A1 ಗೆ ಬೇಲು, 2ನೇ ಆರೋಪಿಗೆ ಜೈಲು! ಕೆರಳಿರುವ ಲೋಕಾಯುಕ್ತ ಕಳಂಕಿತ ಶಾಸಕ ಮಾಡಾಳ್ ವಿರುದ್ಧ ಮತ್ತೊಂದು ಕೇಸ್ ಜಡಿಯಲು ಸರ್ವಸಿದ್ಧತೆ!

ಮಾಡಾಳ್ ವಿರೂಪಾಕ್ಷಪ್ಪ ಇನ್ನೇನು ರಾಜಕೀಯ ನಿವೃತ್ತಿ ಪಡೆಯಬೇಕು. ಪುತ್ರ ಮಲ್ಲಿಕಾರ್ಜುನನ್ನ ಶಾಸಕನನ್ನಾಗಿ ಮಾಡಬೇಕು ಎಂದು ಎಣಿಸುತ್ತಿದ್ದಾಗಲೇ... ಲೋಕಾಯುಕ್ತ ದಾಳಿಯಿಂದ ಇಡಿ ಮಾಡಾಳ್ ಕುಟುಂಬದ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ.

A1 ಗೆ ಬೇಲು, 2ನೇ ಆರೋಪಿಗೆ ಜೈಲು! ಕೆರಳಿರುವ ಲೋಕಾಯುಕ್ತ ಕಳಂಕಿತ ಶಾಸಕ ಮಾಡಾಳ್ ವಿರುದ್ಧ ಮತ್ತೊಂದು ಕೇಸ್ ಜಡಿಯಲು ಸರ್ವಸಿದ್ಧತೆ!
ಕಳಂಕಿತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಮತ್ತೊಂದು ಕೇಸ್ ಜಡಿಯಲು ಸರ್ವಸಿದ್ಧತೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 16, 2023 | 8:42 AM

ಕಳಂಕಿತ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Tainted BJP MLA Madalu Virupakshappa) ಈಗಾಗಲೇ ರಾಜ್ಯ-ದೇಶದಲ್ಲಿ ಪ್ರತಿ ಪಕ್ಷಗಳಿಗೆ ಆಹಾರ ಆಗಿದ್ದಾರೆ. ಜೊತೆಗೆ ನ್ಯಾಯಾಂಗದಲ್ಲಿ ವಕೀಲರ ಸಮೂಹ ಸಹ ಇವರ ಜಾಮೀನು ಪ್ರಕರಣಕ್ಕೆ ಬೇಸರ ವ್ಯಕ್ತಪಡಸಿದ್ದಾರೆ. ಇದೂ ಸಾಲದು ಎಂಬಂತೆ ಲೋಕಾಯುಕ್ತ ಅಧಿಕಾರಿಗಳು (Lokayukta) ಮಾಡಾಳ್ ಜಾಮೀನು (Bail) ರದ್ದು ಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾರೆ. ಈ ಮಧ್ಯೆ ಇನ್ನಷ್ಟು ಸಂಕಷ್ಟ ಮಾಡಾಳ್ ಗೆ ಶುರುವಾಗಿವೆ. ಈಗ ಪುತ್ರನಿಂದ ಲಂಚ ಸ್ವೀಕಾರದ ಬಗ್ಗೆ ಮಾತ್ರ ಕೇಸ್ ಫೈಲ್ ಆಗಿದೆ. ಇಷ್ಟರಲ್ಲಿಯೇ ಆಸ್ತಿ ವಿಚಾರಕ್ಕೆ (Property) ಇನ್ನೊಂದು ಕೇಸ್ ಆಗುವುದು ಬಹುತೇಕ ಖಚಿತವಾಗಿದೆ. ಇಲ್ಲಿದೆ ನೋಡಿ ಮಾಡಾಳ್ ಇನ್ನೊಂದು ಸಂಕಷ್ಟ ಸ್ಟೋರಿ.

ಕಂತೆ ಕಂತೆ ನೋಟುಗಳ ಸಹಿತ ಸಿಕ್ಕು ಬಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಈಗ ಜೈಲು ವಾಸಿ. ಪುತ್ರ ಎರಡನೇ ಆರೋಪಿ ಆದ್ರೆ ತಂದೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೊದಲ ಆರೋಪಿ. ಎರಡನೇ ಆರೋಪಿಗೆ ಜೈಲು. ಮೊದಲ ಆರೋಪಿಗೆ ಬೇಲು! ಇದೇ ವಿಚಾರಕ್ಕೆ ನ್ಯಾಯವಾದಿಗಳು ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ನ್ಯಾಯಾಂಗದಲ್ಲಿ ಪ್ರಭಾವಿಗಳಿಗೊಂದು ಬಡವರಿಗೊಂದು ನ್ಯಾಯವಾ? ಎಂಬ ಪ್ರಶ್ನೆ ಮತ್ತೆ ಎದ್ದಿದೆ.

ಕೇಸ್ ಆದ ಘಳಿಗೆಯಿಂದ ನಾಪತ್ತೆ ಆಗಿದ್ದ ಮಾಡಾಳ್ ಜಾಮೀನು ಸಿಕ್ಕ ಮೂರೇ ಗಂಟೆಯಲ್ಲಿ ಮನೆಯಲ್ಲಿದ್ದರು. ಇಂತಹ ಮಾಡಾಳ್ ಈಗ ಚುನಾವಣೆ ವೇಳೆ ಪ್ರತಿ ಪಕ್ಷಗಳಿಗೆ ಆಹಾರ ಆಗಿದ್ದಾರೆ. ಜೊತೆಗೆ ಮಾಡಾಳ್ ಅವರಿಗೆ ಜಾಮೀನು ಮಂಜೂರು ಆಗಿರುವುದಕ್ಕೆ ಸ್ವತಃ ಲೋಕಾಯುಕ್ತ ಅಧಿಕಾರಿಗಳೇ ಕೆಂಡವಾಗಿದ್ದಾರೆ. ಇದೇ ಕಾರಣಕ್ಕೆ ಜಾಮೀನು ರದ್ದು ಮಾಡುವಂತೆ ಆಗ್ರಹಿಸಿ ಸುಪ್ರೀಂ ಮೊರೆ ಹೋಗಿದ್ದಾರೆ.

ಈ ಎಲ್ಲ ಸಂಕಷ್ಟದ ನಡುವೆ ಲೋಕಾಯುಕ್ತ ಅಧಿಕಾರಿಗಳು ಇನ್ನೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ ಜೊತೆಗೆ ಹೊರ ರಾಜ್ಯಗಳಲ್ಲಿ ಯಾವ ಯಾವ ರೀತಿಯ ಆಸ್ತಿಗಳನ್ನ ಮಾಡಾಳ್ ಮಾಡಿದ್ದಾರೆ ಎಂಬ ಶೋಧ ಶುರು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಒಂದು ಪ್ರತ್ಯೇಕ ಕೇಸ್ ಆಗುವುದು ಬಹುತೇಕ ಖಚಿತವಾಗಿದೆ. ಆದ್ರೆ ಮಾಡಾಳ್ ಅವರನ್ನ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದೆ.

ಬೆಂಗಳೂರಿನಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ಮಾಡಿದಾಗ 40 ಲಕ್ಷ ಹಣದ ಸಹಿತ ಪುತ್ರ ಸಿಕ್ಕು ಬಿದ್ದಿದ್ದ. ಇದಾದ ಬಳಿಕ ಮನೆಯ ಮೇಲೆ ದಾಳಿ ಮಾಡಿದಾಗ ಕೋಟಿ ಕೋಟಿ ಹಣ ಸಿಕ್ಕಿದ್ದು ಗೊತ್ತಾಯಿತು. ಹೀಗೆ ಹಣ ಸಿಕ್ಕ 18 ಗಂಟೆಯ ಬಳಿಕ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರದಲ್ಲಿನ ಮಾಡಾಳ್ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಇಲ್ಲಿ ಕೂಡಾ ಅಂದಾಜು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನ ಜೊತೆಗೆ ಆಸ್ತಿ ಪತ್ರ ಸಿಸಿ ಕ್ಯಾಮರಾ ಡಿವಿಆರ್ ವಶಕ್ಕೆ ಪಡೆದಿದ್ದರು ಅಧಿಕಾರಿಗಳು. ಇಷ್ಟೆಲ್ಲಾ ಆದ್ರು ಕೂಡಾ ಅವರ ಬೆಂಬಲಿಗರು ಮಾತ್ರ ಮಾಡಾಳ್ ಅವರು ಎನೂ ಮಾಡೇ ಇಲ್ಲಾ ಎನ್ನುತ್ತಿದ್ದಾರೆ.

ಹೀಗೆ ಮಾಡಾಳ್ ವಿರೂಪಾಕ್ಷಪ್ಪ ಇನ್ನೇನು ರಾಜಕೀಯ ನಿವೃತ್ತಿ ಪಡೆಯಬೇಕು. ಪುತ್ರ ಮಲ್ಲಿಕಾರ್ಜುನನ್ನ ಶಾಸಕನನ್ನಾಗಿ ಮಾಡಬೇಕು ಎಂದು ಎಣಿಸುತ್ತಿದ್ದಾಗಲೇ… ಲೋಕಾಯುಕ್ತ ದಾಳಿಯಿಂದ ಇಡಿ ಮಾಡಾಳ್ ಕುಟುಂಬದ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗಿದೆ. ಇವರ ಜಾಮೀನು ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್​​ ನೀಡುವ ತೀರ್ಪು ಕೂಡಾ ಈಗ ಮಹತ್ವ ಪಡೆದುಕೊಂಡಿದೆ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

Published On - 8:38 am, Thu, 16 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್