ಜಗಳೂರು ದೊಡ್ಡ ಮಾರಿಕಾಂಬಾ ಜಾತ್ರೆ ವೇಳೆ ಯುವಕರ ಗುಂಪಿನಿಂದ ಸ್ವಾಮೀಜಿ, ವಕೀಲೆಯೊಬ್ಬರ ಮೇಲೆ ಹಲ್ಲೆ
ಏಪ್ರಿಲ್ 26ರಂದು ಜಗಳೂರು ದೊಡ್ಡ ಮಾರಿಕಾಂಬಾ ಜಾತ್ರೆ ವೇಳೆ ಯುವಕರ ಗುಂಪಿನಿಂದ ಸ್ವಾಮೀಜಿ ಹಾಗೂ ವಕೀಲೆಯೊಬ್ಬರ ಮೇಲೆ ಹಲ್ಲೆ ಮಾಡಿ, ಕಾರ್ನ್ನ ಜಖಂಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಜನರ ಬಂಧನ.
ದಾವಣಗೆರೆ: ಏಪ್ರಿಲ್ 26ರಂದು ಜಗಳೂರು ದೊಡ್ಡ ಮಾರಿಕಾಂಬಾ ಜಾತ್ರೆ ವೇಳೆ ಯುವಕರ ಗುಂಪಿನಿಂದ ಸ್ವಾಮೀಜಿ(Swamiji) ಹಾಗೂ ವಕೀಲೆಯೊಬ್ಬರ(Lawyer) ಮೇಲೆ ಹಲ್ಲೆ ಮಾಡಿ, ಕಾರ್ನ್ನ ಜಖಂಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಜನರ ಬಂಧಿಸಲಾಗಿದೆ. ಇದೀಗ ಬಂಧನ ಖಂಡಿಸಿ ಠಾಣೆಗೆ ನುಗ್ಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಅವರಿಗೆ ಲಾಠಿ ರುಚಿ ತೋರಿಸಿದ್ದಾರೆ. ಈ ವೇಳೆ ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಜಗಳೂರು ತಾಲೂಕಾ ಆಸ್ಪತ್ರೆಗೆ ಸೇರಿಸಲಾಗಿದೆ.
ಇನ್ನು ಏ.26 ರಂದು ದೊಡ್ಡ ಮಾರಿಕಾಂಬಾ ಜಾತ್ರೆಯನ್ನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜಗಳೂರು ಮಾರ್ಗವಾಗಿ ಹಾದು ಹೋಗುತ್ತಿದ್ದ ಸ್ವಾಮೀಜಿಯೊಬ್ಬರ ಮೇಲೆ ಹಲ್ಲೆ ಮಾಡಿ, ದುಡ್ಡು ಸಹ ಕಸಿದುಕೊಳ್ಳಲಾಗಿತ್ತು. ಇದರ ಜೊತೆಗೆ ಮಗುವನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದ ವಕೀಲೆಯ ಕಾರ್ನ್ನ ಜಖಂ ಗೊಳಿಸಲಾಗಿತ್ತು. ಇದೇ ಪ್ರಕರಣಕ್ಕೆ ಇಂತಹವರ ವಿರುದ್ದ ಕ್ರಮಕೈಗೊಳ್ಳಲಾಗಿದೆ ಎಂದು ದಾವಣಗೆರೆ ಎಸ್ಪಿ ಡಾ. ಅರುಣ್ ಕೆ ಮಾಹಿತಿ ನೀಡಿದ್ದಾರೆ.
ಏ.8ರಂದು ಥಾಣೆಯ ದೇವಸ್ಥಾನದ ಬಳಿ ಗಲಾಟೆ ಸೃಷ್ಟಿಸಿ, ಕಾನೂನು ಬಾಹಿರವಾಗಿ ಸಭೆ; 30 ಜನರ ಮೇಲೆ ಪ್ರಕರಣ ದಾಖಲು
ಥಾಣೆ/ಮಹಾರಾಷ್ಟ್ರ: ಹನುಮಾನ್ ಜಯಂತಿಯಂದು ದೇವಸ್ಥಾನದಲ್ಲಿ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನವನ್ನ ನಿರ್ಮಿಸಿದ ಜಾಗದ ಕುರಿತು ವಿವಾದವಿದ್ದು, ಅದರ ಕುರಿತು ಸಭೆ ಮಾಡುವಾಗ ಗಲಾಟೆಯಾಗಿತ್ತು. ಈ ಕುರಿತು ಸೆಕ್ಷನ್ 143(ಕಾನೂನು ಬಾಹಿರ ಸಭೆ), ಸೆಕ್ಷನ್ 447(ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ 30 ಜನರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ