ಮನೆ ಮುಂದೆ ಬೆಂಕಿ ಕೊಂಡ ಹಾಕಿ ಮಾರಮ್ಮನಿಗೆ ಪೂಜೆ: ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ವಿಶೇಷ ಪೂಜೆ
ಮಾಜಿ ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಈ ವಿಶಿಷ್ಟ ಆಚರಣೆ ನಡೆದಿದೆ. ಮನೆ ಮುಂದೆಯ ಕೊಂಡಕ್ಕೆ ಬೇವಿನ ಸೊಪ್ಪು ಹಾಕಿ ಮಾರಿ ಪೂಜೆ ನೆರವೇರುತ್ತಿದೆ. ಬೇವಿನ ಸೊಪ್ಪಿನ ಕಹಿಗೆ ವೈರಸ್ ತೊಲಗುತ್ತೆ ಅನ್ನೊ ನಂಬಿಕೆ ಗ್ರಾಮಸ್ಥರದ್ದಾಗಿದೆ.

ಮೈಸೂರು: ಮಾಜಿ ಮುರ್ಖಯಮಂತ್ರಿ ಸಿದ್ದರಾಮಯ್ಯ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ಕೊರೊನಾ ಮಾರಿಯನ್ನು ಓಡಿಸಲು ವಿಶೇಷ ಪೂಜೆ ನಡೆಯುತ್ತಿದೆ. ಮುಂದಿನ ಹುಣ್ಣಿಮೆಯವರೆಗೂ ಒಂದು ತಿಂಗಳ ಸುದೀರ್ಘ ಕಾಲ ಈ ವಿಶೇಷ ಕೊರೊನಾ ಪೂಜೆ ನಡೆಯಲಿದೆ. ಮನೆ ಮುಂದೆ ಬೆಂಕಿ ಕೊಂಡ ಹಾಕಿ ಮಾರಮ್ಮನಿಗೆ ಪೂಜೆ ನೆರವೇರಿಸಲಾಗುತ್ತಿದೆ. ಮಕ್ಕಳು ಮಹಿಳೆಯರು ವೃದ್ದರು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸಿದ್ದರಾಮನಹುಂಡಿಯಲ್ಲಿ ಜೀರ್ಣೋದ್ಧಾರ ಮಾಡಿದ ಶ್ರೀರಾಮ ಮಂದಿರವನ್ನು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರು ಸರಳ ಪೂಜೆ ಮೂಲಕ ಕಳೆದ ತಿಂಗಳು ಉದ್ಘಾಟಿಸಿದ್ದರು ಎಂಬುದು ಗಮನಾರ್ಹ.
ಬೇವಿನ ಸೊಪ್ಪಿನ ಕಹಿಗೆ ವೈರಸ್ ತೊಲಗುತ್ತೆ ಅನ್ನೊ ನಂಬಿಕೆ

ಬೇವಿನ ಸೊಪ್ಪಿನ ಕಹಿಗೆ ವೈರಸ್ ತೊಲಗುತ್ತೆ ಅನ್ನೊ ನಂಬಿಕೆ ಗ್ರಾಮಸ್ಥರದ್ದಾಗಿದೆ
ಮಾಜಿ ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಈ ವಿಶಿಷ್ಟ ಆಚರಣೆ ನಡೆದಿದೆ. ಮನೆ ಮುಂದೆಯ ಕೊಂಡಕ್ಕೆ ಬೇವಿನ ಸೊಪ್ಪು ಹಾಕಿ ಮಾರಿ ಪೂಜೆ ನೆರವೇರುತ್ತಿದೆ. ಬೇವಿನ ಸೊಪ್ಪಿನ ಕಹಿಗೆ ವೈರಸ್ ತೊಲಗುತ್ತೆ ಅನ್ನೊ ನಂಬಿಕೆ ಗ್ರಾಮಸ್ಥರದ್ದಾಗಿದೆ.

ಕೊರೊನಾ ತೊಲಗಿ, ಗ್ರಾಮಕ್ಕೆ ಒಳಿತಾಗಲಿ ಅಂತಾ ಸೂರ್ಯ ಮುಳುಗಿದ ತಕ್ಷಣ ಮನೆ ಮುಂದೆ ಅಗ್ನಿ ಕೊಂಡಕ್ಕೆ ಪೂಜೆ ನಡೆಯುತ್ತದೆ.
ಸೂರ್ಯ ಮುಳುಗಿದ ತಕ್ಷಣ ಮನೆ ಮುಂದೆ ಅಗ್ನಿ ಕೊಂಡಕ್ಕೆ ಪೂಜೆ ನಡೆಯುತ್ತದೆ. ಕೊರೊನಾ ತೊಲಗಿ, ಗ್ರಾಮಕ್ಕೆ ಒಳಿತಾಗಲಿ ಅಂತಾ ಪೂಜಾ ಕೈಂಕರ್ಯದ ಹಿಂದಿನ ಉದ್ದೇಶವಾಗಿದೆ. ಮನೆ ಮುಂದೆ ಪೂಜೆ ಮುಗಿದ ಬಳಿಕ, ಗ್ರಾಮದ ಮಾರಮ್ಮನಿಗೆ ಹರಕೆ ಹೊತ್ತಿಕೊಳ್ಳುತ್ತಿದ್ದಾರೆ.
(special puja to eradicate coronavirus by villagers in former cm siddaramaiah native village siddaramanahundi)




