ವನ್ಯಜೀವಿಗಳು ಪತ್ತೆ ಪ್ರಕರಣ: S.S.ಮಲ್ಲಿಕಾರ್ಜುನ್​​ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 05, 2023 | 6:31 PM

S.S.ಮಲ್ಲಿಕಾರ್ಜುನ್​ ರೈಸ್ ಮಿಲ್ಸ್​ನಲ್ಲಿ ವನ್ಯಜೀವಿಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಲಭಿಸಿದೆ.

ವನ್ಯಜೀವಿಗಳು ಪತ್ತೆ ಪ್ರಕರಣ: S.S.ಮಲ್ಲಿಕಾರ್ಜುನ್​​ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರು
S.S.ಮಲ್ಲಿಕಾರ್ಜುನ್
Follow us on

ದಾವಣಗೆರೆ: S.S.ಮಲ್ಲಿಕಾರ್ಜುನ್​ ರೈಸ್ ಮಿಲ್ಸ್​ನಲ್ಲಿ ವನ್ಯಜೀವಿಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು (Anticipatory Bail) ಕೋರಿ S.S.ಮಲ್ಲಿಕಾರ್ಜುನ್​ ಇತ್ತೀಚೆಗೆ ಕೋರ್ಟ್​​​ಗೆ ಮೊರೆ ಹೋಗಿದ್ದರು. ಸದ್ಯ ಈ ವಿಚಾರವಾಗಿ ಮಾಜಿ ಸಚಿವ ಎಸ್.​ಎಸ್ ಮಲ್ಲಿಕಾರ್ಜುನ ಸೇರಿ ಮೂರು ಜನರಕ್ಕೆ ನಿರೀಕ್ಷಣಾ ಜಾಮೀನು ಲಭಿಸಿದ್ದು, ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದ್ದು, ಅಲ್ಲಿಗೆ ಬಿಗ್​ ರಿಲೀಪ್​ ಸಿಕ್ಕಂತಾಗಿದೆ. ಎಸ್​.ಎಸ್ ಮಲ್ಲಿಕಾರ್ಜುನ ಪರ ನ್ಯಾಯವಾದಿ ಪ್ರಕಾಶ ಪಾಟೀಲ್ ಹಾಗೂ ಸಂಪಣ್ಣ ಮತ್ತು ಕರಿಬಸಯ್ಯ ಪರ ನ್ಯಾಯವಾದಿ ರಾಮದಾಸ್ ವಾದ ಮಂಡನೆ ಮಾಡಿದ್ದರು. ವಾದಗಳನ್ನು ಪರಿಶೀಲಿಸಿದ ನ್ಯಾಯಾಲಯ ಜಾಮೀನು ಮುಂಜೂರು‌ ಮಾಡಿದೆ. 2022 ಡಿ. 21 ರಂದು ದಾವಣಗೆರೆ ನಗರದ ಆನೆಕೊಂಡದ ಬಳಿ ಇರುವ ಕಲ್ಲೇಶ್ವರ ರೈಸ್ ಮಿಲ್ ಮೇಲೆ ಅರಣ್ಯ ಇಲಾಖೆ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ವನ್ಯ ಮೃಗಗಳು ಪತ್ತೆ ಹಿನ್ನೆಲೆ ಅರಣ್ಯ ಇಲಾಖೆ ದೂರು ದಾಖಲಿಸಿತ್ತು.

ವನ್ಯಜೀವಿ ಪತ್ತೆ ಕೇಸ್​ನಲ್ಲಿ ಮಲ್ಲಿಕಾರ್ಜುನ ಅವರ ಹೆಸರಿಲ್ಲ

ವನ್ಯಜೀವಿ ಪತ್ತೆ ಕೇಸ್​ನಲ್ಲಿ ಮಲ್ಲಿಕಾರ್ಜುನ ಅವರ ಹೆಸರಿಲ್ಲ. ಆದ್ರೆ ಆರೋಪಿ ನಂಬರ್ ನಾಲ್ಕು ರೈಸ್ ಮಿಲ್ ಮಾಲೀಕ ಇದೆ. ಇದೇ ಕಾರಣಕ್ಕೆ ಮಲ್ಲಿಕಾರ್ಜುನ ವಕೀಲ ಪ್ರಕಾಶ ಪಾಟೀಲ್ ಮೂಲಕ‌ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೇ 21 ರಂದು ಬೆಂಗಳೂರಿನ ಸಿಸಿಬಿ ಪೊಲೀಸರು ಹಾಗೂ ದಾವಣಗೆರೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ಮಾಡಿದ್ದರು. ದಾವಣಗೆರೆ ನಗರದ ಆನೆಕೊಂಡ ರಸ್ತೆಯಲ್ಲಿ ಇರುವ ಕಲ್ಲೇಶ್ವರ ಮಿಲ್‌ ಹಿಂಭಾಗದ ಫಾರ್ಮ್‌ ಹೌಸ್‌ನಲ್ಲಿ ಕಾಡುಹಂದಿ, ನರಿ ಹಾಗೂ ಮುಂಗುಸಿಗಳು ಪತ್ತೆಯಾಗಿದ್ದವು. ಇದರಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿತ್ತು. ಮಿಲ್ಲಿನ ವ್ಯವಸ್ಥಾಪಕ ಸಂಪಣ್ಣ ಮುತಾಲಿಕ್, ಸಿಬ್ಬಂದಿ ಕರಿಬಸಯ್ಯ, ಪ್ರಾಣಿಗಳ ಉಸ್ತುವಾರಿ ಸೇಥಿಲ್ ಅಲಿಯಾಸ್ ವೇಣು ಹಾಗೂ ರೈಸ್ ಮಿಲ್ ಮಾಲೀಕರ ವಿರುದ್ಧ ದೂರು ದಾಖಲಾಗಿತ್ತು.

ಇದನ್ನೂ ಓದಿ: ದಾವಣಗೆರೆ ವನ್ಯಜೀವಿಗಳ ಪತ್ತೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋದ S.S.ಮಲ್ಲಿಕಾರ್ಜುನ್

ಈ ಹಿನ್ನೆಲೆ ಮಲ್ಲಿಕಾರ್ಜುನ ಮುಂಜಾಗ್ರತಾ ಕ್ರ‌ಮವಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಕೊಂಡಿದ್ದರು. ಆನಗೋಡಿಗೆ ಪ್ರಾಣಿಗಳ ಸ್ಥಳಾಂತರ ನ್ಯಾಯಾಲಯದ ನಿರ್ದೇಶನದಂತೆ ವನ್ಯಜೀವಿಗಳನ್ನು ಸಂರಕ್ಷಿಸಲು ದಾವಣಗೆರೆ ತಾಲೂಕಿನ ಆನಗೋಡು ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ. ‘ಕೃಷ್ಣಮೃಗ, ಜಿಂಕೆ ಸೇರಿ ಒಟ್ಟು 30 ವನ್ಯಜೀವಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಎರಡು ನರಿ, ಮೂರು ಮುಂಗುಸಿ ಹಾಗೂ 7 ಕಾಡು ಹಂದಿಗಳನ್ನು ಸ್ಥಳಾಂತರಿಸಲಾಗಿದೆ. 11 ಕೃಷ್ಣಮೃಗಗಳು ಹಾಗೂ ಏಳು ಜಿಂಕೆಗಳನ್ನು ಸ್ಥಳಾಂತರಿಸಲಾಗುವುದು’ ಎಂದು ದಾವಣಗೆರೆ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಚ್‌. ಜಗನ್ನಾಥ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:30 pm, Thu, 5 January 23