ಅಸಹಾಯಕತೆ ವ್ಯಕ್ತಪಡಿಸಿದ ಡಿಸಿಎಂ ಗೋವಿಂದ ಕಾರಜೋಳ: ಆ ಕಡೆ ಗ್ರಾಮಸ್ಥರ ಸ್ವಯಂಕೃತ ಅಪರಾಧ, ಈ ಕಡೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ

ಖಾನಾಪುರ ತಾಲೂಕಿನ ಗ್ರಾಮಗಳಲ್ಲಿ ಹೆಚ್ಚುತ್ತಿದೆ. ಗ್ರಾಮಸ್ಥರು ಎಚ್ಚೆತ್ತುಕೊಂಡಿಲ್ಲ, ಇನ್ನ ಆರೋಗ್ಯ ಇಲಾಖೆ ಕೂಡ ನಿರ್ಲಕ್ಷ್ಯವಹಿಸಿದೆ. ಖಾನಾಪುರ ತಾಲೂಕಿನ 9ಕ್ಕೂ ಹೆಚ್ಚು ಗ್ರಾಮಗಳು ಮೈಕ್ರೋ ಕಂಟೈನ್‌‌ಮೆಂಟ್ ಝೋನ್ ಗಳಾಗಿವೆ. ಥ್ರೋಟ್ ಸ್ವ್ಯಾಬ್ ವರದಿ ವಿಳಂಬದಿಂದಲೂ ಕೊರೊನಾ ಸೋಂಕು ಹೆಚ್ಚುತ್ತಿದೆ ಎಂಬುದು ಡಿಸಿಎಂ ಗೋವಿಂದ ಕಾರಜೋಳ ಅವರ ಅಳಲಾಗಿದೆ.

ಅಸಹಾಯಕತೆ ವ್ಯಕ್ತಪಡಿಸಿದ ಡಿಸಿಎಂ ಗೋವಿಂದ ಕಾರಜೋಳ: ಆ ಕಡೆ ಗ್ರಾಮಸ್ಥರ ಸ್ವಯಂಕೃತ ಅಪರಾಧ, ಈ ಕಡೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ
ಗೋವಿಂದ ಕಾರಜೋಳ
Follow us
ಸಾಧು ಶ್ರೀನಾಥ್​
|

Updated on: May 14, 2021 | 10:06 AM

ಬೆಳಗಾವಿ: ಬೆಳಗಾವಿ ಜಿಲ್ಲಾ ನಗರ ಮತ್ತು ತಾಲೂಕು ಗ್ರಾಮಗಳಲ್ಲಿ ಮಹಾಮಾರಿ ಕೊರೊನಾ ಕಾಟ ತೀವ್ರವಾಗುತ್ತಿರುವುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಗೋವಿಂದ ಕಾರಜೋಳ ಅವರ ಸೋದರನ ಪುತ್ರ ಸಹ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾನೆ. ನಗರ ಪ್ರದೇಶ ಆಯ್ತು ಈಗ ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ಹೆಚ್ಚುತ್ತಿದೆ. ಪರಿಸ್ಥಿತಿ ಹೀಗಿರುವಾಗ ಒಂದೆಡೆ ಗ್ರಾಮಸ್ಥರ ಸ್ವಯಂಕೃತ ಅಪರಾಧ, ಮತ್ತೊಂದೆಡೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಇದಕ್ಕೆ ಕಾರಣವಾಗುತ್ತಿದೆ ಎಂದು ಸಚಿವ ಗೋವಿಂದ ಕಾರಜೋಳ ಸೂಕ್ಷ್ಮವಾಗಿ ಹೇಳಿದ್ದಾರೆ.

ಮದುವೆ, ಅಂತ್ಯಕ್ರಿಯೆಯಲ್ಲಿ ಇಡೀ ಗ್ರಾಮಸ್ಥರು ಭಾಗವಹಿಸುತ್ತಿದ್ದಾರೆ ಎಂದು ಆತಂಕವ್ಯಕ್ತಪಡಿಸಿರುವ ಡಿಸಿಎಂ ಗೋವಿಂದ ಕಾರಜೋಳ ಗ್ರಾಮಗಳಲ್ಲಿ ಸೋಂಕು ಹೆಚ್ಚಳಕ್ಕೆ ವಲಸೆ ಕಾರ್ಮಿಕರು ಊರೊಳಗೆಯೇ ಸೇರಿಸಿಕೊಂಡಿರೋದು ಮತ್ತು ಮದುವೆ, ಮುಂಜಿ ಜಾತ್ರೆಯೂ ಕಾರಣವಾಗಿದೆ ಎಂದಿದ್ದಾರೆ. ಜಾತ್ರೆ ನಡೆಯುವ ಬಗ್ಗೆ ವಿಡಿಯೋಗಳನ್ನು ಕಳಿಸ್ತಾರೆ. ಮೃತರ ಅಂತ್ಯಕ್ರಿಯೆ ವೇಳೆ ಗ್ರಾಮಸ್ಥರು ನಿಯಮ ಪಾಲಿಸುತ್ತಿಲ್ಲ ಎಂದೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳಗೊಂಡಿದ್ದಾರೆ.

ಗ್ರಾಮಗಳಲ್ಲಿ ವಲಸಿಗರು, ಥ್ರೋಟ್ ಸ್ವ್ಯಾಬ್ ವರದಿ ವಿಳಂಬವೂ ಕಾರಣ:

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗ್ರಾಮಗಳಲ್ಲಿ ಹೆಚ್ಚುತ್ತಿದೆ. ಗ್ರಾಮಸ್ಥರು ಎಚ್ಚೆತ್ತುಕೊಂಡಿಲ್ಲ, ಇನ್ನ ಆರೋಗ್ಯ ಇಲಾಖೆ ಕೂಡ ನಿರ್ಲಕ್ಷ್ಯವಹಿಸಿದೆ. ಖಾನಾಪುರ ತಾಲೂಕಿನ 9ಕ್ಕೂ ಹೆಚ್ಚು ಗ್ರಾಮಗಳು ಮೈಕ್ರೋ ಕಂಟೈನ್‌‌ಮೆಂಟ್ ಝೋನ್ ಗಳಾಗಿವೆ. ಅಂಬೇವಾಡಿ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನರಿಗೆ ಕೊರೊನಾ ಕಾಣಿಸಿಕೊಂಡಿದೆ. ವಲಸಿಗರಿಂದಲೇ ಗ್ರಾಮಗಳಲ್ಲಿ ಡೆಡ್ಲಿ ಕೊರೊನಾ ಹೆಚ್ಚುತ್ತಿದೆ. ಖಾನಾಪುರ ತಾಲೂಕಿನ ಅಂಬೇವಾಡಿ, ನಂದಗಡ, ರುಮೇವಾಡಿ, ಹಲಕರ್ಣಿ, ಲೋಂಡಾ, ಅಶೋಕನಗರ, ಶಿರೋಲಿ, ಜಾಮಗಾಂವ ಗ್ರಾಮಗಳು ಮೈಕ್ರೋ ಕಂಟೈನ್‌ಮೆಂಟ್ ಝೋನ್ ಗಳಾಗಿ ಮಾರ್ಪಟ್ಟಿವೆ. ಆರೋಗ್ಯ ಇಲಾಖೆ ಸಕಾಲಕ್ಕೆ ಎಚ್ಚೆತ್ತುಕೊಂಡಿಲ್ಲ. ಥ್ರೋಟ್ ಸ್ವ್ಯಾಬ್ ವರದಿ ವಿಳಂಬದಿಂದಲೂ ಕೊರೊನಾ ಸೋಂಕು ಹೆಚ್ಚುತ್ತಿದೆ ಎಂಬುದು ಡಿಸಿಎಂ ಗೋವಿಂದ ಕಾರಜೋಳ ಅವರ ಅಳಲಾಗಿದೆ.

(DCM govind karjol lament on villagers and health department failure in containing coronavirus in belagavi district)

ನೂರು ವರ್ಷಗಳ ಸಮಸ್ಯೆಗಳನ್ನು ಮೋದಿ ಬಗೆಹರಿಸಿದ್ದಾರೆ, ಬೇರೆ ಯಾವ ಸಮಸ್ಯೆಗಳು ಉಳಿದಿವೆ: ಗೋವಿಂದ ಕಾರಜೋಳ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ