ಬೆಂಗಳೂರು, ಅಕ್ಟೋಬರ್ 05: ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಗರ್ ಹುಕುಂ ಯೋಜನೆಯಡಿಯಲ್ಲಿ ತಿರಸೃತಗೊಂಡಿದ್ದ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಇತ್ತೀಚೆಗೆ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದ್ದರು. ಅದರಂತೆಯೆ ಇದೀಗ ಸರ್ಕಾರಿ ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ನಿರ್ಧಾರ ಮಾಡಲಾಗಿದೆ. ಆ ಮೂಲಕ ರೈತರಿಗೆ ಸರ್ಕಾರ ಗುಡ್ನ್ಯೂಸ್ ನೀಡಿದೆ.
ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಸರ್ಕಾರಿ ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ನಿರ್ಧಾರ ಮಾಡಲಾಗಿದೆ. ಸಾಗುವಳಿ ಮಾಡುತ್ತಿರುವರುವ 14 ಲಕ್ಷ ರೈತರು ಅರ್ಜಿ ಹಾಕಿದ್ದಾರೆ. ಸರ್ಕಾರಿ ಭೂಮಿ ಸಕ್ರಮಗೊಳಿಸುವಂತೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ್ಗಳ ಜೊತೆ ಸಭೆ ನಡೆಸಿದ್ದೇನೆ. ನಾಲ್ಕೈದು ತಿಂಗಳಲ್ಲಿ ಎಲ್ಲಾ ರೈತರ ಅರ್ಜಿ ಇತ್ಯರ್ಥ ಮಾಡಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸಭೆ: ಭೂ ಕಂದಾಯ(ತಿದ್ದುಪಡಿ) ವಿಧೇಯಕ ಅಂಗೀಕಾರ
ಈ ಬಾರಿ ಬಗರ್ ಹುಕಂ ಕಮಿಟಿಯಲ್ಲಿ ಸಕ್ರಮದ ಜೊತೆ ಸಾಗುವಳಿ ಚೀಟಿ ಮತ್ತು ಭೂಮಿ ಸರ್ವೆ ಮಾಡಿ ರೈತರ ಹೆಸರಿಗೆ ನೋಂದಣಿ ಕೂಡ ಮಾಡಿಕೊಡುತ್ತೇವೆ. ರೈತರ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಹಿಂದೆ ಭೂಮಿ ಮಂಜೂರಾಗಿ ಪೋಡಿ ದುರಸ್ತಿ ಆಗದ 10 ಲಕ್ಷ ಪ್ರಕರಣಗಳಿವೆ. ಇವರೆಲ್ಲರ ದುರಸ್ತಿ ಪ್ರಕ್ರಿಕೆಯೆಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಜಾತಿ ಜನಗಣತಿ ವರದಿ ಜಾರಿ ವಿಚಾರವಾಗಿ ಮಾತನಾಡಿ ಅವರು, ಪರ ವಿರೋಧ ಚರ್ಚೆ ಆಗಲಿ. ಯಾರಿಗೆ ಆಗಲಿ ಅಭಿಪ್ರಾಯ ಹೇಳುವ ಅವಕಾಶ ಇದೆ. ಸಚಿವ ಸಂಪುಟ ಸಭೆಯಲ್ಲಿ ಅಭಿಪ್ರಾಯ ಹೇಳುತ್ತೇವೆ. ನಾನು ನನ್ನ ಅಭಿಪ್ರಾಯ ಸಭೆಯಲ್ಲಿ ಹೇಳುತ್ತೇನೆ.
ಇದನ್ನೂ ಓದಿ: ರಾಷ್ಟ್ರೀಯ ರೈತರ ದಿನದಂದುಕರ್ನಾಟಕದ ಅನ್ನದಾತರಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ
ನನ್ನ ಅಭಿಪ್ರಾಯ, ಸಂಪುಟ ತೀರ್ಮಾನ ಬಗ್ಗೆ ನಂತರ ಹಂಚಿಕೊಳುತ್ತೇನೆ. ನಾನೇನೇ ಹೇಳಿದರೂ ಸರ್ಕಾರದ ಹೇಳಿಕೆ ಆಗುತ್ತೆ. ಬೇರೆ ಸಚಿವರು ಏನೇ ಅಭಿಪ್ರಾಯ ಹೇಳಿದರೂ ಸಮಚಿತ್ತದಿಂದ ಸ್ವೀಕರಿಸುತ್ತೇವೆ. ಕೊನೆಗೆ ಸಂಪುಟದಲ್ಲಿ ಏನು ತೀರ್ಮಾನ ಆಗುತ್ತದೆ ನೋಡಬೇಕು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.