ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ್ ಗುರೂಜಿಯನ್ನು (Chandrashekhar Guruji Murder) ಚಾಕುವಿನಿಂದ ಇರಿದು ಮಂಗಳವಾರ (ಜುಲೈ 5) ಹತ್ಯೆ ಮಾಡಲಾಗಿದೆ. ನಗರದ ಖಾಸಗಿ ಹೊಟೆಲ್ನಲ್ಲಿ ಘಟನೆ ನಡೆದಿದೆ. ಇಂದು (ಜುಲೈ 7) ನಗರದ ಸುಳ್ಳಾ ರಸ್ತೆಯ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅಂತಿಮ ದರ್ಶನದ ಬಳಿಕ ವೀರಶೈವ ಲಿಂಗಾಯತ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಲಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಶವಾಗಾರದಿಂದ ಸುಳ್ಳಾ ಗ್ರಾಮದತ್ತ ಗೂರುಜಿ ಪಾರ್ಥಿವ ಶರೀರ ರವಾನೆ ಮಾಡಲಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಸುಳ್ಳಾ ಗ್ರಾಮದ ಕಡೆ ಮೃತ ದೇಹ ರವಾನೆಯಾಗಲಿದೆ. ಶವಾಗಾರದ ಬಳಿ ಪೂಜೆಗೆ ಅರ್ಚಕರು ಸಿದ್ದತೆ ಮಾಡಿಕೊಂಡಿದ್ದು, ಪೂಜೆ ಮಾಡಿದ ಬಳಿಕ ಪಾರ್ಥಿವ ಶರೀರ ವಾಹನದಲ್ಲಿ ಸುಳ್ಳಾ ಗ್ರಾಮಕ್ಕೆ ರವಾನೆ ಮಾಡಲಿದ್ದಾರೆ. ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಆಗಮಿಸುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜನರಿಗೆ ಅನ್ನ ಹಾಕ್ತಿದ್ದಿಯಲ್ಲೋ ಯಪ್ಪಾ ಅಂತಾ ಮಹಿಳೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಎಲ್ಲಿದೀಯಪ್ಪಾ ನೀನು ಅಂತಾ ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಗುರೂಜಿ ಮರಣೋತ್ತರ ಪರೀಕ್ಷೆ ಮಾಡಿದ್ದು, ಚಂದ್ರಶೇಖರ ಗುರೂಜಿಯ ಕುತ್ತಿಗೆಗೆ 2-3 ಇಂಚಿನಷ್ಟು ಚಾಕುವಿನಿಂದ ಇರಿಯಲಾಗಿದೆ. ದೇಹದಲ್ಲಿ 42 ಕಡೆ ಚಾಕುವಿನಿಂದ ಇರಿದ ಗಾಯಗಳು ಪತ್ತೆಯಾಗಿವೆ. ಕುತ್ತಿಗೆ ಭಾಗದಲ್ಲಿ ಎರಡು ಕಡೆ ಇರಿದಿದ್ದರಿಂದ ಹೆಚ್ಚು ರಕ್ತಸ್ರಾವವಾಗಿದೆ. ಸಹೋದರನ ನೆನೆದು ನಿರಂತರವಾಗಿ ಅಕ್ಕ ಶಾಂತಾ ಕಣ್ಣೀರಿಡುತ್ತಿದ್ದಾರೆ. ಅವರೊಂದಿಗೆ ಒಡನಾಟ ನೆನೆದು ಅಕ್ಕ ಶಾಂತಾ ಗೋಳಾಡುತ್ತಿದ್ದಾರೆ.
ಇದನ್ನೂ ಓದಿ: ಅನುಶ್ರೀ ಡ್ರಗ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಕಮೀಷನರ್ ತರಾಟೆ!
Published On - 3:01 pm, Wed, 6 July 22