ಹುಬ್ಬಳ್ಳಿ ಕಿಮ್ಸ್ನಲ್ಲಿ ರೋಗಿಯೊಬ್ಬನ ಹುಚ್ಚಾಟ; ಬೆಡ್ಗೆ ಬೆಂಕಿ ಹಚ್ಚಿಕೊಳ್ಳಲು ಯತ್ನ
ಹುಬ್ಬಳ್ಳಿ ಕಿಮ್ಸ್ ಒಂದಿಲ್ಲೊಂದು ಸುದ್ದಿಯಲ್ಲಿ ಇರುತ್ತದೆ. ಅದರಂತೆ ಇದೀಗ ಕಿಮ್ಸ್ನಲ್ಲಿ ರೋಗಿಯೊಬ್ಬ ಬೆಡ್ಗೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ರಕ್ಷಣೆಗೆ ಬಂದ ಭದ್ರತಾ ಸಿಬ್ಬಂದಿ ಯಲ್ಲಪ್ಪ ಅಣ್ಣಿಗೇರಿ ಎಂಬುವವರಿಗೂ ಕತ್ತರಿಯಿಂದ ಇರಿದಿದ್ದಾನೆ. ಇತಮ ಹುಚ್ಚಾಟಕ್ಕೆ ರೋಸಿ ಹೋದ ಸಿಬ್ಬಂದಿಗಳು, ಆತನನ್ನು ಕಟ್ಟಿ ಹಾಕಿದ್ದಾರೆ.
ಹುಬ್ಬಳ್ಳಿ, ಫೆ.22: ಹುಬ್ಬಳ್ಳಿ ಕಿಮ್ಸ್(Hubli Kims) ಆಸ್ಪತ್ರೆಯಲ್ಲಿ ರೋಗಿಯೊಬ್ಬ ಬೆಡ್ಗೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ರಕ್ಷಣೆಗೆ ಬಂದ ಭದ್ರತಾ ಸಿಬ್ಬಂದಿ ಯಲ್ಲಪ್ಪ ಅಣ್ಣಿಗೇರಿ ಎಂಬುವವರಿಗೂ ಕತ್ತರಿಯಿಂದ ಇರಿದಿದ್ದಾನೆ. ಇನ್ನು ಇತ ಕ್ರೇನ್ನಿಂದ ಬಿದ್ದು ಗಾಯಗೊಂಡು ಕಿಮ್ಸ್ ಎಮರ್ಜೆನ್ಸಿ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇತನ ಹುಚ್ಚಾಟದಿಂದ ಕಿಮ್ಸ್ ಸಿಬ್ಬಂದಿ, ರೋಗಿಯನ್ನು ಬೆಡ್ಗೆ ಕಟ್ಟಿಹಾಕಿದ್ದಾರೆ.
ಬೆಂಗಳೂರಿನಲ್ಲಿ ಹಫ್ತಾ ವಸೂಲಿಗಾಗಿ ಪುಂಡರಿಂದ ವೃದ್ಧನಿಗೆ ಕಿರುಕುಳ?
ಬೆಂಗಳೂರು: ಹಫ್ತಾ ವಸೂಲಿಗಾಗಿ ಪುಂಡರು ವೃದ್ಧನಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಡಿ.ಜೆ.ಹಳ್ಳಿಯ ಪ್ರಿಯಾ ನಗರದಲ್ಲಿ ನಡೆದಿದೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಹಫ್ತಾ ಕೊಡದಿದ್ದರೆ ನಿನ್ನ ಮೇಲೆ ಹಲ್ಲೆ ನಡೆಸುವುದಾಗಿ ವೃದ್ಧನಿಗೆ ಬೆದರಿಕೆವೊಡ್ಡಿದ್ದಾರೆ. ವೃದ್ಧನಿಗೆ ಬೆದರಿಕೆ ಹಾಕುತ್ತಿರುವ ಕಿಡಿಗೇಡಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಿಯಾನಗರದ ಮುಖ್ಯರಸ್ತೆಯ ರಿಜ್ವಾನ್ ಮೆಡಿಕಲ್ ಶಾಪ್ನಲ್ಲಿ ಘಟನೆ ನಡೆದಿದೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ಕಿಮ್ಸ್ನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಸಾವು ಆರೋಪ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಕಿಡಿಗೇಡಿಗಳಿಂದ ಹುಲ್ಲಿನ ಬಣವೆಗೆ ಬೆಂಕಿ; ಲಕ್ಷಾಂತರ ರೂ. ನಷ್ಟ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಮಾವಿನಕುಂಟೆ ಗ್ರಾಮದಲ್ಲಿ ಕಿಡಿಗೇಡಿಗಳು ಹುಲ್ಲಿನ ಬಣವೆಗೆ ಬೆಂಕಿ ಹಾಕಿದ ಘಟನೆ ನಡೆದಿದೆ. ರೈತ ಶ್ರೀನಿವಾಸ್ ಎಂಬುವವರಿಗೆ ಬಣವೆ ಇದಾಗಿದ್ದು, ಬರೊಬ್ಬರಿ 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಣವೆ ಸಂಪೂರ್ಣ ಭಸ್ಮವಾಗಿದೆ. ಇನ್ನು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬಣವೆ ಬೆಂಕಿಹಾಹುತಿಯಾಗಿದ್ದು, ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ