ಐಎಎಸ್ ಮನೀಶ್ ಮೌದ್ಗಿಲ್ ಉಸ್ತುವಾರಿಯಲ್ಲಿ ಕೊರೊನಾ ಸೋಂಕಿತರಿಗಾಗಿ ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆ ಸ್ಥಿತಿಗತಿ ಹೀಗಿದೆ
ಖಡಕ್ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ಅವರು ಕಳೆದ ವರ್ಷ ಕೊರೊನಾ ಮೊದಲ ಅಲೆ ಬೀಸಿದಾಗ ಬಿಬಿಎಂಪಿ ಕಚೇರಿಯಲ್ಲಿ ಕುಳಿತು ಹಗಲು ರಾತ್ರಿ ಅನ್ನದೆ ಕೊರೊನಾ ಸೋಂಕನ್ನು ಕಟ್ಟಿಹಾಕಲು ಶ್ರಮಿಸಿದ್ದರು. ಈ ಬಾರಿಯೂ ಅವರನ್ನು ಸರ್ಕಾರ ವಿಶೇಷ ಅಧಿಕಾರಿಯನ್ನಾಗಿ (nodal officer- oxygen allocation) ನೇಮಿಸಿ, ಕೊರೊನಾನ್ನ ಕಟ್ಟಿಹಾಕಿ, ಜೊತೆಗೆ ಸೋಂಕಿತರಿಗೆ ಆಕ್ಸಿಜನ್ ಮತ್ತಿತರ ವೈದ್ಯಕೀಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದೆ. ಹಾಗಾಗಿ ಅವರೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಮ್ಲಜನಕ ಸರಬರಾಜು ಸ್ಥಿತಿಗತಿಗಳ ಬಗ್ಗೆ ನಿಗಾ […]
ಖಡಕ್ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ಅವರು ಕಳೆದ ವರ್ಷ ಕೊರೊನಾ ಮೊದಲ ಅಲೆ ಬೀಸಿದಾಗ ಬಿಬಿಎಂಪಿ ಕಚೇರಿಯಲ್ಲಿ ಕುಳಿತು ಹಗಲು ರಾತ್ರಿ ಅನ್ನದೆ ಕೊರೊನಾ ಸೋಂಕನ್ನು ಕಟ್ಟಿಹಾಕಲು ಶ್ರಮಿಸಿದ್ದರು. ಈ ಬಾರಿಯೂ ಅವರನ್ನು ಸರ್ಕಾರ ವಿಶೇಷ ಅಧಿಕಾರಿಯನ್ನಾಗಿ (nodal officer- oxygen allocation) ನೇಮಿಸಿ, ಕೊರೊನಾನ್ನ ಕಟ್ಟಿಹಾಕಿ, ಜೊತೆಗೆ ಸೋಂಕಿತರಿಗೆ ಆಕ್ಸಿಜನ್ ಮತ್ತಿತರ ವೈದ್ಯಕೀಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದೆ. ಹಾಗಾಗಿ ಅವರೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಮ್ಲಜನಕ ಸರಬರಾಜು ಸ್ಥಿತಿಗತಿಗಳ ಬಗ್ಗೆ ನಿಗಾ ವಹಿಸಿದ್ದಾರೆ. ನೇರವಾಗಿ ಆಯಾ ಜಿಲ್ಲಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತದೇ ರೀತಿ ಹಗಲು ರಾತ್ರಿ ಅನ್ನದೆ ರಾಜ್ಯದಲ್ಲಿ ಸೋಂಕಿತರ ಉಸಿರಿಗೆ ಆಸರೆಯಾಗಿದ್ದಾರೆ.
ಆಕ್ಸಿಜನ್ ಹಂಚಿಕೆಗಾಗಿ ನೋಡಲ್ ಅಧಿಕಾರಿಯಾಗಿ ಮೇ 6ರಂದು ನಿಯುಕ್ತರಾದ ಬಳಿಕ ಐಎಎಸ್ ಮನೀಶ್ ಮೌದ್ಗಿಲ್ ಅವರು ಇಡೀ ವ್ಯವಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ನಿರಂತರವಾಗಿ ಆಯಾ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕದಲ್ಲಿದ್ದಾರೆ. ಈ ಕೆಳಗಿನ ಖಡಕ್ ಕ್ರಮಗಳ ಮೂಲಕ ರಾಜ್ಯದಲ್ಲಿ ಅಗತ್ಯವಿರುವ ಆಕ್ಸಿಜನ್ ಪ್ರಮಾಣದ ಮೇಲೆ ನಿಗಾವಹಿಸಿ, ಸರಬರಾಜು ಮಾಡುವುದು ಸಾಧ್ಯವಾದೀತು ಎಂಬುದು ಮನೀಶ್ ಮೌದ್ಗಿಲ್ ಅವರ ಅನುಭವದ ಲೆಕ್ಕಾಚಾರವಾಗಿದೆ.
1) ಪ್ರತಿ ಜಿಲ್ಲೆ ಮತ್ತು ಬಿಬಿಎಂಪಿ ವಲಯಕ್ಕೆ ಪೂರ್ಣಾವಧಿಯ ಆಕ್ಸಿಜನ್ ನೋಡಲ್ ಅಧಿಕಾರಿ ನೇಮಕ. 2) ಎಲ್ಲಾ 57 ಆಮ್ಲಜನಕ ತಯಾರಿಕಾ ಘಟಕಗಳು ಮತ್ತು ಮರು ಪೂರಣ ಘಟಕಗಳಲ್ಲಿ ಪೂರ್ಣಾವಧಿಯ ಕ್ಯಾಂಪ್ ಅಧಿಕಾರಿ ನೇಮಕಗೊಡಿದ್ದಾರೆ. 3) ಆಮ್ಲಜನಕ ಮರು ಪೂರಣದ ಪ್ರತಿ ಘಟಕದಲ್ಲಿಯೂ ಪ್ರತಿ ದಿನ ಆಕ್ಸಿಜನ್ ಒ.ಬಿ, ಸ್ವೀಕಾರಗಳು, ಹೊರಹೋದವು ಮತ್ತು ಸಿಬಿಗಳ ಲೆಕ್ಕ ದಾಖಲು 4) ಆಯಾ ಜಿಲ್ಲೆ ಮತ್ತು ಬಿಬಿಎಂಪಿ ವಲಯದಲ್ಲಿರುವ ಪ್ರತಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಆಡಿಟ್ ಅನ್ನು ಆಕ್ಸಿಜನ್ ನೋಡಲ್ ಅಧಿಕಾರಿ ನಿಯಮಿತವಾಗಿ ಲೆಕ್ಕಾಚಾರ ಹಾಕುತ್ತಿರಬೇಕು. 5) ಹೀಗೆ ಕಲೆ ಹಾಕಿದ ಸಂಖ್ಯಾ ಮಾಹಿತಿಯನ್ನು ವಾರಕ್ಕೊಮ್ಮೆ ಇಡೀ ರಾಜ್ಯದ ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಲಭ್ಯತೆ ಲೆಕ್ಕವನ್ನು ಕ್ರೋಡೀಕರಿಸಬೇಕು. 6) ಜಿಲ್ಲಾವಾರು ಆಕ್ಸಿಜನ್ ಹಂಚಿಕೆಯನ್ನು ನೀಡಲಾಗುವುದು. ಅದನ್ನು ಎಲ್ಲಾ ಮರು ಪೂರಣ ಘಟಕಗಳೊಂದಿಗೆ ಹಂಚಿಕೊಳ್ಳಲಾಗುವುದು. 7) ಆಯಾ ಜಿಲ್ಲೆ ಮತ್ತು ಬಿಬಿಎಂಪಿ ವಲಯದಲ್ಲಿ ಪ್ರತಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬಳಕೆ ಪ್ರಮಾಣ ಎಷ್ಟಾಗಿದೆ ಎಂಬುದನ್ನು ಪ್ರತಿದಿನ ಲೆಕ್ಕಾಚಾರ ಹಾಕಿಡುವುದು. ಮತ್ತು 8) ಯಾವುದೇ ಅನಿರೀಕ್ಷಿತ ಆಮ್ಲಜನಕ ತುರ್ತು ಪರಿಸ್ಥಿತಿಯನ್ನು ಎದುರಿಸಲು ಹೆಚ್ಚುವರಿ ಆಕ್ಸಿಜನ್ ಸಂಗ್ರಹವನ್ನು ಕ್ರೋಡೀಕರಿಸುವುದು.
(oxygen consumption in karnataka on daily basis at every district and BBMP zones as calculated by senior ias officer Munish Moudgil)