ದಾವಣಗೆರೆ ವನ್ಯಜೀವಿಗಳ ಪತ್ತೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋದ S.S.ಮಲ್ಲಿಕಾರ್ಜುನ್

S.S.ಮಲ್ಲಿಕಾರ್ಜುನ್ ವಕೀಲರ ಮೂಲಕ ದಾವಣಗೆರೆ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ಜನವರಿ 2ಕ್ಕೆ ವಿಚಾರಣೆ ಮುಂದೂಡಿದೆ.

ದಾವಣಗೆರೆ ವನ್ಯಜೀವಿಗಳ ಪತ್ತೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋದ S.S.ಮಲ್ಲಿಕಾರ್ಜುನ್
S.S.ಮಲ್ಲಿಕಾರ್ಜುನ್
Follow us
| Updated By: ಆಯೇಷಾ ಬಾನು

Updated on: Dec 31, 2022 | 10:07 AM

ದಾವಣಗೆರೆ: S.S.ಮಲ್ಲಿಕಾರ್ಜುನ್​ ರೈಸ್ ಮಿಲ್ಸ್​ನಲ್ಲಿ ವನ್ಯಜೀವಿಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಕೋರಿ S.S.ಮಲ್ಲಿಕಾರ್ಜುನ್ ಅರ್ಜಿ ಸಲ್ಲಿಸಿದ್ದಾರೆ. ವಕೀಲರ ಮೂಲಕ ದಾವಣಗೆರೆ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ಜನವರಿ 2ಕ್ಕೆ ವಿಚಾರಣೆ ಮುಂದೂಡಿದೆ. ವನ್ಯಜೀವಿ ಪತ್ತೆ ಕೇಸ್​ನಲ್ಲಿ ಮಲ್ಲಿಕಾರ್ಜುನ್ 4ನೇ ಆರೋಪಿಯಾಗಿದ್ದಾರೆ.

ವನ್ಯಜೀವಿ ಪತ್ತೆ ಕೇಸ್​ನಲ್ಲಿ ಮಲ್ಲಿಕಾರ್ಜುನ ಅವರ ಹೆಸರಿಲ್ಲ. ಆದ್ರೆ ಆರೋಪಿ ನಂಬರ್ ನಾಲ್ಕು ರೈಸ್ ಮಿಲ್ ಮಾಲೀಕ ಇದೆ. ಇದೇ ಕಾರಣಕ್ಕೆ ಮಲ್ಲಿಕಾರ್ಜುನ ವಕೀಲ ಪ್ರಕಾಶ ಪಾಟೀಲ್ ಮೂಲಕ‌ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ 21 ರಂದು ಬೆಂಗಳೂರಿನ ಸಿಸಿಬಿ ಪೊಲೀಸರು ಹಾಗೂ ದಾವಣಗೆರೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ಮಾಡಿದ್ದರು. ದಾವಣಗೆರೆ ನಗರದ ಆನೆಕೊಂಡ ರಸ್ತೆಯಲ್ಲಿ ಇರುವ ಕಲ್ಲೇಶ್ವರ ಮಿಲ್‌ ಹಿಂಭಾಗದ ಫಾರ್ಮ್‌ ಹೌಸ್‌ನಲ್ಲಿ ಕಾಡುಹಂದಿ, ನರಿ ಹಾಗೂ ಮುಂಗುಸಿಗಳು ಪತ್ತೆಯಾಗಿದ್ದವು. ಇದರಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿತ್ತು. ಮಿಲ್ಲಿನ ವ್ಯವಸ್ಥಾಪಕ ಸಂಪಣ್ಣ ಮುತಾಲಿಕ್, ಸಿಬ್ಬಂದಿ ಕರಿಬಸಯ್ಯ, ಪ್ರಾಣಿಗಳ ಉಸ್ತುವಾರಿ ಸೇಥಿಲ್ ಅಲಿಯಾಸ್ ವೇಣು ಹಾಗೂ ರೈಸ್ ಮಿಲ್ ಮಾಲೀಕರ ವಿರುದ್ಧ ದೂರು ದಾಖಲಾಗಿತ್ತು.

ಇದನ್ನೂ ಓದಿ: ದಾವಣಗೆರೆಗೆ ಆಗಮಿಸಿದ ದರ್ಶನ್​; ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರನ್ನ ಭೇಟಿ ಮಾಡಿ ಸಮಯ ಕಳೆದ್ರು ಡಿ ಬಾಸ್

ಈ ಹಿನ್ನೆಲೆ ಮಲ್ಲಿಕಾರ್ಜುನ ಮುಂಜಾಗ್ರತಾ ಕ್ರ‌ಮವಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಕೊಂಡಿದ್ದಾರೆ. ಆನಗೋಡಿಗೆ ಪ್ರಾಣಿಗಳ ಸ್ಥಳಾಂತರ ನ್ಯಾಯಾಲಯದ ನಿರ್ದೇಶನದಂತೆ ವನ್ಯಜೀವಿಗಳನ್ನು ಸಂರಕ್ಷಿಸಲು ದಾವಣಗೆರೆ ತಾಲೂಕಿನ ಆನಗೋಡು ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ. ‘ಕೃಷ್ಣಮೃಗ, ಜಿಂಕೆ ಸೇರಿ ಒಟ್ಟು 30 ವನ್ಯಜೀವಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಎರಡು ನರಿ, ಮೂರು ಮುಂಗುಸಿ ಹಾಗೂ 7 ಕಾಡು ಹಂದಿಗಳನ್ನು ಸ್ಥಳಾಂತರಿಸಲಾಗಿದೆ. 11 ಕೃಷ್ಣಮೃಗಗಳು ಹಾಗೂ ಏಳು ಜಿಂಕೆಗಳನ್ನು ಸ್ಥಳಾಂತರಿಸಲಾಗುವುದು’ ಎಂದು ದಾವಣಗೆರೆ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಚ್‌. ಜಗನ್ನಾಥ ತಿಳಿಸಿದರು.

‘ಡಾ.ಮಂಜುನಾಥ್ ಸಮಕ್ಷಮದಲ್ಲಿ ಆರೋಗ್ಯವನ್ನು ‍ಪರೀಕ್ಷಿಸಿ ಅವುಗಳನ್ನು, ಆರೋಗ್ಯವಾಗಿರುವುದನ್ನು ದೃಢೀಕರಿಸಿ ಬಿಡಲಾಗಿದೆ. ಕಾಡುಹಂದಿಗಳನ್ನು ಕಾಡಿನ ಕಡೆ ಪ್ರತ್ಯೇಕ ಗೇಜ್‌ಗಳನ್ನು ನಿರ್ಮಿಸಿ ಅಲ್ಲಿ ಇರಿಸಲಾಗಿದೆ’ ಎಂದು ತಿಳಿಸಿದರು. ‘ಕೃಷ್ಣಮೃಗ ಹಾಗೂ ಜಿಂಕೆಗಳು ಸೂಕ್ಷ್ಮ ಪ್ರಾಣಿಗಳಾಗಿರುವುದರಿಂದ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಬೇಕಾಗಿದೆ. ಹೀಗಾಗಿ ಅವುಗಳನ್ನು ಬೊಮಾ (ಬಿಒಎಂಎ) ಮಾದರಿ ಅನುಸರಿಸಿ ಸ್ಥಳಾಂತರಿಸಲಾಗುವುದು. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ’ ಎಂದು ಹೇಳಿದರು. ‘ಪ್ರತ್ಯೇಕ ಜಾಗದಲ್ಲಿ ಶೇಡ್ ನೆಟ್‌ ನಿರ್ಮಿಸಿ, ಅಲ್ಲಿ ಮಣ್ಣು ಹಾಕಿ ಅಲ್ಲಿ ಜಿಂಕೆಗಳನ್ನು ಬಿಡಲಾಗುವುದು. ಮೃಗಾಲಯದ ರೀತಿಯಲ್ಲಿ ಆಹಾರವನ್ನು ಇಟ್ಟು ಕಾಡಿನ ವಾತಾವರಣ ಸೃಷ್ಟಿಸಲಾಗುವುದು. ಅಲ್ಲಿ ಒಗ್ಗಿಕೊಂಡ ಬಳಿಕ ಮೃಗಾಯಲಯಕ್ಕೆ ಸ್ಥಳಾಂತರಿಸಲಾಗುವುದು’ ಎಂದು ಹೇಳಿದರು.

ಮಲ್ಲಿಕಾರ್ಜುನ ಬಂಧನಕ್ಕೆ ಬಿಜೆಪಿ ಪಟ್ಟು ಹಾಗೂ ಪ್ರತಿಭಟನೆ

ಮಾಜಿ ಸಚಿವ ಮಲ್ಲಿಕಾರ್ಜುನ ಅವರನ್ನ ಬಂಧಿಸಬೇಕು. ಆರೋಪಿ ನಂಬರ್ ಒಂದು ಅವರನ್ನೇ ಮಾಡಬೇಕು ಎಂದು ಬಿಜೆಪಿ ಪ್ರತಿಭಟನೆ ನಡೆಸಿದೆ. ಜೊತೆಗೆ ಅರಣ್ಯ ಇಲಾಖೆಗೆ ಮುತ್ತಿಗೆ ಸಹ ಹಾಕಿತ್ತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ