ಮರದ ಮೇಲಿಂದ ಬಿದ್ದು ಹೊಟ್ಟೆ ಹರಿದಿದ್ದ ಕೋತಿಯ ಜೀವ ಕಾಪಾಡಿದ ಪಶು ವೈದ್ಯಾಧಿಕಾರಿ

ಮರದ ಮೇಲಿಂದ ಬಿದ್ದು ಕೋತಿಯ ಹೊಟ್ಟೆ ಹರಿದು ಕರಳು ಹೊರಗೆ ಬಂದಿದ್ದರುವ ಘಟನೆ ಧಾರವಾಡದ ನವಲೂರ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಮರದ ಮೇಲಿಂದ ಬಿದ್ದು ಹೊಟ್ಟೆ ಹರಿದಿದ್ದ ಕೋತಿಯ ಜೀವ ಕಾಪಾಡಿದ ಪಶು ವೈದ್ಯಾಧಿಕಾರಿ
ಕೋತಿಯನ್ನು ರಕ್ಷಿಸಿದ ವನ್ಯಜೀವಿ ಪ್ರಿಯರು
TV9kannada Web Team

| Edited By: Vivek Biradar

Jun 26, 2022 | 4:16 PM

ಧಾರವಾಡ: ಮರದ (Tree) ಮೇಲಿಂದ ಬಿದ್ದು ಕೋತಿಯ ಹೊಟ್ಟೆ ಹರಿದು ಕರಳು ಹೊರಗೆ ಬಂದಿದ್ದರುವ ಘಟನೆ ಧಾರವಾಡದ (Dharwad) ನವಲೂರ ರೈಲ್ವೆ ನಿಲ್ದಾಣದ (Navaluru Railway Station) ಬಳಿ ನಡೆದಿದೆ. ವಿಷಯ ತಿಳಿದು ಧಾರವಾಡದ ವನ್ಯಜೀವಿ ಪ್ರಿಯ ಸೋಮಶೇಖರ ಮತ್ತು ತಂಡ ಕೋತಿಯನ್ನು ವೈದ್ಯರ ಬಳಿ ತಂದಿದ್ದಾರೆ. ನಂತರ ನವಲಗುಂದ ಪಶು ವೈದ್ಯಾಧಿಕಾರಿ ಡಾ. ವಿನೀತ ಶಸ್ತ್ರಚಿಕಿತ್ಸೆ ಮಾಡಿ ಕೋತಿಯನ್ನು ರಕ್ಷಿಸಿದ್ದಾರೆ.

ಇದನ್ನು ಓದಿ: ಕೇವಲ 6 ಸೆಕೆಂಡ್​ಗಳಲ್ಲಿ ಸೋಡಾ ಕುಡಿದು ಮತ್ತೊಂದು ವಿಶ್ವದಾಖಲೆ ಬರೆದ ವೃತ್ತಿಪರ ಭಕ್ಷಕ!

ಸರ್ವೇಗೆ ಹೋದ ಆಶಾ ಕಾರ್ಯಕರ್ತೆಗೆ ಜಾತಿ‌ ಕಾರಣಕ್ಕೆ ಕಿರುಕಳ

ದಾವಣಗೆರೆ: ಸರ್ವೇಗೆ ಹೋದ ಆಶಾ ಕಾರ್ಯಕರ್ತೆಗೆ ಜಾತಿ‌ ಕಾರಣಕ್ಕೆ ಕಿರುಕಳ ನೀಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದಲ್ಲಿ‌ ನಡೆದಿದೆ. ಈ ಸಂಬಂಧ ಆಶಾ ಕಾರ್ಯಕರ್ತೆ ತಹಶೀಲ್ದಾರ್​ರ  ‌ಮುಂದೆ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಕಾನನಕಟ್ಟೆ ಗ್ರಾಮದಲ್ಲಿ‌  ನಿಗೂಢ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆಯಿಂದ ಸಮೀಕ್ಷೆ ಆದೇಶ ಮಾಡಲಾಗಿದೆ. ಮನೆ ಮನೆ ತೆರಳಿ ಸಮೀಕ್ಷೆ ಮಾಡಲು ಹೋದ ಆಶಾ ಕಾರ್ಯಕರ್ತೆಗೆ ಜಾತಿ ಕಾರಣಕ್ಕೆ ಮನೆ ಹೊರಗೆ ನಿಲ್ಲಿಸುತ್ತಿದ್ದಾರೆ ಎಂದು ಆಶಾ ಕಾರ್ಯಕರ್ತೆ ಕಣ್ಣೀರು ಹಾಕಿದ್ದಾರೆ. ತಹಶೀಲ್ದಾರ್ ಸಂತೋಷ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಆಶಾ ಕಾರ್ಯಕರ್ತೆಗೆ ಸಮಾಧಾನ  ಮಾಡಲಾಗಿದ್ದು ಗ್ರಾಮದಲ್ಲಿ ಕಾರ್ಯ ನಿರ್ವಹಿಸಲು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada