ಐಸಿಸ್ ಬಾವುಟ, ಕರಪತ್ರ ಮೊಬೈಲ್​ನಲ್ಲಿದ್ದರೆ ಉಗ್ರ ಎನ್ನಲಾಗದು: ಕರ್ನಾಟಕದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ ಮಹತ್ವದ ತೀರ್ಪು

| Updated By: ಗಂಗಾಧರ​ ಬ. ಸಾಬೋಜಿ

Updated on: May 16, 2024 | 12:56 PM

ಆಗಸ್ಟ್ 21, 2021ರಂದು ಐಸಿಸ್ ನಂಟಿನ ಆರೋಪದಡಿ ಅಮ್ಮರ್ ಅಬ್ದುಲ್ ರೆಹಮಾನ್ ಬಂಧನವಾಗಿತ್ತು. ಆದರೆ ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್​ನಲ್ಲಿ ಜಾಮೀನಿಗೆ ರೆಹಮಾನ್​ ಅರ್ಜಿ ಸಲ್ಲಿಸಿದ್ದ. ಆದರೆ ಜಾಮೀನು‌ ನಿರಾಕರಿಸಿದ ಹಿನ್ನೆಲೆ ದೆಹಲಿ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸದ್ಯ ಸುದೀರ್ಘ ವಿಚಾರಣೆ ಬಳಿಕ ದೆಹಲಿ ಹೈ ಕೋರ್ಟ್ ಜಾಮೀನು ನೀಡಲಾಗಿದೆ. 

ಐಸಿಸ್ ಬಾವುಟ, ಕರಪತ್ರ ಮೊಬೈಲ್​ನಲ್ಲಿದ್ದರೆ ಉಗ್ರ ಎನ್ನಲಾಗದು: ಕರ್ನಾಟಕದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ ಮಹತ್ವದ ತೀರ್ಪು
ಐಸಿಸ್ ಬಾವುಟ, ಕರಪತ್ರ ಮೊಬೈಲ್​ನಲ್ಲಿದ್ದರೆ ಉಗ್ರ ಎನ್ನಲಾಗದು: ಕರ್ನಾಟಕದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ ಮಹತ್ವದ ತೀರ್ಪು
Follow us on

ಮಂಗಳೂರು, ಮೇ 16: ಉಳ್ಳಾಲದ ಮಾಜಿ ಶಾಸಕ ದಿ.ಇದಿನಬ್ಬ (idinabba) ಮೊಮ್ಮಗನ ಐಸಿಸ್ ನಂಟು ಕೇಸ್​​ನಲ್ಲಿ ಅಮ್ಮರ್ ಅಬ್ದುಲ್ ರೆಹಮಾನ್​ಗೆ ದೆಹಲಿ ಹೈ ಕೋರ್ಟ್​ನಿಂದ ಜಾಮೀನು ನೀಡಲಾಗಿದೆ. ‘ಐಸಿಸ್ ಬಾವುಟ, ಕರಪತ್ರ ಮೊಬೈಲ್​​ನಲ್ಲಿದ್ದರೆ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ’ ಎಂದು ಹೇಳುವ ಮೂಲಕ ಕರ್ನಾಟಕದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿದೆ. ಆಗಸ್ಟ್ 21, 2021ರಂದು ಐಸಿಸ್ ನಂಟಿನ ಆರೋಪದಡಿ (Terrorist Links) ಅಮ್ಮರ್ ಅಬ್ದುಲ್ ರೆಹಮಾನ್ ಬಂಧನವಾಗಿತ್ತು. ಯುಎಪಿಎ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ದಳ ಬಂಧಿಸಿದ್ದರು. ಆದರೆ ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್​ನಲ್ಲಿ ಜಾಮೀನಿಗೆ ರೆಹಮಾನ್​ ಅರ್ಜಿ ಸಲ್ಲಿಸಿದ್ದ. ಆದರೆ ಜಾಮೀನು‌ ನಿರಾಕರಿಸಿದ ಹಿನ್ನೆಲೆ ದೆಹಲಿ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸದ್ಯ ಸುದೀರ್ಘ ವಿಚಾರಣೆ ಬಳಿಕ ಪೂರಕ ಸಾಕ್ಷ್ಯ ಸಿಗದ ಹಿನ್ನೆಲೆ ದೆಹಲಿ ಹೈ ಕೋರ್ಟ್ ಜಾಮೀನು ನೀಡಿದೆ.

ರೆಹಮಾನ್ ಜಾಮೀನು ಆದೇಶದಲ್ಲಿ ಹಲವು ಅಂಶಗಳು ಉಲ್ಲೇಖ

ಇನ್ನು ಅಮ್ಮರ್ ಅಬ್ದುಲ್ ರೆಹಮಾನ್ ಜಾಮೀನು ಆದೇಶದಲ್ಲಿ ದೆಹಲಿ ಹೈಕೋರ್ಟ್ ಹಲವು ಅಂಶಗಳನ್ನು ಉಲ್ಲೇಖಿಸಿದೆ. ‘ಉಗ್ರ ಸಂಘಟನೆ ಜೊತೆಗಿನ ಆಕರ್ಷಣೆಯನ್ನ ಉಗ್ರ ನಂಟು ಎನ್ನಲು ಆಗಲ್ಲ’. ‘ಐಸಿಸ್ ಪರ ವಿಡಿಯೋ ಡೌನ್ ಲೋಡ್, ಭಾಷಣ ಆಲಿಸೋದು ಯುಎಪಿಎ ಕಾಯ್ದೆಯಡಿ ತರಲು ಆಗಲ್ಲ’. ‘ಈ ಸಾಕ್ಷ್ಯ ಬಳಸಿ ಯುಎಪಿಎ ಸೆಕ್ಷನ್ 38 ಮತ್ತು 39 ರಡಿ ತರಲು ಬರಲ್ಲ’. ‘ಆರೋಪಿ ಮೊಬೈಲ್​​ನಲ್ಲಿ ಲಾಡೆನ್, ಐಸಿಸ್ ಬಾವುಟಗಳು, ಐಸಿಸ್ ಪರ ಭಾಷಣಗಳ ತುಣುಕು ಸಿಕ್ಕಿದೆ. ಆದರೆ ಇದೆಲ್ಲದರ ಮೂಲಕ ಆತನಿಗೆ ಐಸಿಸ್ ನಂಟಿದೆ ಎನ್ನಲು‌ ಆಗಲ್ಲ’.

ಇದನ್ನೂ ಓದಿ: ಮಾಜಿ ಶಾಸಕನ ಕುಟುಂಬಕ್ಕೆ ಉಗ್ರರ ನಂಟು? ಬಿಎಂ ಇದಿನಬ್ಬ ಮಗನ ಮನೆ ಮೇಲೆ ಎನ್ಐಎ ದಾಳಿ

‘ಇವುಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್​ನಲ್ಲಿ ಸಿಗುತ್ತದೆ. ಕುತೂಹಲ ಇರೋ ಯಾರು ಬೇಕಾದರೂ ‌ಮೊಬೈಲ್, ಕಂಪ್ಯೂಟರ್​​ನಲ್ಲಿ ಡೌನ್ ಲೋಡ್ ಮಾಡಬಹುದು. ಹಾಗಾಗಿ ಇದನ್ನು ಇಟ್ಟುಕೊಂಡು ಐಸಿಸ್ ನಂಟನ್ನು ಸಾಬೀತು ಪಡಿಸಲು ಆಗಲ್ಲ’ ಎಂದು ಹೇಳಿದೆ.

ಈಗಾಗಲೇ ಪ್ರಕರಣ ಸಂಬಂಧ ಹಲವು ಜನರ ವಿರುದ್ದ ಎನ್​ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಅಮ್ಮರ್ ಅಬ್ದುಲ್ ರೆಹಮಾನ್ ಜೊತೆಗೆ ದಿ.ಇದಿನಬ್ಬ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಬಂಧಿಸಿರುವ ಎಸ್​ಎಐ, ಆದರೆ ಇದೀಗ ಅಮ್ಮರ್ ಅಬ್ದುಲ್ ರೆಹಮಾನ್​​ಗೆ ದೆಹಲಿ ಕೋರ್ಟ್ ಜಾಮೀನು ನೀಡಿದೆ.

ಇದನ್ನೂ ಓದಿ: ISIS Link: ಇದ್ದಿನಬ್ಬ ಪುತ್ರ ಬಿ.ಎಂ.ಭಾಷಾರ ಸೊಸೆ ಎನ್‌ಐಎ ವಶಕ್ಕೆ?

ಜನವರಿ 4 ರಂದು ಉಳ್ಳಾಲದಲ್ಲಿ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂರನ್ನು ಎನ್​ಐಎ ಬಂಧಿಸಿತ್ತು. ದೀಪ್ತಿ ಮಾರ್ಲ, ಮಾಜಿ ಶಾಸಕ ಇದಿನಬ್ಬ ಮಗ ಬಿ‌.ಎಂ.ಭಾಷಾರ ಮಗ ಅನಾಸ್ ಅಬ್ದುಲ್ ಪತ್ನಿ. ಇದ್ದಿನಬ್ಬ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ಮದುವೆಯಾಗಿದ್ದ ದೀಪ್ತಿ ಮಾರ್ಲ ಇಸ್ಲಾಂಗೆ ಮತಾಂತರಗೊಂಡಿದ್ದರು.

ಅಮ್ಮರ್ ಅಬ್ದುಲ್ ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ‌ ಮಾಡುತ್ತಿದ್ದ ಆರೋಪ ಮಾಡಿದ್ದ ಎನ್ಐಎ ದೀಪ್ತಿ ಮಾರ್ಲ ಭಾಗಿದಾರಿಕೆ ಬಗ್ಗೆ ಚಾರ್ಚ್ ಶೀಟ್ ಸಲ್ಲಿಸಿತ್ತು. ಐಸಿಸ್ ಇಸ್ಲಾಮಿಕ್ ಸ್ಟೇಟ್ ಐಡಿಯಾಳಜಿಗೆ ಪ್ರಭಾವಿತಳಾಗಿದ್ದಳು ಎಂದು ವರದಿ ಆಗಿತ್ತು. ಮಾರ್ಚ್ 5, 2021ರಲ್ಲಿ ದೆಹಲಿ ಎನ್​ಐಎ ಸ್ವಯಂಪ್ರೇರಿತ ಎಫ್​ಐಆರ್ ದಾಖಲಿಸಿತ್ತು. ಆದರೆ ದೀಪ್ತಿ ಮಾರ್ಲ ಇನ್ನೂ ಎನ್​​ಐಎ ವಶದಲ್ಲೇ ಇದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:41 pm, Thu, 16 May 24