ತುಳಸಿ ಗೌಡ, ಅಬ್ದುಲ್‌ ಖಾದರ್​ ನಡಕಟ್ಟಿನ್​​ಗೆ ಒಲಿದ ಗೌರವ ಡಾಕ್ಟರೇಟ್

|

Updated on: Jun 10, 2023 | 4:31 PM

ಪದ್ಮಶ್ರೀ ಪುರಸ್ಕೃತರಾದ ವೃಕ್ಷಮಾತೆ ತುಳಸಿ ಗೌಡ ಮತ್ತು ಕೃಷಿ ಉಪಕರಣಗಳ ಸಂಶೋಧಕ ಅಬ್ದುಲ್‌ ಖಾದರ್ ನಡಕಟ್ಟಿನ್​ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​ ಘೋಷಣೆ ಮಾಡಿದೆ.

ತುಳಸಿ ಗೌಡ, ಅಬ್ದುಲ್‌ ಖಾದರ್​ ನಡಕಟ್ಟಿನ್​​ಗೆ ಒಲಿದ ಗೌರವ ಡಾಕ್ಟರೇಟ್
ತುಳಸಿ ಗೌಡ, ಅಬ್ದುಲ್‌ ಖಾದರ್ ನಡಕಟ್ಟಿನ್
Follow us on

ಧಾರವಾಡ: ಪದ್ಮಶ್ರೀ ಪುರಸ್ಕೃತರಾದ ವೃಕ್ಷಮಾತೆ ತುಳಸಿ ಗೌಡ (Tulsi Gowda) ಮತ್ತು ಕೃಷಿ ಉಪಕರಣಗಳ ಸಂಶೋಧಕ ಅಬ್ದುಲ್‌ ಖಾದರ್ ನಡಕಟ್ಟಿನ್ (Abdul Khader Nadakattin)​ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​ ಘೋಷಣೆ ಮಾಡಿದೆ. ಮಾ. 12ರಂದು ನಡೆಯಲಿರುವ 36ನೇ ಘಟಿಕೋತ್ಸವ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್​ ಅವರು ಗೌರವ ಡಾಕ್ಟರೇಟ್​ ಪ್ರದಾನ ಮಾಡಲಿದ್ದಾರೆ.

ಲಕ್ಷಾಂತರ ಗಿಡಗಳನ್ನು ನೆಟ್ಟ ವೃಕ್ಷಮಾತೆ ತುಳಸಿ ಗೌಡ 

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಪುಟ್ಟ ಗ್ರಾಮ ಹೊನ್ನಳ್ಳಿಯ ತುಳಸಿ ಗೌಡ ಅವರು ವರ್ಷಕ್ಕೆ 30 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು, ಪೋಷಿಸುವ ಮೂಲಕ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲೊಂದಾದ ಪದ್ಮಶ್ರೀಯನ್ನು ಸಹ ಪಡೆದುಕೊಂಡಿದ್ದಾರೆ. ಇವರು ಹಾಲಕ್ಕಿ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಭಾಷಣ; ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್​ನಲ್ಲಿ ರಿಲೀಫ್

ಸಾಲುಮರದ ತಿಮ್ಮಕ್ಕನವರಂತೆ ಇವರೂ ಕೂಡ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅವರ ಈ ಪರಿಸರ ಪ್ರೇಮ ಮತ್ತು ಅದರ ಬಗೆಗಿನ ನಿಷ್ಠೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್​ ನೀಡಲು ಕೃಷಿ ವಿಶ್ವವಿದ್ಯಾಲಯ ಮುಂದಾಗಿದೆ.

ಇದನ್ನೂ ಓದಿ: ಒನ್ ಟು ತ್ರಿಬಲ್ ವಿದ್ಯುತ್ ಬಿಲ್ ಹೆಚ್ಚಳ: ವಿವಿಧ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಕ್ರೋಶ

ಕೃಷಿ ಉಪಕರಣಗಳ ಸಂಶೋಧಕ: ಅಬ್ದುಲ್‌ ಖಾದರ್ ನಡಕಟ್ಟಿನ್

ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ನಿವಾಸಿ ಅಬ್ದುಲ್ ಖಾದರ್ ನಡಕಟ್ಟಿನ್ ಕೃಷಿ ಉಪಕರಣಗಳ ಸಂಶೋಧಕರಾಗಿದ್ದಾರೆ.​​ ಬಿತ್ತನೆ ಕೂರಿಗೆ ಸಂಶೋಧನೆ ಮಾಡಿದ್ದ ಅಬ್ದುಲ್ ಖಾದರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ದೊರೆತಿದೆ. ನಡಕಟ್ಟಿನ್ ಕೂರಿಗೆ ಎಂದೇ ಖ್ಯಾತಿ ಪಡೆದಿರುವ ಇವರು, ಕೂರಿಗೆಯನ್ನು ಮಾರುಕಟ್ಟೆಗೆ ಪರಿಚಯಿಸಿರುವ ರೈತ. ಬಿತ್ತನೆ ಸಮಸ್ಯೆ ಕಂಡುಕೊಂಡು ಅನುಕೂಲಕರ ಕೂರಿಗೆ ಸಂಶೋಧನೆ ಮಾಡಿದ್ದಾರೆ. ಅಲ್ಲದೇ ವಿವಿಧ ಕೃಷಿ ಸಲಕರಣೆಗಳ ಆವಿಷ್ಕಾರ ಮಾಡಿದ್ದಾರೆ. ಇವರನ್ನು ಕೃಷಿ ವಿಜ್ಞಾನಿ ಎಂದು ಕರೆಯುತ್ತಾರೆ. ಇವರ ಅಮೂಲ್ಯ ಸಾಧನೆಗೆ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​ ನೀಡುವ ಮೂಲಕ ಗೌರವಿಸುತ್ತಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.