AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಜೋಡಿ ಮದುವೆಯಾಗಿ ಹತ್ತು ವರುಷವಾಗಿತ್ತು, ಆದರೆ ಹರುಷವಿರಲಿಲ್ಲ, ಕೊನೆಗೂ ಪತಿ ನಿಗೂಢ ಸಾವು

ಕೋಟೆನಾಡು ಚಿತ್ರದುರ್ಗ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಿವಕುಮಾರನ ಶವ ಪತ್ತೆ ಆಗಿದೆ. ಆದ್ರೆ, ಕಾಲುಗಳು ಪೂರ್ಣ ನೆಲಕ್ಕೆ ತಾಗಿದ್ದು ಮೃತನ ಕುಟುಂಬಸ್ಥರಲ್ಲಿ ಅನುಮಾನ ಹುಟ್ಟಿಸಿದೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ರು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ.

ಆ ಜೋಡಿ ಮದುವೆಯಾಗಿ ಹತ್ತು ವರುಷವಾಗಿತ್ತು, ಆದರೆ ಹರುಷವಿರಲಿಲ್ಲ, ಕೊನೆಗೂ ಪತಿ ನಿಗೂಢ ಸಾವು
ಆ ಜೋಡಿ ಮದುವೆಯಾಗಿ ಹತ್ತು ವರುಷವಾಗಿತ್ತು, ಆದರೆ ಪತಿ ನಿಗೂಢ ಸಾವು
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Mar 22, 2024 | 10:27 AM

Share

ಆ ಜೋಡಿ ( couple) ಮದುವೆಯಾಗಿ ಒಂದು ಹತ್ತು ವರುಷಗಳೇ ಉರುಳಿವೆ. ಇಬ್ಬರು ಮಕ್ಕಳೂ ಜತೆಯಾಗಿದ್ದರು. ಆದ್ರೆ, ಕೌಟುಂಬಿಕ ಕಲಹ ಮಾತ್ರ ಸ್ತಬ್ಧಗೊಂಡಿರಲಿಲ್ಲ (happiness). ಕೊನೆಗೂ ಪತಿ ನಿಗೂಢ ಸಾವಿಗೀಡಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ವರದಿ ಇಲ್ಲಿದೆ. ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ನೆಲಕ್ಕೆ ಅರ್ಧ ಕಾಲು ತಾಗಿದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಅನುಮಾನ ಮೂಡಿಸಿದೆ. ಪತ್ನಿ ಕುಟುಂಬಸ್ಥರ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ. ಹೌದು, ಚಿತ್ರದುರ್ಗ (Chitradurga) ತಾಲೂಕಿನ ಸಿಂಗಾಪುರ ಗ್ರಾಮದ ಶಿವಕುಮಾರ್ ಸ್ವಗ್ರಾಮದ ಸಂಬಂಧಿ ಲಕ್ಷ್ಮೀಯನ್ನೇ ಮದುವೆ ಆಗಿದ್ದನು. ಆದ್ರೆ, ಕೂಲಿನಾಲಿ ಕೆಲಸ ಮಾಡಿದ್ದೆಲ್ಲವೂ ಕುಡಿತಕ್ಕೆ ಖರ್ಚು ಮಾಡುತ್ತಿದ್ದನು. ಹೀಗಾಗಿ, ಲಕ್ಷ್ಮೀ ಮತ್ತು ಶಿವಕುಮಾರ್ ನಡುವೆ ಆಗಾಗ ಗಲಾಟೆ ನಡೆಯುತ್ತಲೇ ಇತ್ತು. 7 ವರ್ಷದ ಪುತ್ರಿ ಗಗನಾ, 5 ವರ್ಷದ ಪುತ್ರ ಪವನ್ ಜತೆಯಾಗಿದ್ದರಾದ್ರೂ ಗಂಡ ಹೆಂಡತಿ ಗಲಾಟೆ ಮಾತ್ರ ನಿಂತಿರಲಿಲ್ಲ.

ಆದ್ರೆ, ಇಂದು ಬೆಳಗಿನ ಜಾವದ ವೇಳೆಗೆ ಶಿವಕುಮಾರ್ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿದ್ದಾನೆ. ಕಾಲುಗಳು ನೆಲಕ್ಕೆ ತಾಗಿದ್ದು ಶಿವಕುಮಾರ್ ಕುಟುಂಬಸ್ಥರಲ್ಲಿ ಅನುಮಾನ ಮೂಡಿಸಿದೆ. ಪತ್ನಿ ಲಕ್ಷ್ಮಿಯ ತಂದೆ ಮತ್ತು ಸಹೋದರರು ಸೇರಿ ಹೊಡೆದು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ.

Also Read: ಇಂಜಿನಿಯರ್ ಗಂಡನಿಗೆ ಅಂಟಿಕೊಂಡಿತ್ತು ಐಪಿಎಲ್ ಬೆಟ್ಟಿಂಗ್ ಭೂತ: 54 ಲಕ್ಷ ರೂ ಸಾಲ, ನೊಂದ ಹೆಂಡತಿ ನೇಣಿಗೆ ಶರಣು

ಇನ್ನು ಪತ್ನಿ ಲಕ್ಷ್ಮೀ ಸೇರಿದಂತೆ ಕುಟುಂಬಸ್ಥರೆಲ್ಲರೂ ಸಹ ಶಿವಕುಮಾರ್ ಸಾವಿನ ಸುದ್ದಿ ಸೇರಿ ಮನೆ ಬಳಿ ಜಮಾಯಿಸಿದ್ದರು. ಅಲ್ಲದೆ ಕಂಬನಿ ಮಿಡಿದು ಸಂಕಟ ತೋಡಿಕೊಳ್ಳುತ್ತಿದ್ದರು. ಮೃತ ಶಿವಕುಮಾರ್ ಕುಟುಂಬಸ್ಥರ ಆರೋಪ ನಿರಾಧಾರ ಮತ್ತು ಅಪ್ಪಟ ಸುಳ್ಳು ಎಂದು ಲಕ್ಷ್ಮೀ ತಂದೆ ಈಶ್ವರಪ್ಪ ಹೇಳಿದ್ದಾರೆ. ಅಲ್ಲದೆ ನನ್ನ ಮಗಳೇ ದುಡಿದು ಇಷ್ಟುವರ್ಷ ಬದುಕು ಕಟ್ಟಿಕೊಂಡಿದ್ದಳು.

Also Read: ಸ್ನೇಹಿತನ ಪತ್ನಿಯನ್ನೇ ಪಟಾಯಿಸಿ ಬಾಳು ಕೊಟ್ಟಿದ್ದ! ಇದೀಗ ದೋಖಾ, ಬೀದಿಗೆ ಬಂದ ಮಹಿಳೆಯಿಂದ ತಮಟೆ ಹೊಡೆದು ಧರಣಿ

ಶಿವಕುಮಾರ್ ಕುಡಿದು ಬಂದು ಗಲಾಟೆ ಮಾಡುವುದು, ಹೊಡೆಯುವುದು ಬಡಿಯುವುದು ಮಾಡುವ ಕಾರಣಕ್ಕೆ ನಾವೇ ಮನೆಗೆ ಕರೆದುಕೊಂಡು ಹೋಗುತ್ತಿದ್ದೆವು. ಶಿವಕುಮಾರ್ ಗೆ ಹೊಡೆದು ಸಾಯಿಸುವಂಥ ಕೆಲಸ ನಾವು ಮಾಡಿಲ್ಲ ಎಂದು ಹೇಳಿದ್ರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ