ಪ್ರತ್ಯೇಕ ಘಟನೆ: ಧಾರವಾಡ, ಶಿವಮೊಗ್ಗದಲ್ಲಿ ಅಪಘಾತ; ಐವರ ಸಾವು

ಪ್ರತ್ಯೇಕ ಘಟನೆಯಲ್ಲಿ ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಐವರು ಗಾಯಗೊಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಬಸ್​ ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿದೆ.

ಪ್ರತ್ಯೇಕ ಘಟನೆ: ಧಾರವಾಡ, ಶಿವಮೊಗ್ಗದಲ್ಲಿ ಅಪಘಾತ; ಐವರ ಸಾವು
ಅಪಘಾತ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ವಿವೇಕ ಬಿರಾದಾರ

Updated on:Dec 23, 2024 | 12:25 PM

ಧಾರವಾಡ, ಡಿಸೆಂಬರ್​ 23: ಧಾರವಾಡ (Dharwad) ಜಿಲ್ಲೆಯ ಅಳ್ನಾವರ (Alnavara) ತಾಲೂಕಿನ ಕಡಬಗಟ್ಟಿ ಬಳಿಯ ಧಾರವಾಡ-ಅಳ್ನಾವರ-ಗೋವಾ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಐಶರ್ ವಾಹನದಲ್ಲಿದ್ದ ಶಿರಸಂಗಿಯ ಹನುಮಂತಪ್ಪ ಮಲ್ಲಾಡ (45), ಮಹಾಂತೇಶ್ ಚವ್ಹಾಣ್ (40), ಮಹದೇವ ಹಾಲೊಳ್ಳಿ (40) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಐವರಿಗೆ ಗಂಭೀರ ಗಾಯಾವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ರೈತರಾದ ಹನುಮಂತಪ್ಪ ಮಲ್ಲಾಡ, ಮಹಾಂತೇಶ್ ಚವ್ಹಾಣ್ ಮತ್ತು ಮಹದೇವ ಹಾಲೊಳ್ಳಿ ಐಶರ್ ವಾಹನದಲ್ಲಿ ಮೇವಿನ ಹೊಟ್ಟು ತುಂಬಿಕೊಂಡು ಗೋವಾದ ಕಡೆಗೆ ಹೊರಟಿದ್ದರು. ಗೋವಾದಲ್ಲಿ ಮೇವಿನ ಹೊಟ್ಟಿಗೆ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಹೊಟ್ಟು ಮಾರಾಟ ಮಾರಲು ಧಾರವಾಡ ಕಡೆಯಿಂದ ಗೋವಾಗೆ ತೆರಳುತ್ತಿದ್ದರು.

ಎದುರಿಗೆ, ಗೋವಾದಿಂದ ಚಿತ್ರದುರ್ಗದ ಕಡೆ ಟಿಟಿ ವಾಹನ ಬರುತ್ತಿತ್ತು. ಅಳ್ನಾವರ ತಾಲೂಕಿನ ಕಡಬಗಟ್ಟಿ ಬಳಿ ಐಶರ್​ ಮತ್ತು ಟಿಟಿ ವಾಹನ ಮುಖಾಮುಖಿ ಡಿಕ್ಕಿಯಾಗಿವೆ. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಉದ್ಯಮಿ ಸೇರಿ 6 ಜನ ಅಪ್ಪಚ್ಚಿ: ಕಾರಿನ ಮೇಲೆ ಲಾರಿ ಬಿದ್ದಿದ್ದೇಗೆ? ಘಟನೆಗೆ ಕಾರಣವೇನು?

ಶಿವಮೊಗ್ಗ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್​ನಲ್ಲಿ ರವಿವಾರ (ಡಿಸೆಂಬರ್​ 22) ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರ ಮೃತಪಟ್ಟಿದ್ದಾರೆ. ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವಿಗೀಡಾಗಿದ್ದಾರೆ. ಮೃತ ಯುವಕರ ಗುರುತು ಇನ್ನೂ ಪತ್ತೆಯಾಗಿಲ್ಲ. ಪೂರ್ವ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತೀಚಿಗೆ ನೆಲಮಂಗಲದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಆರು ಜನ ಮೃತಪಟ್ಟಿದ್ದರು. ಬೆಂಗಳೂರಿನ ಕಡೆಗೆ ಬರುತ್ತಿದ್ದ ವೋಲ್ವೋ ಕಾರಿನ ಮೇಲೆ ಸುಮಾರು 40 ಟನ್ ತೂಕದ​ ಕಂಟೇನರ್​ ಬಿದ್ದ ಪರಿಣಾ ಕಾರು ಅಪ್ಪಚ್ಚಿಯಾಗಿತ್ತು. ಕಾರಿನಲ್ಲಿದ್ದ ಆರೂ ಜನ ಮೃತಪಟ್ಟಿದ್ದು.

ಈ ಘಟನೆ ಮಾಸುವ ಮುನ್ನವೇ ಮಂಡ್ಯ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟುದ್ದರು. ವಿದ್ಯಾರ್ಥಿಗಳು ತಲಕಾಡಿಗೆ ಕಾರಿನಲ್ಲಿ ಹೋಗುತ್ತಿದ್ದರು. ಹೆದ್ದಾರಿಯಲ್ಲಿ ಎದುರಿಗೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಓವರ್​ಟೆಕ್​ ಮಾಡಿ ಹೋಗಿ ಕಾರು ಲಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಓರ್ವ ಗಂಭೀರವಾಗಿ ಗಾಯಗೊಂಡಿದ್ದನು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:24 pm, Mon, 23 December 24

ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು