ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ತಡೆಯಲು ಹೊಸ ಪ್ಲ್ಯಾನ್‌: ಸುಳಿವು ನೀಡಿದವರಿಗೆ ಬಹುಮಾನ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 20, 2024 | 5:51 PM

ರಾಜ್ಯದಲ್ಲಿ ಭ್ರೂಣಹತ್ಯೆ ಸಂಪೂರ್ಣ ನೆಲಸಮ ಮಾಡಲು ಆರೋಗ್ಯ ಇಲಾಖೆ ಈ ಮಾಸ್ಟರ್ ಪ್ಲ್ಯಾನ್‌ ಸಿದ್ದವಾಗಿದ್ದು, ಆ ಮೂಲಕ ಭ್ರೂಣಹತ್ಯೆ ಕಿರಾತಕರ ಮಟ್ಟಹಾಕಲು ಹೊಸ ತಂತ್ರರೂಪಿಸಲಾಗಿದೆ. ಭ್ರೂಣಹತ್ಯ ಹಾಗೂ ಪತ್ತೆ ಯಾವುದೇ ಭಾಗದಲ್ಲಿ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಸ್ಪಷ್ಟವಾಗಿ ಆರೋಗ್ಯ ಇಲಾಖೆ ಜಸ್ಟ್ ಮಾಹಿತಿ ನೀಡಿದರೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು.

ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ತಡೆಯಲು ಹೊಸ ಪ್ಲ್ಯಾನ್‌: ಸುಳಿವು ನೀಡಿದವರಿಗೆ ಬಹುಮಾನ
ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ತಡೆಯಲು ಹೊಸ ಪ್ಲ್ಯಾನ್‌: ಸುಳಿವು ನೀಡಿದವರಿಗೆ ಬಹುಮಾನ
Follow us on

ಬೆಂಗಳೂರು, ಜೂನ್​ 20: ರಾಜ್ಯದಲ್ಲಿ ಭ್ರೂಣ ಹತ್ಯೆ (Feticide) ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಹೆಣ್ಣು ಭ್ರೂಣ ಪತ್ತೆಯಾಗುತ್ತಿದ್ದಂತೆ ಗರ್ಭಪಾತ ಮಾಡಲಾಗುತ್ತಿದೆ. ಹೀಗಾಗಿ ಸದ್ಯ ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ತಡೆಯಲು ಆರೋಗ್ಯ ಇಲಾಖೆ (Health Department) ಮುಂದಾಗಿದ್ದು, ಹೊಸ ಪ್ಲ್ಯಾನ್‌​ವೊಂದನ್ನು ಮಾಡಿದೆ. ಭ್ರೂಣಲಿಂಗ ಪತ್ತೆ ಹಾಗೂ ಹತ್ಯ ನಡೆಯುತ್ತಿದ್ದರೆ ಈ ಬಗ್ಗೆ ಸಾರ್ವಜನಿಕರು ಇಲಾಖೆಗೆ ಸೂಳಿವು ನೀಡಿದರೆ ಬರೋಬ್ಬರಿ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ಭ್ರೂಣಹತ್ಯೆ ನೆಲಸಮ ಮಾಡಲು ಆರೋಗ್ಯ ಇಲಾಖೆ ಮಾಸ್ಟರ್ ಪ್ಲ್ಯಾನ್‌

ರಾಜ್ಯದಲ್ಲಿ ಭ್ರೂಣಹತ್ಯೆ ಸಂಪೂರ್ಣ ನೆಲಸಮ ಮಾಡಲು ಆರೋಗ್ಯ ಇಲಾಖೆ ಈ ಮಾಸ್ಟರ್ ಪ್ಲ್ಯಾನ್‌ ಸಿದ್ದವಾಗಿದ್ದು, ಆ ಮೂಲಕ ಭ್ರೂಣಹತ್ಯೆ ಕಿರಾತಕರ ಮಟ್ಟಹಾಕಲು ಹೊಸ ತಂತ್ರರೂಪಿಸಲಾಗಿದೆ. ಭ್ರೂಣಹತ್ಯ ಹಾಗೂ ಪತ್ತೆ ಯಾವುದೇ ಭಾಗದಲ್ಲಿ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಸ್ಪಷ್ಟವಾಗಿ ಆರೋಗ್ಯ ಇಲಾಖೆ ಜಸ್ಟ್ ಮಾಹಿತಿ ನೀಡಿದರೆ ಸಾಕು.

ಇದನ್ನೂ ಓದಿ: ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಮಹಾರಾಷ್ಟ್ರ ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಫುಲ್ ಅಲರ್ಟ್

ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ಹಣ ನೀಡುವುದರೊಂದಿಗೆ ಮಾಹಿತಿ ನೀಡಿದವರ ಮಾಹಿತಿಯನ್ನ ಕೂಡ ಗೌಪ್ಯವಾಗಿ ಇಡಲಾಗುತ್ತದೆ. ಈ ಹಿಂದೆ ಗುಪ್ತಕಾರ್ಯಚರಣೆಗೆ 50 ಸಾವಿರ ರೂ. ಹಣ ನೀಡಲಾಗುತ್ತಿತ್ತು. ಈಗ ಈ ಮೊತ್ತವನ್ನ ಒಂದು ಲಕ್ಷಕ್ಕೆ ಏರಿಕೆ ಮಾಡಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್​ ಸುತ್ತೋಲೆ ಹೊರಡಿಸಿದ್ದಾರೆ.

ಈ ಹಿಂದೆ ಕೂಡ ಭ್ರೂಣಹತ್ಯೆ ಕರ್ಮಕಾಂಡವನ್ನ ಮಟ್ಟಹಾಕಲು, ಜನರನ್ನ ಬಳಸಿಕೊಳ್ಳಲು ಸರ್ಕಾರ ಮುಂದಾಗಿತ್ತು. ಭ್ರೂಣಹತ್ಯೆ ಅಥವಾ ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡುವವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಮಾಹಿತಿ ತಿಳಿಸುವವರ ಬಗ್ಗೆ ಗೌಪ್ಯತೆ ಕಾಪಾಡ್ತೀವಿ. ಹೆಲ್ಪ್​​ಲೈನ್​ ಮೂಲಕವೇ ಮಾಹಿತಿ ನೀಡಬಹುದು ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು.

ಭ್ರೂಣ ಹತ್ಯೆ ಮಹಾಪಾಪ. ಹೀಗಾಗೇ ಭ್ರೂಣ ಲಿಂಗ ಪತ್ತೆ ಮಾಡುವುದನ್ನು ನಿಷೇಧ ಮಾಡಲಾಗಿದೆ. ಆದರೆ ಇತ್ತೀಚೆಗೆ ರಾಜ್ಯದಲ್ಲಿ ಕೆಲವರು ಎಲ್ಲರ ಕಣ್ಣಿಗೆ ಮಣ್ಣೆರಚಿ ಹತ್ರ ಹತ್ರ ಸಾವಿರ ಹೆಣ್ಣು ಭ್ರೂಣ ಹತ್ಯೆ ಮಾಡಿದ್ದ ಭಯಾನಕ ಮತ್ತು ಆಘಾತಕಾರಿ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.

ಇದನ್ನೂ ಓದಿ: ಮಂಡ್ಯ: 25-30 ಸಾವಿರಕ್ಕೆ ಗರ್ಭಪಾತ ಮಾಡುತಿದ್ವಿ, ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಬಂಧಿತ ನರ್ಸ್

ಎರಡು ವರ್ಷದಲ್ಲಿ ಸುಮಾರು 900 ಹೆಣ್ಣು ಭ್ರೂಣ ಹತ್ಯೆ ಮಾಡಿದ್ದ ಗ್ಯಾಂಗ್​ವೊಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಕಳೆದ ಅಕ್ಟೋಬರ್​ನಲ್ಲಿ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಹೆಣ್ಣು ಭ್ರೂಣ ಪತ್ತೆ ದಂಧೆ ಮಾಡ್ತಿದ್ದ ಶಿವಲಿಂಗೇಗೌಡ, ನಯನ್ ಕುಮಾರ್, ನವೀನ್ ಕುಮಾರ್, ವಿರೇಶ್ ಅನ್ನೋ ನಾಲ್ವರನ್ನ ಬಂಧಿಸಲಾಗಿತ್ತು.

ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬಳಿ ಇರೋ ಆಲೆಮನೆಯಲ್ಲಿ ಕೂಡ ಭ್ರೂಣ ಲಿಂಗ ಪತ್ತೆ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು.  ಇನ್ನು ಇತ್ತೀಚೆಗೆ ಬೆಳಗಾವಿಯಲ್ಲಿ ಕೂಡ ಮಕ್ಕಳ ಮಾರಾಟ ಮತ್ತು ಭ್ರೂಣ ಹತ್ಯೆ ಮಾಡುತ್ತಿದ್ದ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.