಗ್ರಾಮ ಜವಳಘಟ್ಟ. ಅದು ದಾವಣಗೆರೆ ಪಕ್ಕದಲ್ಲಿ ಬರುತ್ತದೆ. ನಾನು ಓದಿದ್ದು ಆರನೇ ಮೈಲು ಕಲ್ಲು ಬಳಿ ಸರ್ಕಾರಿ ಶಾಲೆಯಲ್ಲಿ ಎಂದು ನೆನಪಿಸಿಕೊಂಡು ಬಂದಿದ್ದಾನೆ. ಹೀಗೆ ಶಾಲೆಗೆ ಬಂದಾಗ ಚೇತನ ಎಂಬ ಸ್ನೇಹಿತ ಗುರುತು ಹಚ್ಚಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಎಲ್ಲಿಗೆ ಹೋಗಿದ್ದೆ ಯಾಕೆ ಬಂದೆ ಎಂಬುದು ಸ್ಪಷ್ಟವಾಗಿ ಹೇಳುತ್ತಿಲ್ಲ.

ಇದನ್ನೂ ಓದಿ: ದಾವಣಗೆರೆ: ಮಳೆಗಾಗಿ ದುಗ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ವರ್ತಕರು

ಮಗ ಸಿಕ್ಕ ಸಂತೋಷ ಪ್ರತಿಯೊಬ್ಬರಿಗೆ ಇದೆ. ಆದರೆ ಆತ ಮಾತ್ರ ಮಾತಾಡುವುದೇ ಬೇರೆ. ಬರೋಬರಿ 20 ವರ್ಷಗಳ ಕಾಲ ನಿರಂತರ ನಾಪತ್ತೆ ಎಲ್ಲಿದ್ದ ಮಗ ಆತ ಇಲ್ಲಿಯೇ ಇರುತ್ತಾನಾ ಮತ್ತೆ ವಾಪಸ್ಸು ಹೋಗುತ್ತಾನಾ ಎಂಬುದು ನಿಖರವಾಗಿಲ್ಲ. ಆದರೆ 20 ವರ್ಷಗಳ ಕಾಲ ಮಿಸ್ಸಿಂಗ್ ಆಗಿದ್ದ ಮಗ ವಾಪಸ್ಸು ಬಂದಿದ್ದು ತಾಯಿಗೆ ಎಲ್ಲಿಲ್ಲದ ಸಂತೋಷವಾಗಿದ್ದು ಮಾತ್ರ ಸತ್ಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:29 pm, Sun, 2 June 24

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ