ದಾವಣಗೆರೆ: ಜಿಲ್ಲೆಯ ವಿವೇಕಾನಂದ ಬಡಾವಣೆಯ ಉಮಾಶಂಕರ್ ಹಾಗೂ ನವ್ಯಾ ದಂಪತಿ ಪುತ್ರ ಸಮರ್ಥ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರುವ ಸಾಧನೆ ಮಾಡಿದ್ದಾನೆ. ತಂದೆ ಸರ್ಕಾರಿ ಉದ್ಯೋಗಿ, ತಾಯಿ ನವ್ಯಾ ಎಂಎಸ್ಸಿ, ಬಿಎಡ್ ಓದಿದ್ದಾರೆ. ಇವರ ಪುತ್ರ ಸಮರ್ಥ್ ಯಾರ ಸಹಾಯವೂ ಇಲ್ಲದೇ ಮೊಬೈಲ್ನಲ್ಲಿಯೇ ತನ್ನ ಗುರುವನ್ನ ಕಂಡು ಕೊಂಡಿದ್ದಾನೆ. ಮೊಬೈಲ್ ಅನ್ನೋ ಗುರುವಿನಿಂದ ಕಲಿತದ್ದನ್ನ ಹತ್ತು ದಿನ ಬಿಟ್ಟು ಕೇಳಿದ್ರು ಹೇಳ್ತಾನೆ. ಈ ಪುಟಾಣಿ ಈಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಹೀಗಾಗಿ ಈತನನ್ನ ಉನ್ನತ ಅಧಿಕಾರಿ ಮಾಡೋ ಕನಸು ಕಾಣ್ತಿದ್ದಾರೆ ಪಾಲಕರು.
ಈತನಿಗಿನ್ನೂ 2 ವರ್ಷ ಆರು ತಿಂಗಳು. ಇಷ್ಟು ವಯಸ್ಸಿನ ಮಕ್ಕಳು ಸರಿಯಾಗಿ ಮಾತನಾಡೋದೇ ಕಷ್ಟ.. ಅಂತಾದ್ರಲ್ಲಿ ಈತ 40 ಪ್ರಾಣಿಗಳ ಹೆಸರು ಹೇಳ್ತಾನೆ. 14 ದೇಶಗಳ ನೋಟ್ಗಳನ್ನ ಗುರ್ತಿಸುತ್ತಾನೆ. 20 ಹಣ್ಣುಗಳ ಹೆಸರು ಹೇಳುತ್ತಾನೆ. ಸಂಬಂಧಿಕರೊಬ್ಬರು ಸಲಹೆಯಂತೆ ಈತನ ವಿಡಿಯೋ ಮಾಡಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ಗೆ ಕಳುಹಿಸಿದ್ರು. ಇದಕ್ಕೆ ಅವರಿಂದ ಮೆಚ್ಚುಗೆ ಪತ್ರ ಬಂದಿದೆ.
ಸಮರ್ಥ್ ಎದುರು ತಂದೆ-ತಾಯಿ ಯಾವುದೇ ವಿಷಯದ ಬಗ್ಗೆ ಚರ್ಚಿಸಿದ್ರು ನೆನಪಿಟ್ಟುಕೊಳ್ಳುತ್ತಾನೆ. ಈತ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಿ, ಕರ್ನಾಟಕಕ್ಕೆ ಕೀರ್ತಿ ತರಲಿ ಅನ್ನೋದು ನಮ್ಮ ಆಶಯ.
ಇದನ್ನೂ ಓದಿ: ಕುಖ್ಯಾತ ಸರಗಳ್ಳರ ಗ್ಯಾಂಗ್ ಬಂಧನ ಪ್ರಕರಣ; ಬಂಧನದ ಹಿಂದೆ ಇದೆ ರೋಚಕ ಸ್ಟೋರಿ