ಧಾರವಾಡ, ನ.12: ದೀಪಾವಳಿ ಸಮಯದಲ್ಲಿ ಉತ್ತರ ಕರ್ನಾಟಕ ಭಾಗಗಳಲ್ಲಿ ಜೂಜು ಆಡುವ ಸಂಪ್ರದಾಯವಿತ್ತು. ಬಳಿಕ ಇದನ್ನು ಸಂಪೂರ್ಣ ನಿಷೇಧಿಸಲಾಯಿತು. ಆದರೆ, ಅಲ್ಲಲ್ಲಿ ಕೆಲವೊಂದು ಪ್ರಕರಣಗಳು ಕಂಡು ಬರುತ್ತವೆ. ಅದರಂತೆ ಇಂದು ಧಾರವಾಡ(Dharwad) ತಾಲೂಕಿನ 3 ಜೂಜು(Gambling) ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ಧಾರವಾಡ ತಾಲೂಕಿನ ಗರಗದಲ್ಲಿ ನಡೆದಿದೆ. ಇನ್ನು ಈ ವೇಳೆ ಪೊಲೀಸರಿಂದ ಒಟ್ಟು 20 ಜೂಜುಕೋರರನ್ನು ಬಂಧಿಸಲಾಗಿದ್ದು, 24 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಶಿಂಗನಳ್ಳಿಯಲ್ಲಿ ನಾಲ್ವರು, ಕೊಟಬಾಗಿ ಹಾಗೂ ಲಕಮಾಪುರ ಗ್ರಾಮದಲ್ಲಿ ತಲಾ 8 ಜೂಜುಕೋರರನ್ನು ಬಂಧಿತರು, ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೋಲಾರ: ಇತ್ತೀಚೆಗೆ ಜಿಲ್ಲೆಯಲ್ಲಿ ಕೊಲೆ, ಅಪರಾಧ ಪ್ರಕರಣ ಹೆಚ್ಚಳವಾಗುತ್ತಿದ್ದು, ಕೆಲ ದಿನಗಳ ಹಿಂದೆ ಅಪ್ರಾಪ್ತ ಬಾಲಕನನ್ನು ಹಿಂಸೆ ಕೊಟ್ಟು ಆತನ ಸ್ನೇಹಿತರೆ ಹತ್ಯೆ ಮಾಡಿದ್ದರು. ಇಂತಹ ಚಟುವಟಿಕೆಗಳಿಗೆ ಬ್ರೆಕ್ ಹಾಕುವ ಹಿನ್ನೆಲೆ ಇಂದು ಜಿಲ್ಲೆಯ ಕೆಜಿಎಫ್ ನಗರದ ಡಿಎಆರ್ ಮೈದಾನದಲ್ಲಿ ರೌಡಿಗಳ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಹೌದು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ರೌಡಿಗಳಿಗೆ ಕೋಲಾರ ಎಸ್ಪಿ ಶಾಂತರಾಜು, ಡಿವೈಎಸ್ಪಿ ಪಾಂಡುರಂಗ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಕಾರಿನಲ್ಲಿದ್ದ ಚಿನ್ನಾಭರಣವನ್ನು ತೃತೀಯಲಿಂಗಿಗಳು ಕಳವು ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಬಳಿ ನಡೆದಿದೆ.
ಬೇಗೂರಿನ ಮಂಜೇಶ್ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ಅದರಲ್ಲಿದ್ದ ಬರೊಬ್ಬರಿ 4 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ. ಸಹನಾ, ಮಂಜುಳಾ, ಖುಷಿ, ರಿಷಿಕಾ ಎಂಬುವವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರಾತ್ರಿ 11.30 ರಲ್ಲಿ ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿದ್ದಾಗ ಈ ಘಟನೆ ನಡೆದಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ