ಕೋಟಿ ಕೋಟಿ ಸುರಿದ್ರೂ ಸ್ಮಾರ್ಟ್ ಆಗದ ‘ಬೆಣ್ಣೆ ನಗರಿ’!

ದಾವಣಗೆರೆ: ಎಲ್ಲಾ ಅಂದುಕೊಂಡಂತೆ ನಡೆದಿದ್ರೆ ಮಧ್ಯ ಕರ್ನಾಟಕದ ಜನರಿಗೆ ಆ ನಗರ ಎಲ್ಲಾ ಸೌಕರ್ಯಗಳನ್ನ ಒದಗಿಸಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ಎಡವಟ್ಟಿನಿಂದ ಪರಿಸ್ಥಿತಿ ಬೇರೆಯದ್ದೇ ರೂಪ ಪಡೆದಿದೆ. ಕೋಟಿ ಕೋಟಿ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ. ಸುಂದರವಾಗಿರೋ ಸಿಮೆಂಟ್ ರಸ್ತೆ ಅಗೆಯುತ್ತಿರೋ ಯಂತ್ರಗಳು. ಇನ್ನೊಂದ್ಕಡೆ ಸಂಚರಿಸಲು ಪರದಾಡ್ತಿರೋ ಸವಾರರು. ಅಂದಹಾಗೆ ಎಲ್ಲಾ ಅಂದುಕೊಂಡಂತೆ ನಡೆದಿದ್ರೆ ಇವತ್ತು ಈ ನಗರ ಸ್ಮಾರ್ಟ್ ಸಿಟಿ ಆಗಿರಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಎಡವಟ್ಟಿನಿಂದಾಗಿ ಜನ ಹೀಗೆ […]

ಕೋಟಿ ಕೋಟಿ ಸುರಿದ್ರೂ ಸ್ಮಾರ್ಟ್ ಆಗದ ‘ಬೆಣ್ಣೆ ನಗರಿ’!
ಸಾಧು ಶ್ರೀನಾಥ್​

Updated on: Jan 14, 2020 | 12:45 PM

ದಾವಣಗೆರೆ: ಎಲ್ಲಾ ಅಂದುಕೊಂಡಂತೆ ನಡೆದಿದ್ರೆ ಮಧ್ಯ ಕರ್ನಾಟಕದ ಜನರಿಗೆ ಆ ನಗರ ಎಲ್ಲಾ ಸೌಕರ್ಯಗಳನ್ನ ಒದಗಿಸಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ಎಡವಟ್ಟಿನಿಂದ ಪರಿಸ್ಥಿತಿ ಬೇರೆಯದ್ದೇ ರೂಪ ಪಡೆದಿದೆ. ಕೋಟಿ ಕೋಟಿ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.

ಸುಂದರವಾಗಿರೋ ಸಿಮೆಂಟ್ ರಸ್ತೆ ಅಗೆಯುತ್ತಿರೋ ಯಂತ್ರಗಳು. ಇನ್ನೊಂದ್ಕಡೆ ಸಂಚರಿಸಲು ಪರದಾಡ್ತಿರೋ ಸವಾರರು. ಅಂದಹಾಗೆ ಎಲ್ಲಾ ಅಂದುಕೊಂಡಂತೆ ನಡೆದಿದ್ರೆ ಇವತ್ತು ಈ ನಗರ ಸ್ಮಾರ್ಟ್ ಸಿಟಿ ಆಗಿರಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಎಡವಟ್ಟಿನಿಂದಾಗಿ ಜನ ಹೀಗೆ ಪರದಾಡುವಂತಾಗಿದೆ.

ಕೋಟಿ ಕೋಟಿ ಖರ್ಚು ಮಾಡಿದ್ದ ರಸ್ತೆ ಉಡೀಸ್!
ಹೌದು ದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಬಂದಾಗ ರಾಜ್ಯದಿಂದ ಆಯ್ಕೆಯಾದ ಕೆಲವೇ ನಗರಗಳ ಪೈಕಿ ದಾವಣಗೆರೆ ಕೂಡ ಒಂದು. ನಗರವನ್ನ ಹೈಟೆಕ್ ಸಿಟಿಯಾಗಿ ರೂಪುಗೊಳಿಸಲು ಯೋಜನೆ ಸಿದ್ಧವಾಗಿತ್ತು. ಆದರೆ ಗುತ್ತಿಗೆದಾರರ ಎಡವಟ್ಟಿನಿಂದ ಇವತ್ತು ಬೆಣ್ಣೆ ನಗರಿಯ ನಿವಾಸಿಗಳು ನರಳಾಡುವಂತಾಗಿದೆ. ಕೋಟ್ಯಂತರ ರೂಪಾಯಿ‌ ಖರ್ಚು ಮಾಡಿ ನಿರ್ಮಿಸಿದ್ದ ಸಿಮೆಂಟ್ ರಸ್ತೆಗಳನ್ನ ಕಿತ್ತು ಚರಂಡಿ ನಿರ್ಮಿಸ್ತಿದ್ದಾರೆ. ಹೀಗಾಗಿ ದಾವಣಗೆರೆಯ ಪ್ರಮುಖ ರಸ್ತೆಗಳೆಲ್ಲಾ ಗುಂಡಿಮಯವಾಗಿದ್ದು, ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ.

ಪಿ.ಬಿ.ರಸ್ತೆ ಸೇರಿದಂತೆ ಹಲವೆಡೆ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಕೆ-ಶಿಪ್ ಯೋಜನೆ ರೂಪುಗೊಂಡಿತ್ತು. ಆದ್ರೆ ಕಾಮಗಾರಿ ಸರಿಯಾಗಿ ನಡೆಯದೆ ನೀರು ಹೋಗಲು ನಿರ್ಮಿಸಿದ್ದ ಒಳಚರಂಡಿ ವ್ಯವಸ್ಥೆಯನ್ನೇ ಹಾಳು ಮಾಡಿದ್ರಿಂದ ಸಾಕಷ್ಟು ಸಮಸ್ಯೆಯಾಗಿತ್ತು. ಹೀಗಾಗಿ ಚರಂಡಿ ವ್ಯವಸ್ಥೆ ಸರಿಪಡಿಸಲು ರಸ್ತೆ ಅಗೆಯಲಾಗಿದೆ. ಇನ್ನು ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿರೋ ಗುತ್ತಿಗೆ ಪಡೆದಿದ್ದ ಕಂಪನಿಗೆ ಲಕ್ಷ ಲಕ್ಷ ದಂಡವನ್ನೂ ವಿಧಿಸಲಾಗಿದೆಯಂತೆ.

ಒಟ್ನಲ್ಲಿ ಯಾರೋ ಮಾಡಿದ ತಪ್ಪಿನಿಂದ ಸವಾರರು ಪರದಾಡುವಂತಾಗಿದೆ. ತೆರಿಗೆ ಹಣ ಸುರಿದು ನಿರ್ಮಾಣ ಮಾಡಿದ್ದ ರಸ್ತೆಗಳನ್ನ ಅನಿವಾರ್ಯವಾಗಿ ಕಿತ್ತುಹಾಕಲಾಗ್ತಿದೆ. ಇನ್ನು ಮುಂದೆಯಾದ್ರು ಕಾಮಾಗಾರಿ ಕೈಗೊಳ್ಳುವ ಮುನ್ನ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಒಂದಷ್ಟು ಹಿಂದು-ಮುಂದು ನೋಡುವುದು ಒಳಿತು.




ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us