AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್ ಹತ್ತಿಲ್ಲ, ರೈಲು ಏರಿಲ್ಲ: ಲಿಫ್ಟ್ ಕೇಳಿಕೊಂಡೆ 14 ದೇಶ ಸುತ್ತಿದ ವಿದೇಶಿ ಪ್ರಜೆ

Mysuru News: ಲೀಫ್ಟ್ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಥವಾ ಒಂದು ಊರಿನಿಂದ ಮತ್ತೊಂದು ಊರಿನವರಗೆ ಹೋಗಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಊರಲ್ಲ, ಜಿಲ್ಲೆಯಲ್ಲ, ರಾಜ್ಯವು ಅಲ್ಲ, ಕೇವಲ ಲಿಫ್ಟ್ ಮೂಲಕವೇ ಪ್ರಾನ್ಸ್​ನಿಂದ 14 ದೇಶ ದಾಟಿ ಮೈಸೂರಿಗೆ ಭೇಟಿ ನೀಡಿದ್ದಾರೆ.

ಬಸ್ ಹತ್ತಿಲ್ಲ, ರೈಲು ಏರಿಲ್ಲ: ಲಿಫ್ಟ್ ಕೇಳಿಕೊಂಡೆ 14 ದೇಶ ಸುತ್ತಿದ ವಿದೇಶಿ ಪ್ರಜೆ
ಲುಕಾಸ್ ವೆನ್ನಾರ್‌
Follow us
ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 13, 2023 | 6:10 PM

ಮೈಸೂರು, ಆಗಸ್ಟ್​ 13: ಲಿಫ್ಟ್ (lift) ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಥವಾ ಒಂದು ಊರಿನಿಂದ ಮತ್ತೊಂದು ಊರಿನವರಗೆ ಹೋಗಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಊರಲ್ಲ, ಜಿಲ್ಲೆಯಲ್ಲ, ರಾಜ್ಯವು ಅಲ್ಲ, ಕೇವಲ ಲಿಫ್ಟ್ ಮೂಲಕವೇ ಪ್ರಾನ್ಸ್​ನಿಂದ 14 ದೇಶ ದಾಟಿ ಮೈಸೂರಿಗೆ ಭೇಟಿ ಕೊಟ್ಟಿದ್ದಾನೆ. ಈತ ಲಿಫ್ಟ್ ಮೂಲಕ ತಲುಪುವ ಡೆಸ್ಟಿಮೇಷನ್ ಕೇಳಿದರೆ ನಿಜಕ್ಕೂ ಅಚ್ಚರಿ ಆಗುತ್ತದೆ. ಅವನ ಲಿಫ್ಟ್ ಜರ್ನಿಯ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಮುಂದೆ ಓದಿ.

ವಿಮಾನ ಏರಲಿಲ್ಲ, ರೈಲು ಹತ್ತಲಿಲ್ಲ, ಬಸ್‌ಗೆ ಅಂತ ಒಂದು ಪೈಸೆ ಹಣವನ್ನೂ ಖರ್ಚು ಮಾಡಿಲ್ಲ. ಆದರೂ ಸುಮಾರು 20 ಸಾವಿರ ಕಿಲೋಮೀಟರ್ ಮೀರಿದ ಪ್ರಯಾಣ ಮಾಡಿರುವ ವ್ಯಕ್ತಿಯ ಹೆಸರು ಲುಕಾಸ್ ವೆನ್ನಾರ್. ದೂರದ ಫ್ರಾನ್ಸ್ ದೇಶದ ಪ್ರಜೆ. 23 ವರ್ಷದ ಲುಕಾಸ್ ವೆನ್ನಾರ್ ಕಳೆದ 7 ತಿಂಗಳಿನಿಂದ ವಿಶ್ವ ಪರಿಯಟನೆ ಮಾಡುತ್ತಿದ್ದು, ಇದಕ್ಕಾಗಿ ಒಂದೇ ಒಂದು ರೂಪಾಯಿ ಸಂಚಾರಿ ವೆಚ್ಚ ಖರ್ಚು ಮಾಡಿಲ್ಲ.

ಇದನ್ನೂ ಓದಿ: ಮೈಸೂರು; ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಆನೆ ಸಾವು

ಲುಕಾಸ್ ವೆನ್ನಾರ್‌ ಇದೇ ವರ್ಷ ಫೆಬ್ರವರಿ 4 ರಂದು ಫ್ರಾನ್ಸ್​ನಿಂದ ತನ್ನ ವಿಶೇಷ ಪ್ರಯಾಣ ಆರಂಭಿಸಿದ್ದಾರೆ. ಎಲ್ಲಿಯೂ ಟಿಕೇಟ್ ಖರೀದಿಸದೆ ಕೇವಲ ಲಿಫ್ಟ್ ಮೂಲಕ ಪ್ರಯಾಣ ಮಾಡುತ್ತಿರುವ ಇವರು ಹಡಗು, ಕಾರು, ಬೈಕ್, ಟ್ರಕ್​ಗಳ ಮೂಲಕ ಸಂಚಾರ ಮಾಡಿಕೊಂಡು ಫ್ರಾನ್ಸ್‌ನಿಂದ ಆರಂಭಿಸಿ ಆಫ್ರಿಕಾ, ಚೈನಾ, ಟಿಬೇಟ್, ಖಜಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿ 14 ದೇಶಗಳಲ್ಲಿ ಸುತ್ತಾಡಿದ್ದಾನೆ.

ಇಷ್ಟೆಲ್ಲ ದೇಶಗಳನ್ನು ಸುತ್ತಾಡಿರುವ ಲುಕಾಸ್ ಸದ್ಯ ಭಾರತದ ಪ್ರವಾಸದಲ್ಲಿ‌ ಇದ್ದಾರೆ. ಉತ್ತರ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಚಾರ ಮಾಡುತ್ತಿರುವ ಇವರು ಮೈಸೂರಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಮೈಸೂರು ಅರಮನೆ ನೋಡಿ ಸಕತ್ ಖುಷಿಪಟ್ಟರು.

ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಆಗಸ್ಟ್ 14 ರಂದು ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆ

ಭಾರತೀಯರ ಆತ್ಮೀಯತೆಗೆ ಮನಸೋತಿರುವ ಈತ ಭಾರತದಲ್ಲಿ ಒಟ್ಟು ಎರಡು ತಿಂಗಳು ಸಂಚಾರ ಮಾಡಿದ್ದಾರೆ. ಕೆಆರ್‌ಎಸ್ ವೀಕ್ಷಣೆ ಮುಗಿಸಿ ನಿಂತಿದ್ದವರಿಗೆ ಶ್ರೀರಂಗಪಟ್ಟಣದ ಭರತ್ ಎಂಬುವರು ಮೈಸೂರು ವರೆಗೆ ಲಿಫ್ಟ್ ಕೊಟ್ಟಿದ್ದಾರೆ.

ಒಟ್ಟಾರೆ ಮೈಸೂರು ಪ್ರವಾಸ ಮುಗಿಸಿ, ಶ್ರೀಲಂಕಾ ಕಡೆಗೆ ಸಂಚಾರ ಆರಂಬಿಸಿರುವ ಈತನಿಗೆ ಸ್ವಿಟ್ಜರ್ಲೆಂಡ್‌‌ ವರೆಗೆ ಲಿಫ್ಟ್ ಮೂಲಕವೇ ಸಂಚಾರ ಮಾಡುವ ಗುರಿ ಇದೆ. ಇವರ ವಿಶೇಷ ಪ್ರವಾಸ ಯಶಸ್ವಿಯಾಗಲಿ ಎನ್ನುವುದು ನಮ್ಮ ಹಾರೈಕೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ