ಯತ್ನಾಳ್, ವಿ ಸೋಮಣ್ಣ ಅವರ ಪಾಪದ ಕೊಡ ತುಂಬಿದೆ, ನಾಶವಾಗುತ್ತಾರೆ ಎಂದ ಎಂಪಿ ರೇಣುಕಾಚಾರ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 14, 2023 | 5:23 PM

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಅವರ ಪಾಪದ ಕೊಡ ತುಂಬಿದೆ. ಅವರು ನಾಶ ಆಗುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ವಿಜಯೇಂದ್ರ ನೇತ್ರತ್ವದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಬಾರದು ಎಂದು ರೀತಿ‌ ಮಾಡುತ್ತಿರಬಹುದು ಎಂದಿದ್ದಾರೆ.

ಯತ್ನಾಳ್, ವಿ ಸೋಮಣ್ಣ ಅವರ ಪಾಪದ ಕೊಡ ತುಂಬಿದೆ, ನಾಶವಾಗುತ್ತಾರೆ ಎಂದ ಎಂಪಿ ರೇಣುಕಾಚಾರ್ಯ
ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ
Follow us on

ದಾವಣಗೆರೆ, ಡಿಸೆಂಬರ್​​ 14: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಅವರ ಪಾಪದ ಕೊಡ ತುಂಬಿದೆ. ಅವರು ನಾಶ ಆಗುತ್ತಾರೆ. ಇದೇ ಕಾರಣಕ್ಕೆ ಇಬ್ಬರು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾತಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ವಾಗ್ದಾಳಿ ಮಾಡಿದ್ದಾರೆ. ನಗದರಲ್ಲಿ ಮಾತನಾಡಿದ ಅವರು, ಇವರಿಬ್ಬರಿಗೂ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ದ ಮಾತನಾಡುವುದು ಬಿಟ್ಟು ಬೇರೆ ಕೆಲಸವಿಲ್ಲ ಎಂದು ಕಿಡಿಕಾರಿದ್ದಾರೆ.

ಯತ್ನಾಳ್​ ಮತ್ತು ಸೋಮಣ್ಣ ಎಚ್ಚರ ನಾನು ಸುಮ್ಮನಿರಲ್ಲ. ಎಲ್ಲಿಯವರೆಗೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ದ ಮಾತಾಡುತ್ತೀರಿ ಅಲ್ಲಿಯವರೆಗೆ ನಾನು ಮಾತನಾಡುವೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿ ಸೋಮಣ್ಣ ಮಹಾ ಸುಳ್ಳುಗಾರ

ಬರುವ ಲೋಕಸಭೆ ಚುನಾವಣೆಯಲ್ಲಿ ವಿಜಯೇಂದ್ರ ನೇತ್ರತ್ವದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಬಾರದು ಎಂದು ರೀತಿ‌ ಮಾಡುತ್ತಿರಬಹುದು. ವಿ ಸೋಮಣ್ಣ ಮಹಾ ಸುಳ್ಳುಗಾರ. ಸುಳ್ಳನ್ನ ಸತ್ಯ ಮಾಡುವ ಕಲೆ ಇವರಿಗೆ ಮಾತ್ರ ಗೊತ್ತು. ಸಿದ್ದರಾಮಯ್ಯ ವಿರುದ್ದ ಸ್ಪರ್ಧೆ ಮಾಡಿ ಗೆದ್ದು ಸಿಎಂ ಆಗಬೇಕೇಂಬ ಉತ್ಸಾಹದಲ್ಲಿದ್ದರು ಸೋಮಣ್ಣ. ಜನರು ಯಡಿಯೂರಪ್ಪ ಮುಖ ನೋಡಿ ಮತ ಹಾಕಿದ್ದಾರೆ ಹೊರತು, ಸೋಮಣ್ಣರನ್ನು ನೋಡಿ ಯಾರು ಮತ ಹಾಕಿ‌ಹಾಕಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮುಸಲ್ಮಾನರೇ, ವಿವಾದತ್ಮಕ ಹೇಳಿಕೆ ನೀಡಿದ ಈಶ್ವರಪ್ಪ!

ಸೋಮಣ್ಣ ಮಹಾ ಸುಳ್ಳುಗಾರ. ಯಡಿಯೂರಪ್ಪ ಅವರ ಉಪಕಾರ ಮರೆತಿದ್ದಾರೆ. ಈಗ ಅವರ ವಿರುದ್ದ ಮಾತಾಡುತ್ತಿದ್ದಾರೆ. ಶಾಸಕ ಯತ್ನಾಳ್ ಉತ್ತರ ಕರ್ನಾಟಕದ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ವಿಜಯೇಂದ್ರ ಹಾಗೂ ಯಡಿಯೂರಪ್ಪ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಎಲ್ಲದಕ್ಕೂ ಪ್ರತಾಪ್ ಸಿಂಹ ಹೊಣೆ ಎನ್ನುವುದು ಸರಿಯಲ್ಲ

ಲೋಕಸಭೆ ಭದ್ರತಾ ಲೋಪ ಬಗ್ಗೆ ಮಾತನಾಡಿದ ಅವರು, ನಿನ್ನೆ ಲೋಕಸಭೆ ಕಲಾಪ ವೇಳೆ ನಡೆದ ಘಟನೆ ಖಂಡನೀಯ. ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಸ್ಮೋಕ್ ಬಾಂಬ್ ದಾಳಿ ಖಂಡನೀಯ. ಈ ರೀತಿ ಮಾಡುವವರು ದೇಶದ್ರೋಹಿಗಳು. ಅವರ ತಂದೆಯವರೇ ತೀವ್ರವಾಗಿ ಖಂಡಿಸಿದ್ದಾರೆ. ಇದನ್ನೇ ಕಾಂಗ್ರೆಸ್ ರಾಜಕೀಯಗೊಳಿಸಬಾರದು. ಘಟನೆ ಕುರಿತು ಸಮಗ್ರ ತನಿಖೆ ಮಾಡಿಸಿ ಎಂದು ಒತ್ತಾಯ ಮಾಡಿ. ಅದನ್ನು ಬಿಟ್ಟು ಪ್ರತಾಪ್ ಸಿಂಹ ಕಚೇರಿಗೆ ಮುತ್ತಿಗೆ ಹಾಕುವುದು, ಮೋದಿ, ಶಾ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪ ಭಾಗಿ, ಒಗ್ಗಟ್ಟಿನ ಮಂತ್ರ ಜಪ: ಯತ್ನಾಳ್, ಜಾರಕಿಹೊಳಿ ಗೈರು

ಬಾಂಬೆಯಲ್ಲಿ ಹೊಟೇಲ್ ಮೇಲೆ ಬಾಂಬ್ ದಾಳಿ ಮಾಡಿದ್ದರು. ಬಾಂಬೆ ದಾಳಿ ವೇಳೆ ಮನಮೋಹನ್ ಸಿಂಗ್, ವಿಲಾಸ ರಾವ್ ದೇಶಮುಖ್ ರಾಜೀನಾಮೆ ಕೇಳಿದ್ವಾ? ಇದು ಸರಿಯಲ್ಲ, ಬಾಂಬೆ ದಾಳಿ ವೇಳೆ ಅವರು ಬೋಟ್ ನಲ್ಲಿ ಬಂದು ದಾಳಿ ಮಾಡಿದ್ದರು ಆಗಲು ವೈಪಲ್ಯ ಆಗಿತ್ತು. ಬೇಕಿದ್ದರೆ ಪ್ರತಾಪ್ ಸಿಂಹ ಅವರ ವಿಚಾರಣೆ ಮಾಡಲಿ, ಎಲ್ಲದಕ್ಕೂ ಅವರೇ ಹೊಣೆ ಎನ್ನುವುದು ಸರಿಯಲ್ಲ. ಎಲ್ಲದರ ಕುರಿತು ಸಮಗ್ರ ತನಿಖೆ ಮಾಡಲಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.