ಜಗಳೂರು: ಭಾಗ್ಯಗಳ ಹೆಸರಿನಲ್ಲಿ ಕಾಂಗ್ರೆಸ್ಸಿಗರು ಭ್ರಷ್ಟಾಚಾರ ಮಾಡಿದ್ದಾರೆ, ಅದಕ್ಕೇ ಜನ ತಿರಸ್ಕರಿಸಿರುವುದು -ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯ, ಎಷ್ಟು ಭಾಗ್ಯ ಕೊಟ್ಟಿರಿ. ಆದರೆ ಅನ್ನ ಭಾಗ್ಯಕ್ಕೆ ಕನ್ನ ಹಾಕಿದ್ದೀರಿ. ಎಸ್ಸಿ ಎಸ್ಟಿ ಮಕ್ಕಳ ಹಾಸಿಗೆ ದಿಂಬಿನಲ್ಲಿ ಭ್ರಷ್ಟಾಚಾರ ಮಾಡಿದರು. ಹಿಂದುಳಿದ ವರ್ಗ ಅಂತಾ ಅಧಿಕಾರ ನೀಡಲಾಗಿತ್ತು. ಆದ್ರೆ ಸಿದ್ದರಾಮಯ್ಯ ಅವರು ಮಾಡಿದ್ದು ಮಾತ್ರ ಆ ಜನಾಂಗಕ್ಕೆ ದ್ರೋಹ - ಸಿಎಂ ಬಸವರಾಜ ಬೊಮ್ಮಾಯಿ
ದಾವಣಗೆರೆ: ಸಂಕಲ್ಪ ಯಾತ್ರೆ ವಿಜಯ ಯಾತ್ರೆ ಆಗುತ್ತಿದೆ. ರಾಜ್ಯದ ಬಹುತೇಕ ಕಡೆ ಸಂಕಲ್ಪ ಯಾತ್ರೆಗೆ ಭರ್ಜರಿ ಪ್ರತಿಕ್ರಿಯೆ ಕಂಡು ಬರುತ್ತಿದೆ ಎಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ (BJP Jana Sankalpa Yatra) ಸಿಎಂ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ನಮ್ಮದು ಡಬಲ್ ಇಂಜಿನ್ ಸರ್ಕಾರ. 2023 ರಲ್ಲಿ ಮತ್ತೊಮ್ಮೆ ಬಿಜೆಪಿ ಎಂಬ ಸಂದೇಶ ರಾಜ್ಯದಲ್ಲಿ ಕೇಳಿ ಬರುತ್ತಿದೆ ಎಂದರು. ಈ ಹಿಂದಿನ ಕಾಂಗ್ರೆಸ್ ಆಡಳಿತ (Congress Government) ನೋಡಿ. ಈ ಹಿಂದೆ ಜಗಳೂರಿಗೆ ನೀರು ಬೇಕು ಎಂದು ಇಲ್ಲಿ ಜನ ಹೋರಾಟ ಮಾಡಿದ್ದರು. ಆದ್ರೆ ಕಾಂಗ್ರೆಸ್ ಕ್ಯಾರೆ ಎನ್ನಲ್ಲಿಲ್ಲ. ಜಗಳೂರು ಕೇಂದ್ರದ 57 ಕೆರೆಗಳಿಗೆ ನೀರು ತುಂಬಿಸಲು 650 ಕೋಟಿ ರೂಪಾಯಿ ಯಡಿಯೂರಪ್ಪ ಅವರು ನೀಡಿದರು. ಈಗ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 45 ಸಾವಿರ ಎಕರೆ ಪ್ರದೇಶಕ್ಕೆ ಹನಿನೀರಾವರಿ ಯೋಜನೆ ನೀಡಿದ್ದು ನಮ್ಮ ಸರ್ಕಾರ. 154 ಗ್ರಾಮಗಳಲ್ಲಿ ಮನೆ ಮನೆಗೆ ನೀರು ಕೊಡುವ ಯೋಜನೆ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ (CM Basavaraj Bommai) ಹೇಳಿದರು.
ನೀರಾವರಿಯಲ್ಲಿ ದೊಡ್ಡ ಕೆಲ್ಸಾ ಆಗುತ್ತಿದೆ. ಮೂರು ಸಾವಿರ ಕೋಟಿ ರೂಪಾಯಿ ರಾಜ್ಯ ಸರ್ಕಾರ ಭದ್ರಾ ಮೇಲ್ಕಂಡ ಯೋಜನೆ ನೀಡಿದೆ. ಸಿದ್ದರಾಮಯ್ಯ, ಎಷ್ಟು ಭಾಗ್ಯ ಕೊಟ್ಟಿರಿ. ಆದರೆ ಅನ್ನ ಭಾಗ್ಯಕ್ಕೆ ಕನ್ನ ಹಾಕಿದ್ದೀರಿ. ಎಸ್ಸಿ ಎಸ್ಟಿ ಮಕ್ಕಳ ಹಾಸಿಗೆ ದಿಂಬಿನಲ್ಲಿ ಭ್ರಷ್ಟಾಚಾರ ಮಾಡಿದರು. ಹಿಂದುಳಿದ ವರ್ಗ ಅಂತಾ ಅಧಿಕಾರ ನೀಡಲಾಗಿತ್ತು. ಆದ್ರೆ ಸಿದ್ದರಾಮಯ್ಯ ಅವರು ಮಾಡಿದ್ದು ಮಾತ್ರ ಆ ಜನಾಂಗಕ್ಕೆ ದ್ರೋಹ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ. ಎಸ್ಸಿ ಎಸ್ಟಿಗಳಿಗೆ ಜಮೀನು ಇಲ್ಲಾ. ದುಡಿಮೆ ಮಾಡುತ್ತಿದ್ದಾರೆ. ಇದೆ ಕಾರಣಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಎಸ್ಸಿ ಎಸ್ಟಿಗಳು ಸ್ವಾಭಿಮಾನದ ಬದುಕು ನಡೆಸಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಐದು ಲಕ್ಷ ಮಹಿಳೆಯರಿಗಾಗಿ ಸ್ತ್ರೀ ಸಾಮರ್ಥ್ಯ ಯೋಜನೆ, ವಿವೇಕಾನಂದ ಹೆಸರಿಗೆ ಯುವಕರಿಗೆ ಯೋಜನೆ, ಹಾಲುಮತ ಜನಕ್ಕೆ, ಕುರಿಗಾರ ಸಂಘಕ್ಕೆ ಲಕ್ಷಾಂತರ ರೂಪಾಯಿ ಧನ ಸಹಾಯ ಮಾಡಲಾಗುತ್ತಿದೆ. ಹಿಂದುಳಿದ ಬಡಿಗ ಕಂಬಾರ, ಕುಂಬಾರ ಜನಾಂಗಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲ್ಸಾ ಆಗುತ್ತಿದೆ. ತುಮಕೂರು ಮತ್ತು ದಾವಣಗೆರೆ ರೇಲ್ವೆ ಲೈನ್ ಗೆ ನಾವು ಬದ್ಧ. ಜಮೀನು ಕೊಟ್ಟರೆ ವಿಮಾನ ನಿಲ್ದಾಣ ಮಾಡುತ್ತೀವಿ. ಜಗಳೂರಿಗೆ ನೀಡಿದ 3500 ಕೋಟಿ ರೂಪಾಯಿ ಸೂಕ್ತ ರೀತಿಯಲ್ಲಿ ಸದ್ಭಳಕೆ ಆಗಬೇಕು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: 1985ರ ರೆಸ್ಟೋರೆಂಟ್ ಬಿಲ್ ನೋಡಿ ಹೌಹಾರುತ್ತಿರುವ ನೆಟ್ಟಿಗರು
ಇದನ್ನೂ ಓದಿ: ಬಲಿಷ್ಠ ಅರ್ಜೆಂಟೀನಾಗೆ ಸೋಲುಣಿಸಿದ ಸೌದಿ; ಇಡೀ ದೇಶಕ್ಕೆ ಒಂದು ದಿನ ರಜೆ ಘೋಷಿಸಿದ ದೊರೆ..!
Published On - 2:38 pm, Wed, 23 November 22