ಸದ್ಯ 3 ಡಿಸಿಎಂ ಹುದ್ದೆ ಅವಶ್ಯಕತೆ ಇಲ್ಲ, ಡಿಕೆ ಶಿವಕುಮಾರ್ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ: ಶಾಸಕ ಬಸವರಾಜು
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಭುಗಿಲೆದ್ದಿರುವ ಮೂರು ಡಿಸಿಎಂ ಕೂಗು ಇದೀಗ ಆರು ಡಿಸಿಎಂ ಆಗಿದೆ. ಕೆ.ಎನ್ ರಾಜಣ್ಣ ಹೇಳಿಕೆ ಬೆಂಬಲ ನೀಡಿ ಆರು ಡಿಸಿಎಂ ಸ್ಥಾನಕ್ಕೆ ಶಾಸಕ ಬಸವರಾಜ ರಾಯರೆಡ್ಡಿ ಒತ್ತಾಯಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ಸಮರ್ಥವಾಗಿ ಡಿಸಿಎಂ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಸದ್ಯ ಮೂರು ಡಿಸಿಎಂ ಹುದ್ದೆ ಅವಶ್ಯಕತೆ ಇಲ್ಲ ಎಂದು ಶಾಸಕ ಬಸವರಾಜು ಹೇಳಿದ್ದಾರೆ.
ದಾವಣಗೆರೆ, ಸೆಪ್ಟೆಂಬರ್ 23: ಡಿಕೆ ಶಿವಕುಮಾರ್ ಅವರು ಸಮರ್ಥವಾಗಿ ಡಿಸಿಎಂ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಸದ್ಯ ಮೂರು ಡಿಸಿಎಂ ಹುದ್ದೆ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಬಸವರಾಜು.ವಿ ಶಿವಗಂಗಾ (MLA Basavaraju) ಹೇಳಿದ್ದಾರೆ. ಚನ್ನಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿರಿಯರಾದ K.N.ರಾಜಣ್ಣ ಯಾವ ಉದ್ದೇಶದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಜಾತಿ ಆಧಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದಾದರೆ, ಹೆಚ್ಚು ಜನಸಂಖ್ಯೆ ಹೊಂದಿರುವ ವೀರಶೈವರಿಗೆ ಸಿಎಂ ಹುದ್ದೆ ನೀಡಬೇಕಿತ್ತು ಎಂದಿದ್ದಾರೆ.
ಜಾತಿ ಆಧಾರದಲ್ಲಿ ಹುದ್ದೆ ನೀಡಿಲ್ಲ. ಪಕ್ಷ ಸಂಘಟನೆ, ಪ್ರಾಮಾಣಿಕತೆ, ಪಕ್ಷದ ನಿಷ್ಠೆಗೆ ತಕ್ಕಂತೆ ಹುದ್ದೆ ನೀಡಲಾಗಿದೆ. ಜಾತಿ ಆಧರಿಸಿ ಹುದ್ದೆ ನೀಡಲು ಆಗಲ್ಲ, ಇದರಿಂದ ಗೊಂದಲ ಉಂಟಾಗುತ್ತೆ ಎಂದು ಹೇಳಿದ್ದಾರೆ.
ಮೂರಲ್ಲ ಬದಲಿಗೆ ಆರು ಡಿಸಿಎಂ ಹುದ್ದೆ ಸೃಷ್ಟಿಸಲು ಒತ್ತಾಯ: ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ
ಸಚಿವ ರಾಜಣ್ಣ ಬಳಿಕ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಡಿಸಿಎಂ ಹುದ್ದೆ ಹೆಚ್ಚುಸುವಂತೆ ಮನವಿ ಮಾಡಿದ್ದು, ಮೂರಲ್ಲ ಬದಲಿಗೆ ಆರು ಡಿಸಿಎಂ ಹುದ್ದೆ ಸೃಷ್ಟಿಸಲು ಒತ್ತಾಯಿಸಿದ್ದಾರೆ. ಅಲ್ಲಿಗೆ ಡಿಸಿಂಎಂ ಹುದ್ದೆಗೆ ಬೇಡಿಕೆ ಜೋರಾಗಿದೆ. ಎಲ್ಲ ಜಾತಿ ಧರ್ಮಗಳು ಕಾಂಗ್ರೆಸ್ಗೆ ಬೆಂಬಲ ನೀಡಿವೆ.
ಇದನ್ನೂ ಓದಿ: ಡಿಸಿಎಂ ಮಾಡಿ ಎಂದು ವೈಯಕ್ತಿಕವಾಗಿ ಕೇಳುತ್ತಿಲ್ಲ: ಹೈಕಮಾಂಡ್ ಮಾಡಿದ್ರೆ ಓಕೆ ಎಂದ ಸಚಿವ ಸತೀಶ್ ಜಾರಕಿಹೊಳಿ
ಮುಸ್ಲಿಂ, ಎಸ್ಸಿ, ಎಸ್ಟಿ ಸೇರಿದಂತೆ ಮಹಿಳೆಗೂ ಒಂದು ಡಿಸಿಎಂ ಹುದ್ದೆ ನೀಡಬೇಕು. ನಾನು ರಾಜಣ್ಣ, ಪರಮೇಶ್ವರ್ ಹೇಳಿಕೆ ಬೆಂಬಲಿಸುತ್ತೇನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ: ಬೇಕಾದಷ್ಟು ಜನ ಆಸೆಪಡ್ತಾರೆ, ಏನೂ ಮಾಡಲಾಗದು; ಡಿಸಿಎಂ ಕೂಗಿಗೆ ಸ್ವಪಕ್ಷೀಯರಿಗೇ ಡಿಕೆ ಶಿವಕುಮಾರ್ ತಿರುಗೇಟು
ಆರಂಭದಿಂದಲೂ ರಾಯರೆಡ್ಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಶಾಸಕರ ಅನುದಾನ ಬಿಡುಗಡೆ ವಿಚಾರವಾಗಿಯೂ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ಬಸವರಾಜ್ ರಾಯರೆಡ್ಡಿ, ನಮಗೆ ಅನುದಾನ ಬೇಡ. ನಮ್ಮದೇ ದುಡ್ಡಲ್ಲಿ ಅಭಿವೃದ್ಧಿಕಾರ್ಯ ಮಾಡುತ್ತೇವೆ ಎಂದು ಬಹಿರಂಗವಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:04 pm, Sat, 23 September 23