ಕುಖ್ಯಾತ ಸರಗಳ್ಳರ ಗ್ಯಾಂಗ್ ಬಂಧನ ಪ್ರಕರಣ; ಬಂಧನದ ಹಿಂದೆ ಇದೆ ರೋಚಕ ಸ್ಟೋರಿ

ಸರಗಳ್ಳರು ನಗರದಲ್ಲಿ ಹತ್ತಾರು ಕಡೆ ಸರಗಳ್ಳತನ ಮಾಡಿ ಪೊಲೀಸರನ್ನೇ ಯಾಮಾರಿಸಿದ್ದರು. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯ ಸರಗಳ್ಳತನ ಮಾಡಿ ಎಸ್ಕೇಪ್ ಆಗಿದ್ದರು.

ಕುಖ್ಯಾತ ಸರಗಳ್ಳರ ಗ್ಯಾಂಗ್ ಬಂಧನ ಪ್ರಕರಣ; ಬಂಧನದ ಹಿಂದೆ ಇದೆ ರೋಚಕ ಸ್ಟೋರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: sandhya thejappa

Updated on: Aug 26, 2021 | 9:42 AM

ಬೆಂಗಳೂರು: ಕುಖ್ಯಾತ ಸರಗಳ್ಳ ಬವಾರಿಯ ಗ್ಯಾಂಗ್​ನ ಬಂಧಿಸಲು ಹಲವು ತಿಂಗಳಿಂದ ಕಾರ್ಯಾಚರಣೆ ನಡೆದಿದೆ. ರಾಹುಲ್, ಗೌರವ್, ನಿತೀನ್, ರಿಯಾಜ್ ಸೇರಿ ಐವರನ್ನು ಬಂಧನ ಮಾಡಿದ್ದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಬವಾರಿಯ ಗ್ಯಾಂಗ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಸೆರೆಗೆ ನೂರಾರು ಸಿಸಿ ಟಿವಿಗಳ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಆದರೆ ಸಿಸಿ ಟಿವಿ ದೃಶ್ಯದಲ್ಲಿಯೂ ಆರೋಪಿಗಳ ಜಾಡು ಪತ್ತೆಯಾಗಿರಲಿಲ್ಲ. ಆರೋಪಿಗಳು ಕೊನೆಯದಾಗಿ ಪತ್ತೆಯಾದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿ, ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸರಗಳ್ಳರು ನಗರದಲ್ಲಿ ಹತ್ತಾರು ಕಡೆ ಸರಗಳ್ಳತನ ಮಾಡಿ ಪೊಲೀಸರನ್ನೇ ಯಾಮಾರಿಸಿದ್ದರು. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯ ಸರಗಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಪೊಲೀಸರು ಘಟನೆ ನಡೆದ ಸ್ಥಳದಿಂದ 12 ಕಿಲೋಮೀಟರ್ ದೂರ ಕಾರ್ಯಚರಣೆ ನಡೆಸಿದ್ದರು. ಸರ ಕದ್ದು ಹೋಗಿರುವ ವಿಜಯನಗರದಿಂದ ಸುಬ್ರಮಣ್ಯ ನಗರದವರೆಗೆ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಾರೆ. 12 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ ಪೊಲೀಸರಿಗೆ, ಸುಬ್ರಮಣ್ಯ ನಗರದ ಬಳಿಯಿಂದ ಸರಗಳ್ಳರು ಮುಂದೆ ಹೋಗಿರುವ ದೃಶ್ಯ ಸಿಗುವುದಿಲ್ಲ.

ಪೊಲೀಸರು ಅನುಮಾನ ಬಂದು ಸುಬ್ರಮಣ್ಯ ನಗರ ಸುತ್ತಾಮುತ್ತ ಹುಡುಕಾಟ ನಡೆಸುತ್ತಾರೆ. ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಖಾಕಿ ಪಡೆ ಜಾಲಾಡುತ್ತದೆ. ಸುಬ್ರಮಣ್ಯ ನಗರದ ಸ್ಲಂನಲ್ಲಿ ಪಲ್ಸರ್ ಬೈಕ್ ಮೇಲೆ ಟಾರ್ಪಲ್ ಹಾಕಿ ಮುಚ್ಚಿಟ್ಟಿರುವುದು ಪೊಲೀಸರಿಗೆ ಕಾಣಿಸುತ್ತೆ. ಬೈಕ್ಗೆ ನಂಬರ್ ಪ್ಲೇಟ್ ಇರೋದಿಲ್ಲ. ಬೈಕ್ ಕಳ್ಳರದ್ದೇ ಇರಬಹುದು ಎನ್ನುವ ಅನುಮಾನ ಬಲವಾಗುತ್ತೆ.

ಈ ವೇಳೆ ವಿಜಯನಗರ ಪೊಲೀಸರಿಂದ ಅಕ್ಕ ಪಕ್ಕ ಮನೆಯವರ ಬಳಿ ವಿಚಾರಿಸಿದಾಗ ಕಳ್ಳರು ಮನೆಯೊಂದರಲ್ಲಿ ಇರುವ ಮಾಹಿತಿ ಸಿಗುತ್ತೆ. ಮಾರನೆ ದಿನ ವಿಜಯನಗರ ಪೊಲೀಸ್ ತಂಡ ಮನೆ ಮೇಲೆ ದಾಳಿ ಮಾಡಿದಾಗ ಆರೋಪಿಗಳು ಸಿಕ್ಕಿಹಾಕಿಕೊಳ್ಳುತ್ತಾರೆ.

ಇದನ್ನೂ ಓದಿ

ಕತ್ತು ಕುಯ್ದು, ಸಿಕ್ಕಸಿಕ್ಕಲ್ಲೆಲ್ಲಾ ಚಾಕುವಿನಿಂದ ಚುಚ್ಚಿ ಹತ್ಯೆಗೈದ ಕಿರಾತಕರು; ಕುರಿಕೋಟಾ ಸೇತುವೆ ಬಳಿ ಗುರುತು ಸಿಗದ ಶವ ಪತ್ತೆ

‘ಮೊಘಲರೇ ನಿಜವಾಗಿ ಈ ದೇಶ ಕಟ್ಟಿದ್ದು; ಅವರ ಬಗ್ಗೆ ಕೆಟ್ಟ ಮಾತು ಸರಿಯಲ್ಲ’: ನಿರ್ದೇಶಕ ಕಬೀರ್​ ಖಾನ್​

(thrilling story of that police had been working on arresting the burglars at Bengaluru)

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ