ದಾವಣಗೆರೆಯಲ್ಲಿ ಶೀಘ್ರದಲ್ಲೇ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ: ಸಚಿವ ಎಸ್​ಎಸ್​ ಮಲ್ಲಿಕಾರ್ಜುನ

ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ ಮತ್ತು ಚಿತ್ರದುರ್ಗ ಸೇರಿ ಪ್ರತ್ಯಕ ಹಾಲು ಒಕ್ಕೂಟ ದಾವಣಗೆರೆಯಲ್ಲಿ ಶೀಘ್ರದಲ್ಲೇ ಸ್ಥಾಪನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​ಎಸ್ ಮಲ್ಲಿಕಾರ್ಜುನ ಹೇಳಿದ್ದಾರೆ. ಹಸು ಖರೀದಿಗೆ ತಲಾ 40 ಸಾವಿರ ರೂ. ಸಬ್ಸಿಡಿ ನೀಡಲಾಗುವುದು. 5ರಿಂದ 10 ಸಾವಿರ ಹಸುಗಳನ್ನು ರೈತರಿಗೆ ಕೊಡಿಸುವ ಗುರಿ ಇದೆ ಎಂದಿದ್ದಾರೆ.

ದಾವಣಗೆರೆಯಲ್ಲಿ ಶೀಘ್ರದಲ್ಲೇ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ: ಸಚಿವ ಎಸ್​ಎಸ್​ ಮಲ್ಲಿಕಾರ್ಜುನ
ಸಚಿವ S.S.ಮಲ್ಲಿಕಾರ್ಜುನ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 13, 2023 | 6:46 PM

ದಾವಣಗೆರೆ, ಆಗಸ್ಟ್​ 13: ಈಗ ಇರುವ ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ ಮತ್ತು ಚಿತ್ರದುರ್ಗ ಸೇರಿ ಪ್ರತ್ಯಕ ಹಾಲು ಒಕ್ಕೂಟ ದಾವಣಗೆರೆಯಲ್ಲಿ ಶೀಘ್ರದಲ್ಲೇ ಸ್ಥಾಪನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​ಎಸ್ ಮಲ್ಲಿಕಾರ್ಜುನ (SS Mallikarjuna) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಯಾವುದೇ ರೀತಿಯ‌ ಪ್ರಯತ್ನಗಳು ನಡೆದಿಲ್ಲ. ಈಗ ಪ್ರತ್ಯೇಕ ಹಾಲು ಒಕ್ಕೂಟ ಮಾಡಲಾಗುವುದು ಎಂದು ಹೇಳಿದರು.

ಹಸು ಖರೀದಿಗೆ ತಲಾ 40 ಸಾವಿರ ರೂ. ಸಬ್ಸಿಡಿ ನೀಡಲಾಗುವುದು. 5ರಿಂದ 10 ಸಾವಿರ ಹಸುಗಳನ್ನು ರೈತರಿಗೆ ಕೊಡಿಸುವ ಗುರಿ ಇದೆ ಎಂದು ತಿಳಿಸಿದರು.

ಭೂತಾನ್​ನಿಂದ 17 ಸಾವಿರ ಟನ್ ಅಡಕೆ ಆಮದು: ಪ್ರತಿ ಕ್ವಿಂಟಾಲ್​ ಅಡಕೆ ದರ ಎರಡು ಸಾವಿರ ರೂ.ಗೆ ಕುಸಿತ

ಭೂತಾನ್​ನಿಂದ 17 ಸಾವಿರ ಟನ್ ಅಡಕೆ ಆಮದು ಹಿನ್ನೆಲೆ ಪ್ರತಿ ಕ್ವಿಂಟಾಲ್​ ಅಡಕೆ ದರ ಎರಡು ಸಾವಿರ ರೂ.ಗೆ ಕುಸಿತವಾಗಿದೆ. ಹಾಗಾಗಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಅಡಕೆ ಬೆಳೆಗಾರರಿಗೆ ಆತಂಕ ಶುರುವಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಅಡಕೆ ಬೆಳೆಯುವ ತಾಲೂಕು ಚನ್ನಗಿರಿ. ಆದರೆ ಅಡಕೆ ದರ ಮತ್ತಷ್ಟು ಕುಸಿಯುವ ಆತಂಕ ಹಿನ್ನೆಲೆ ಕೊಯ್ಲು ಆರಂಭಿಸಲಾಗಿದೆ.

ಇದನ್ನೂ ಓದಿ: ಬಸ್ ಹತ್ತಿಲ್ಲ, ರೈಲು ಏರಿಲ್ಲ: ಲಿಫ್ಟ್ ಕೇಳಿಕೊಂಡೆ 14 ದೇಶ ಸುತ್ತಿದ ವಿದೇಶಿ ಪ್ರಜೆ

ಪ್ರತಿ ಕ್ವಿಂಟಾಲ್ ರಾಶಿ ಅಡಿಕೆ ದರ ಸರಾಸರಿ 50 ರಿಂದ 55 ಸಾವಿರ ಬದಲು, ಅಡಿಕೆ ಕನಿಷ್ಟ 42,810 ರಿಂದ ಗರುಷ್ಠ 52,012ಕ್ಕೆ ಸರಾಸರಿ 49627ಕ್ಕೆ ಕುಸಿತವಾಗಿದೆ.

ಹಾಲಿನ ದರ ಏರಿಕೆಗೆ ವಿಜಯಪುರ ಜಿಲ್ಲೆಯ ಜನರು ತೀವ್ರ ಬೇಸರ

ವಿಜಯಪುರ: ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡಲಾಗಿದೆ. ಹಾಲಿನ ದರ ಏರಿಕೆ ಬಿಸಿ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ಜನರಿಗೂ ತಟ್ಟಿದೆ. ಹಾಲಿನ ದರ ಏರಿಕೆಗೆ ವಿಜಯಪುರ ಜಿಲ್ಲೆಯ ಜನರು ತೀವ್ರ ಬೇಸರವನ್ನು ಹೊರ ಹಾಕಿದ್ದಾರೆ. ಜನರಿಗೆ ದರ ಏರಿಕೆ ಬಿಸಿ ತಟ್ಟುತ್ತಿದೆ ಅದಕ್ಕೆ ಹಾಕಿನ ದರ ಏರಿಕೆಯೂ ಜೊತೆಗೂಡಿದೆ ಎಂದು ಅಸಮಾಧಾನವನ್ನು ಹೊರ ಹಾಕಿದ್ದರು.

ಇದನ್ನೂ ಓದಿ: ಬಿಎಂಟಿಸಿ ಬಸ್​ನಲ್ಲಿ ಕಂಡೆಕ್ಟರ್, ಪುರುಷ ಪ್ರಯಾಣಿಕರಿಂದ ವಿದ್ಯಾರ್ಥಿನಿಗೆ ಕಿರುಕುಳ

ನಂದಿಯ ಸಮೃದ್ದಿ ಹಾಲು ಲೀಟರ್​ಗೆ 50 ರೂಪಾಯಿ ಇದ್ದದ್ದು ಈಗಾ 54 ರೂಪಾಯಿಗೆ ಏರಿಕೆಯಾಗಿದೆ. ಅದರಂತೆ ಲೀಟರ್ ಗೆ 46 ರೂಪಾಯಿ ಇದ್ದ ಶುಭಂ ಹಾಲು‌ 50 ರೂಪಾಯಿಗೆ ಏರಿಕೆಯಾಗಿದೆ. ನಂದಿನಿ ಬಫೊಲೋ ಹಾಲು ಈ ಮೊದಲು ಲೀಟರ್ ಗೆ 54 ರೂಪಾಯಿ ಇದ್ದು 58 ರೂಪಾಯಿಗೆ ಏರಿಕೆ ಕಂಡಿದೆ. ಜೊತೆಗೆ ಲೀಟರ್ ಗೆ 48 ರೂಪಾಯಿ ಇದ್ದ ಮೊಸಲು ಇದೀಗ 52 ಕ್ಕೆ ರೂಪಾಯಿಗೆ ಜಿಗಿತವಾಗಿದೆ. ಇದರಿಂದ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲಾ ದರ ಏರಿಕೆ ಮಾಡಿದ್ದಾರೆ, ಎಲ್ಲ ದರ ಏರಿಕೆ ಮಾಡಿದರೆ ಹೇಗೆ ಎಂದು ನಗರದ ವಾಸಿ ಶಾಂತಾ ಪ್ರಶ್ನೆ ಮಾಡಿದ್ದಾರೆ. ಲೀಟರ್​ಗೆ ಮೂರು ರೂಪಾಯಿ ಏರಿಕೆ ಎಂದವರು ಇಂದು ನಾಲ್ಕು ರೂಪಾಯಿ ಏರಿಕೆ ಮಾಡಿದ್ದಾರೆ. ಮೇಲಿಂದ ಮೇಲೆ ದರ ಏರಿಕೆ ಸರಿಯಲ್ಲಾ ಎಂದಿದ್ದು, ಹಾಲಿದ ದರ ಏರಿಕೆ ಕಡಿಮೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಹಾಲಿನ ದರ ಏರಿಕೆ ಸರಿಯಲ್ಲಾ, ಜನ ಪರ ಸರ್ಕಾರ ಎಂದು ಕಾಂಗ್ರೆಸ್ ಗೆ ಜನರು ಮತ ಹಾಕಿದ್ದಾರೆಂದು ನಗರದ ವಾಸಿ ಜಾವೀದ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್