AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ 79 ವರ್ಷದ ವ್ಯಕ್ತಿಯ ಹನಿಟ್ರ್ಯಾಪ್: ಮನಗೆ ಬಂದವನನ್ನು ನಗ್ನಗೊಳಿಸಿ ಫೋಟೋ ಕ್ಲಿಕ್ಕಿಸಿದ್ದ ಮಹಿಳೆ ಅರೆಸ್ಟ್

ತಾತನಿಗೆ ಹಣ ಕೊಡುವುದಾಗಿ ಮನೆಗೆ ಕರೆದಿದ್ದ ಮಹಿಳೆ ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ಹಾಕಿ ತಾತನಿಗೆ ಹನಿಟ್ರ್ಯಾಪ್ ಬಲೆಯಲ್ಲಿ ಬೀಳಿಸಲು ಯತ್ನಿಸಿದ್ದಾಳೆ. ತಾತನನ್ನ ನಗ್ನ ಸ್ಥಿತಿ ಮಾಡಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ.

ದಾವಣಗೆರೆಯಲ್ಲಿ 79 ವರ್ಷದ ವ್ಯಕ್ತಿಯ ಹನಿಟ್ರ್ಯಾಪ್: ಮನಗೆ ಬಂದವನನ್ನು ನಗ್ನಗೊಳಿಸಿ ಫೋಟೋ ಕ್ಲಿಕ್ಕಿಸಿದ್ದ ಮಹಿಳೆ ಅರೆಸ್ಟ್
ಯಶೋಧ
TV9 Web
| Updated By: ಆಯೇಷಾ ಬಾನು|

Updated on:Nov 08, 2022 | 11:04 AM

Share

ದಾವಣಗೆರೆ: ನಿವೃತ್ತಿ ಜೀವನ, ಅಲ್ಲಿ ಇಲ್ಲಿ ಕುಳಿತು ಕಾಲ ಕಳೆಯುತ್ತಿದ್ದ 79 ವರ್ಷ ವಯಸ್ಸಿನ ತಾತನನ್ನು ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೈ ಸಾಲ ವಾಪಸ್ ಕೇಳಿದಕ್ಕೆ ಮಹಿಳೆ ತಾತನಿಗೆ ಹನಿಟ್ರ್ಯಾಪ್​ಗೆ ಕೆಡವಿದ ಘಟನೆ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರಾಮಾಗಿ ಜೀವನ ನಡೆಸುತ್ತಿದ್ದ ತಾತನಿಗೆ 32 ವರ್ಷದ ವಿವಾಹಿತೆಯ ಪರಿಚಯವಾಗಿತ್ತು. ಬನ್ನಿ ಟೀ ಕುಡಿಯಲು ಅಂತಾ ಮನೆಗೂ ಕರೆದು ಸಲುಗೆಯಿಂದ ಸ್ನೇಹವಾಗಿತ್ತು. ಸ್ನೇಹದ ನಂಬಿಕೆಯಲ್ಲೇ ಮಹಿಳೆ ಸಾಲ ಕೇಳಿದಾಗ ಅಜ್ಜ ದಾರಾಳವಾಗಿ ಸಾಲಾ ಕೊಟ್ಟಿದ್ದಾರೆ. ಕೊಟ್ಟ ಹಣ ಕೇಳಲು ಹೋದಾಗ ಹನಿಟ್ರ್ಯಾಪ್ ಮಾಡಿ 15 ಲಕ್ಷಕ್ಕೆ ಬೇಡಿಕೆ ಇಟ್ಟು ಮಹಿಳೆ ಈಗ ಪೊಲೀಸರ ಅತಿಥಿ ಆಗಿದ್ದಾಳೆ.

ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ ಚಿದಾನಂದಪ್ಪ ಎಂಬುವರು ಹನಿಟ್ರ್ಯಾಪ್ ಗೆ ಒಳಗಾಗಿ ನರಳಾಡಿದ 79ರ ವೃದ್ಧ. ಶಿವಕುಮಾರ ಸ್ವಾಮೀ ಬಡಾವಣೆ ಹೊಂದಿಕೊಂಡ ಸರಸ್ವತಿ ನಗರದ ನಿವಾಸಿ 32 ವರ್ಷದ ಯಶೋಧ ಎಂಬ ಮಹಿಳೆಯ ಜೊತೆಗೆ ಪರಿಚಯವಾಗಿದೆ. ಹೀಗೆ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಶುರುವಾಗಿದೆ. ಯಶೋಧಾ ಅವರು ಚಿದಾನಂದಪ್ಪನನ್ನ ಮನೆಗೆ ಆಹ್ವಾನಿಸುವುದು ಟೀ, ಕಾಫಿ ಜ್ಯೂಸ್ ಕುಡಿಸುವುದು ನಡೆದಿದೆ. ಇದೇ ವೇಳೆ ಯಶೋಧಾ ಚಿದಾನಂದಪ್ಪನ ಬಳಿ ಆಗ ಐದು ಈಗ ಹತ್ತು ಅಂತಾ ಬರೋಬರಿ 86 ಸಾವಿರ ರೂಪಾಯಿ ಸಾಲ ಪಡೆದಿದ್ದಾಳೆ. ನಿವೃತ್ತಿ ಜೀವನ, ಹಣಕ್ಕೆ ಬೇಡಿಕೆ ಜಾಸ್ತಿಯಾದ ಪರಿಣಾಮ ಹಣ ವಾಪಸ್ಸು ಕೊಡುವಂತೆ ಚಿದಾನಂದಪ್ಪ ಕೇಳಿದ್ದಾರೆ. ಆಗ ಈಗ ಅಂತಾ ಹಣ ವಾಪಸ್ಸು ಕೊಟ್ಟಿಲ್ಲ. ಒಂದು ದಿನ ವಾಕಿಂಗ್ ಮುಗಿಸಿ ಯಶೋಧಾ ಮನೆಯ ಮುಂದೆ ಹಾಯ್ದು ಚಿದಾನಂದಪ್ಪ ಹೋಗುವಾಗ ಯಶೋಧಾ ಚಿದಾನಂದಪ್ಪನ್ನ ಅಕ್ಕರೆಯಿಂದ ಕರೆದಿದ್ದಾಳೆ. ಜ್ಯೂಸ್ ಕೊಟ್ಟಿದ್ದಾಳೆ. ಕುಡಿದ ಕೆಲ ಹೊತ್ತಿನಲ್ಲಿಯೇ ಚಿದಾನಂದಪ್ಪನ ಪ್ರಜ್ಞೆ ತಪ್ಪಿದೆ‌. ಎಚ್ಚರಾದ ಮೇಲೆ ಚಿದಾನಂದಪ್ಪನವರ ಮೇಲೆ ಬಟ್ಟೆ ಇರಲಿಲ್ಲ. ಭಯಗೊಂಡು ಬಟ್ಟೆ ಹಾಕಿಕೊಂಡು ಮನೆಗೆ ಬಂದಿದ್ದಾರೆ.

ಇದನ್ನೂ ಓದಿ: ರಾಯಚೂರು ಥರ್ಮಲ್ ಸ್ಥಾವರದಲ್ಲಿ ಅಗ್ನಿದುರಂತ, ಯಾವುದೇ ಪ್ರಾಣಾಪಾಯವಿಲ್ಲ!

ಇದಾದ ಎರಡು ದಿನಕ್ಕೆ ಮಹಿಳೆ ಹಣಕ್ಕಾಗಿ ಮತ್ತೆ ಚಿದಾನಂದಪ್ಪನವರಿಗೆ ಫೋನ್ ಮಾಡಿದ್ದಾನೆ. ಆಗ ನೀ ನನ್ನ ಜೊತೆ ಮಲಗಿರುವೆ. ನನ್ನ ಬಳಿ ವಿಡಿಯೋ ಇದೆ. 15 ಲಕ್ಷ ಕೊಡು ಇಲ್ಲಾ ನಿನ್ನ ಹೆಂಡತಿ ಮಕ್ಕಳಿಗೆ ತೊರಿಸುವೆ ಎಂದಿದ್ದಾಳೆ. ಹೆದರಿ ಈ ವಿಚಾರವನ್ನು ಚಿದಾನಂದಪ್ಪ ತಮ್ಮ ಪರಿಚಯದವರಿಗೆ ಹೇಳಿದ್ದಾರೆ. ಅವರು ಏಳರಿಂದ ಎಂಟು ಲಕ್ಷಕ್ಕೆ ಮಾತಾಡಿ ಮುಗಿಸಲು ಮುಂದಾಗಿದ್ದಾರೆ. ಆದ್ರೆ ಮಹಿಳೆ ಮಾತ್ರ 15 ಲಕ್ಷ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇದೇ ವೇಳೆ ಚಿದಾನಂದಪ್ಪನ ವಾಟ್ಸಪ್ ಗೆ ಒಂದು ನಗ್ನ ಫೋಟೋ ಕಳಿಸಿ ಬೆದರಿಸಿದ್ದಾಳೆ. ಇದಕ್ಕೆ ಹೆದರಿದ ವೃದ್ಧ ಈ ವಿಚಾರವನ್ನು ತನ್ನ ಪುತ್ರನಿಗೆ ಹೇಳಿದ್ದಾರೆ. ಆಗ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಕೆಟಿಜೆನಗರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಯಶೋಧಾಳನ್ನ ವಶಕ್ಕೆ ಪಡೆದಿದ್ದಾರೆ. ಅಜ್ಜನಿಗೆ ಹನಿಟ್ರ್ಯಾಪ್ ಮಾಡಿ 15 ಲಕ್ಷ ವಸೂಲಿಗೆ ಮುಂದಾದ ಯಶೋಧ ಪೊಲೀಸರ ಅತಿಥಿ ಆಗಿದ್ದಾಳೆ.

Published On - 11:03 am, Tue, 8 November 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!