ದಾವಣಗೆರೆ: ಕುರಿ ಬಿಟ್ಟು ಮೆಕ್ಕೆಜೋಳ ಮೇಯಿಸಿದ ದುಷ್ಕರ್ಮಿಗಳು; 20 ಎಕರೆಯಲ್ಲಿದ್ದ ಬೆಳೆ ನಾಶ

| Updated By: ganapathi bhat

Updated on: Jul 21, 2021 | 11:12 PM

ಹಾಲಮ್ಮ, ಚಂದ್ರಶೇಖರ, ಗಂಗಾಧರ್, ಈರಮ್ಮ ಎನ್ನುವವರು ಮೆಕ್ಕೆಜೋಳ ಬೆಳೆದಿದ್ದರು. ಸುಮಾರು ಎಂಟಕ್ಕೂ ಅಧಿಕ ಕುಟುಂಬಗಳು ಇಲ್ಲಿ ಸೇರಿ ಮೆಕ್ಕೆಜೋಳ ಬೆಳೆದಿದ್ದರು.

ದಾವಣಗೆರೆ: ಕುರಿ ಬಿಟ್ಟು ಮೆಕ್ಕೆಜೋಳ ಮೇಯಿಸಿದ ದುಷ್ಕರ್ಮಿಗಳು; 20 ಎಕರೆಯಲ್ಲಿದ್ದ ಬೆಳೆ ನಾಶ
ಬೆಳೆನಾಶ
Follow us on

ದಾವಣಗೆರೆ: ಇಲ್ಲಿನ ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದ 20 ಎಕರೆ ಬೆಳೆನಾಶವಾದ ದುರಂತ ಘಟನೆ ಇಂದು (ಜುಲೈ 21) ಗಮನಕ್ಕೆ ಬಂದಿದೆ. ಇಲ್ಲಿನ 20 ಎಕರೆ ಹೊಲದಲ್ಲಿ ದುಷ್ಕರ್ಮಿಗಳು ಕುರಿ ಬಿಟ್ಟು ಮೆಕ್ಕೆಜೋಳ ಮೇಯಿಸಿದ ಘಟನೆ ನಡೆದಿದೆ. ಹಾಲಮ್ಮ, ಚಂದ್ರಶೇಖರ, ಗಂಗಾಧರ, ಈರಮ್ಮ ಸೇರಿದಂತೆ 8ಕ್ಕೂ ಹೆಚ್ಚು ರೈತರು ಬೆಳೆದಿದ್ದ ಮೆಕ್ಕೆಜೋಳದ ಬೆಳೆ ನಾಶವಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ನಿನ್ನೆ ರಾತ್ರೋರಾತ್ರಿ 20 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ದುಷ್ಕರ್ಮಿಗಳು ಕುರಿ ಬಿಟ್ಟು ಮೇಯಿಸಿಕೊಂಡು ಹೋಗಿದ್ದರು. ಹಾಲಮ್ಮ, ಚಂದ್ರಶೇಖರ, ಗಂಗಾಧರ್, ಈರಮ್ಮ ಎನ್ನುವವರು ಮೆಕ್ಕೆಜೋಳ ಬೆಳೆದಿದ್ದರು. ಸುಮಾರು ಎಂಟಕ್ಕೂ ಅಧಿಕ ಕುಟುಂಬಗಳು ಇಲ್ಲಿ ಸೇರಿ ಮೆಕ್ಕೆಜೋಳ ಬೆಳೆದಿದ್ದರು.

ಆದರೆ, ಇಷ್ಟೊಂದು ದೊಡ್ಡ ಸ್ಥಳದಲ್ಲಿ, ಎಕರೆಗಟ್ಟಲೆ ಜಾಗದಲ್ಲಿ ಬೆಳೆದ ಮೆಕ್ಕೆಜೋಳವನ್ನು ದುಷ್ಕರ್ಮಿಗಳು ಕುರಿ ಮೇಯಿಸಿಕೊಂಡು ಹೋಗಿದ್ದಾರೆ. ಈ ಕೃತ್ಯದಿಂದ ರೈತರ ಆಕ್ರಂದನ ಮುಗಿಲು ಮುಟ್ಟಿದೆ. 20 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ಬೆಳೆದ ಬೆಳೆ ಕೈ ಸೇರದೆ ಇರೋದಕ್ಕೆ ರೈತರು ಕಣ್ಣೀರು ಹಾಕಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ದಾವಣಗೆರೆ: ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಡಾಗ್ ತುಂಗಾ; ಶ್ವಾನದ ಯಶೋಗಾಥೆ ಇಲ್ಲಿದೆ

ದಾವಣಗೆರೆಯಲ್ಲಿ ಧಾರಾಕಾರ ಮಳೆಗೆ ಕೆಇಬಿ ಉಪಕೇಂದ್ರದ ಕಚೇರಿ ಜಲಾವೃತ; ಇಬ್ಬರು ಸಿಬ್ಬಂದಿಯ ರಕ್ಷಣೆ

(Sheep eat Corn grown in 20 Acres of Land in Davanagere Farmers registered Complaint)