Sign In

By signing in or creating an account, you agree with Associated Broadcasting Company's Terms & Conditions and Privacy Policy.

150ರೂ ಗಡಿ ದಾಟಿದ ಉಳ್ಳಾಗಡ್ಡಿ, ಖಾರ ಆದ್ರೂ ರೋಸ್ ಆನಿಯನ್​ಗೆ ಡಿಮ್ಯಾಂಡ್

ಚಿಕ್ಕಬಳ್ಳಾಪುರ: ಈರುಳ್ಳಿ. ಈರುಳ್ಳಿ. ಈರುಳ್ಳಿ. ಈಗ ಎಲೆಲ್ಲೂ ಈರುಳ್ಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಯಾವ್ ಮಾರ್ಕೆಟ್​ಗೆ ಹೋದ್ರು. ಯಾವ್ ಹಳ್ಳಿಗೋದ್ರು ಈರುಳ್ಳಿ ಎಲ್ಲರ ಕಣ್ಣಲ್ಲಿ ನೀರು ತರಿಸ್ತಿದೆ. ಇದ್ರಿಂದ ಸ್ಥಳೀಯವಾಗಿ ಯಾರಿಗೂ ಬೇಡವಾಗಿದ್ದ ವಿದೇಶಗಳಿಗೆ ಮಾತ್ರ ಸಿಮೀತವಾಗಿದ್ದ ರೋಸ್ ಆನಿಯನ್​ಗೂ ಬೇಡಿಕೆ ಬಂದಿದೆ. ಯಾವುದೇ ಅಡುಗೆ ಮಾಡಿ. ಯಾವುದೇ ಮಸಾಲೆ ಮಾಡಿ. ಅದಕ್ಕೆ ಮುಖ್ಯವಾಗಿ ಈರುಳ್ಳಿ ಇರಬೇಕು. ಇಲ್ಲವಾದಲ್ಲಿ ಸಾಂಬರ್​ನ ಟೇಸ್ಟ್​ ಚೇಂಜ್ ಆಗಿಬಿಡುತ್ತೆ. ಹೀಗಿರುವಾಗ ಈರುಳ್ಳಿಗೆ ಡಿಮ್ಯಾಂಡ್ ಮೇಲೆ ಡಿಮ್ಯಾಂಡ್ ಹೆಚ್ಚಾಗಿದೆ. ಅದು ಕೂಡಾ ರೆಡ್ ಬ್ಯೂಟಿ […]

150ರೂ ಗಡಿ ದಾಟಿದ ಉಳ್ಳಾಗಡ್ಡಿ, ಖಾರ ಆದ್ರೂ ರೋಸ್ ಆನಿಯನ್​ಗೆ ಡಿಮ್ಯಾಂಡ್
Follow us
ಸಾಧು ಶ್ರೀನಾಥ್​
|

Updated on:Dec 10, 2019 | 8:02 AM

ಚಿಕ್ಕಬಳ್ಳಾಪುರ: ಈರುಳ್ಳಿ. ಈರುಳ್ಳಿ. ಈರುಳ್ಳಿ. ಈಗ ಎಲೆಲ್ಲೂ ಈರುಳ್ಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಯಾವ್ ಮಾರ್ಕೆಟ್​ಗೆ ಹೋದ್ರು. ಯಾವ್ ಹಳ್ಳಿಗೋದ್ರು ಈರುಳ್ಳಿ ಎಲ್ಲರ ಕಣ್ಣಲ್ಲಿ ನೀರು ತರಿಸ್ತಿದೆ. ಇದ್ರಿಂದ ಸ್ಥಳೀಯವಾಗಿ ಯಾರಿಗೂ ಬೇಡವಾಗಿದ್ದ ವಿದೇಶಗಳಿಗೆ ಮಾತ್ರ ಸಿಮೀತವಾಗಿದ್ದ ರೋಸ್ ಆನಿಯನ್​ಗೂ ಬೇಡಿಕೆ ಬಂದಿದೆ.

ಯಾವುದೇ ಅಡುಗೆ ಮಾಡಿ. ಯಾವುದೇ ಮಸಾಲೆ ಮಾಡಿ. ಅದಕ್ಕೆ ಮುಖ್ಯವಾಗಿ ಈರುಳ್ಳಿ ಇರಬೇಕು. ಇಲ್ಲವಾದಲ್ಲಿ ಸಾಂಬರ್​ನ ಟೇಸ್ಟ್​ ಚೇಂಜ್ ಆಗಿಬಿಡುತ್ತೆ. ಹೀಗಿರುವಾಗ ಈರುಳ್ಳಿಗೆ ಡಿಮ್ಯಾಂಡ್ ಮೇಲೆ ಡಿಮ್ಯಾಂಡ್ ಹೆಚ್ಚಾಗಿದೆ. ಅದು ಕೂಡಾ ರೆಡ್ ಬ್ಯೂಟಿ ಌಪಲ್​ನ್ನೂ ಬೀಟ್ ಮಾಡಿದೆ.

ಚಿಕ್ಕಬಳ್ಳಾಪುರದ ಎ.ಪಿ.ಎಂ.ಸಿ ಮಾರುಕಟ್ಟೆಯ ಸಂತೆಯಲ್ಲಿ ವ್ಯಾಪಾರಸ್ಥರು ಫುಲ್ ಬ್ಯುಸಿಯಾಗಿದ್ದಾರೆ. ಆದ್ರೆ, ಕೆಲವರು ಈರುಳ್ಳಿಯನ್ನೇ ಮಾರಾಟ ಮಾಡ್ತಿಲ್ಲ. ಯಾಕಂದ್ರೆ, 50 ವರ್ಷಗಳಿಂದಲೂ ಈರುಳ್ಳಿ ಮಾರಾಟ ಮಾಡುತ್ತಿದ್ದ ವರ್ತಕರಿಗೆ ಒಳ್ಳೆ ಈರುಳ್ಳಿ ಸಿಗುತ್ತಿಲ್ಲ. ಗುಣಮಟ್ಟವಲ್ಲದ ಚಿಂಟೂ ಪಿಂಟು ಥರ ಈರುಳ್ಳಿ ಬರ್ತಿವೆ. ಹೀಗಿದ್ರೂ, ರೇಟ್ ಕೇಳಿದ್ರೆ ಕೆಜಿಗೆ 150 ರೂಪಾಯಿಗೂ ಹೆಚ್ಚಿದೆ. ಅದ್ರಲ್ಲೂ ಗುಣಮಟ್ಟದ ಈರುಳ್ಳಿಯೇ ಸಿಗ್ತಿಲ್ಲ. ಇದ್ರಿಂದ ಜನರಿಗೂ ಹಾಗೂ ವ್ಯಾಪಾರಸ್ಥರಿಗೂ ತೊಂದರೆ ಆಗ್ತಿದೆ.

ಈರುಳ್ಳಿ ಕೊಂಡುಕೊಳ್ಳಲು ಮಾರುಕಟ್ಟೆಗೆ ಆಗಮಿಸಿರುವ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಈರುಳ್ಳಿ ಸಿಗುತ್ತಿಲ್ಲ. ಮತ್ತೊಂದೆಡೆ ಈರುಳ್ಳಿ ರೇಟ್ 150ರ ಗಡಿ ದಾಟಿದೆ. ಇದ್ರಿಂದ ಕಡಿಮೆ ರೇಟ್​ಗೆ ಈರುಳ್ಳಿ ಸಿಗುತ್ತಾ ಅಂತಾ ಹುಡುಕಾಡಿದ್ರೆ ವಿದೇಶಗಳಿಗೆ ಸಿಮೀತವಾಗಿದ್ದ ರೋಸ್ ಆನಿಯನ್ ಕಣ್ಣಿಗೆ ಕಾಣಿಸ್ತಿದೆ.

ಗಾತ್ರದಲ್ಲಿ ಚಿಕ್ಕದಾಗಿ ಪಿಂಕ್ ಬಣ್ಣದಲ್ಲಿದೆ. ಆದ್ರೆ, ರುಚಿಯಲ್ಲಿ ಖಾರ ಖಾರ. ಹೀಗಿದ್ರೂ ರೋಸ್ ಆನಿಯನ್​ಗಳನ್ನೆ ಗ್ರಾಹಕರು ಕೊಂಡುಕೊಂಡು ಸಮಾಧಾನ ಪಡ್ತಿದ್ದಾರೆ. ಈರುಳ್ಳಿ ಯಾವುದಾದ್ರೇನು? ಅಡುಗೆಗೆ ಈರುಳ್ಳಿ ಬೇಕೇ ಬೇಕು ಅಲ್ವಾ ಎಂದು ಮಹಿಳೆಯರು ಈರುಳ್ಳಿ ಖರೀದಿಸುತ್ತಿದ್ದಾರೆ.

Published On - 7:56 am, Tue, 10 December 19