ಬೆಂಗಳೂರು ನ.03: ಹಾವೇರಿಯ (Haveri) ಆಲದಟ್ಟಿ ಪಾಟಾಕಿ (Firecrackers) ದುರಂತದಲ್ಲಿ ನಾಲ್ವರು ಮತ್ತು ಅತ್ತಿಬೆಲೆಯಲ್ಲಿನ ಪಟಾಕಿ ದುರುಂತದಲ್ಲಿ 17 ಜನ ಸಾವನ್ನಪ್ಪಿದ ಬಳಿಕ, ರಾಜ್ಯ ಸರ್ಕಾರ (Karnataka Government) ಈ ಬಾರಿಯ ದೀಪಾವಳಿಗೆ (Deepawali) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಧಿಕೃತ ಪರ್ಮನೆಂಟ್ ಲೈಸೆನ್ಸ್ ಹೊಂದಿದವರು ಮಾತ್ರ ಪಟಾಕಿ ಮಾರುವುದಕ್ಕೆ ಅವಕಾಶ ನೀಡಿದೆ. ತಾತ್ಕಾಲಿಕ ಅನುಮತಿ ಪಡೆದು ಮೈದಾನಗಳಲ್ಲಿ ಪಟಾಕಿ ಅಂಗಡಿ ಹಾಕುತ್ತಿದ್ದವರಿಗೆ ಸರ್ಕಾರ ಅನುಮತಿ ನೀಡಿಲ್ಲ. ಕೇವಲ ಖಾಯಂ ಲೈಸೆನ್ಸ್ ಪಡೆದವರಿಗೆ ಮಾತ್ರ ಪಟಾಕಿ ಮಾರಲು ಅವಕಾಶ ನೀಡಿದೆ. ಮೈದಾನಗಳಲ್ಲಿ ಪಟಾಕಿ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ.
ಗ್ರೀನ್ ಪಟಾಕಿಗಳನ್ನು ಮಾರುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಪಟಾಕಿ ಮಳಿಗೆಗಳನ್ನ ಪರಿಶೀಲಿಸಿ, ಗ್ರೀನ್ ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಇದ್ದರೇ ಮುಟ್ಟುಗೋಲು ಹಾಕಿಕೊಂಡು ಕ್ರಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಗ್ರೀನ್ ಪಟಾಕಿಗಳ ಪ್ಯಾಕೆಟ್ಗಳ ಮೇಲೆ ಚಿಹ್ನೆ ಇದ್ದು, ಕ್ಯುಆರ್ ಕೋಡ್ ಸಹ ಇರುತ್ತೆ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ BBMP; ಎಲ್ಲೆಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ?
ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ. ಮಕ್ಕಳು ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗದಂತೆ ಪಟಾಕಿ ಹೊಡೆಯಬೇಕು. ಒಂದು ವೇಳೆ ನಿಯಮ ಮೀರಿ ಅಕ್ರಮವಾಗಿ ಪಟಾಕಿ ಮಾರಿದರೇ ಅಥವಾ ಹೊಡೆದರೇ ಪ್ರಕರಣ ದಾಖಲಿಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಪೊಲೀಸ್ ಇಲಾಖೆ, ತಹಶೀಲ್ದಾರ್, ಪರಿಸರ ಇಲಾಖೆ, ಅಗ್ನಿಶಾಮಕ ಇಲಾಖೆಯ ಕಾರ್ಯಪಡೆ ರಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:11 am, Fri, 3 November 23